ಎಚ್. ಲಕ್ಷ್ಮೀನಾರಾಯಣಸ್ವಾಮಿ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ

 

2017 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಎಚ್ ಲಕ್ಷ್ಮೀನಾರಾಯಣಸ್ವಾಮಿ ಅವರ ‘ತೊಗಲ ಚೀಲದ ಕರ್ಣ’ ಎಂಬ ಖಂಡಕಾವ್ಯ ಸಂಕಲನದ ಹಸ್ತಪ್ರತಿಗೆ ದೊರೆತಿದೆ.

ಕವಿಗಳಾದ ಲಲಿತಾ ಸಿದ್ದಬಸವಯ್ಯ ಹಾಗೂ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು.

ಪ್ರಶಸ್ತಿ ವಿಜೇತ ಕೃತಿಯನ್ನು ಗದುಗಿನ ಲಡಾಯಿ ಪ್ರಕಾಶನ ಪ್ರಕಟಿಸುತ್ತಿದ್ದು, ಈ ಪುರಸ್ಕಾರವು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ.


1987 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಯವರು ಬೆಂಗಳೂರು ವಿ.ವಿ ಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಈಗ ಅಲ್ಲಿಯೇ ಹಿರಿಯ ಸಂಶೋಧನಾ ವಿದ್ಯಾರ್ಥಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈಗಾಗಲೇ ‘ಗೆಳತಿ ಮತ್ತೊಮ್ಮೆ ಯೋಚಿಸು’ ‘ಮುಟ್ಟಿನ ನೆತ್ತರಲ್ಲಿ’ ‘ಉರಿವ ಕೆಂಡದ ಸೆರಗು’ ಕವನ ಸಂಕಲನಗಳೂ, ‘ಜಾಲಿಮರದ ಜೋಳಿಗೆಯಲ್ಲಿ’ ಎಂಬ ಖಂಡಕಾವ್ಯ ಕೃತಿಯೂ ಹೊರಬಂದಿದ್ದು, ಅವರ ‘ತೊಗಲ ಚೀಲದ ಕರ್ಣ’ ಕೃತಿಗೆ 2017 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಲಭಿಸಿದೆ.

‘ಬಹುಪರಾಕಿನ ಸಂತೆಯೊಳಗೆ’ ವಿಮರ್ಶಾ ಕೃತಿ ಹಾಗೂ ಡಾ. ಎಸ್ ಎನ್ ಲಕ್ಷ್ಮೀನಾರಾಯಣ ಭಟ್ಟರ ಕುರಿತಾದ ಕಿರು ಹೊತ್ತಿಗೆಯನ್ನು ಪ್ರಕಟಿಸಿದ್ದಾರೆ. ಬೆಂಗಳೂರು ಸಾರಿಗೆ ಸಂಸ್ಥೆ ನೀಡುವ ಅರಳು ಸಾಹಿತ್ಯ ಪ್ರಶಸ್ತಿ, ದಲಿತ ಪುಸ್ತಕ ಪ್ರಶಸ್ತಿ ಹಾಗೂ ಮುಳ್ಳೂರು ನಾಗರಾಜು ಕಾವ್ಯ ಪ್ರಶಸ್ತಿಗಳು ಇವರ ಕೃತಿಗಳಿಗೆ ಸಂದಿವೆ.

Leave a Reply