ಶ್ವೇತ ವರ್ಣ ಅವಳದಲ್ಲ..

ಅಶೋಕ್ ತರದಲೆ 

ಶ್ವೇತ ವರ್ಣ ಅವಳದಲ್ಲ
ರೇಷ್ಮೆಯ ಕೇಶ ಅವಳಗಿಲ್ಲ
ಕಂಗಳವು ಮೀನಿನಂತಿಲ್ಲ
ತುಟಿಗಳವು ಗುಲಾಬಿಯ ಎಸಳಲ್ಲ
ಅದರಲ್ಲಿ ಜೇನಿಲ್ಲ
ಮೂಗದು ನೀಳವಿಲ್ಲ
ಹುಬ್ಬವು ಪುಷ್ಪಾವರಣವಲ್ಲ
ದೇಹವದು ಸುಖಕ್ಕೆ ಹೇಳಿ ಮಾಡಿಸದ್ದಲ್ಲ
ಗಂಡಸಿನ ಮಾನದಂಡಗಳನ್ನು
ಪೂರೈಸುವುದಿಲ್ಲ
ಬಳ್ಳಿಯಂತ ಸೊಂಟ ಅವಳಿಗಿಲ್ಲ
ಬೆಕ್ಕಿನ ನಡಿಗೆ ಬರುವುದಿಲ್ಲ
ಆದರೂ ಅವಳ ಪ್ರೀತಿಯದು
ಒಂದೇಯಲ್ಲ
ಶರೀರದ ಅಳತೆ-ಮಾಪಕಗಳು
ಅದಕೆ ಬೇಕಿಲ್ಲ

ಮನಸದು ಅವಳದು ಕೂಡ ನಿರಾಕಾರ

ಅವಳ ಮೊಲೆಯಲ್ಲೂ ಬರುವುದು ಹಾಲು

ಅದು ಹಾಲಾಹಲವಲ್ಲ

ಅದೇ ಅಸ್ಥಿ- ಮೂಳೆ- ಮಜ್ಜೆ

ಮೇಲೆ ಹೊದ್ದು ಕೊಂಡ ಹೊದಿಕೆ ಮಾತ್ರ ಬೇರೆ

ಏಕೆ ಬೇಧ ಭಾವ ಇಂದಲ್ಲ ನಾಳೆ ಮುದುಡಿ

ಸುಕ್ಕುಗಟ್ಟುವ ಹೊದಿಕೆಯಲ್ಲಿ

ಕೊನೆಗುಳಿಯುವುದು ಕೊಳೆತುಹೋಗುವ ಕಳೇಬರ ಮಾತ್ರ.

1 Response

  1. Kotresh Akki says:

    ಓದುಗನ ಆವರಿಸಿಕೊಳ್ಳುತ್ತದೆ ನಿಮ್ಮ ಕವಿತೆ

Leave a Reply

%d bloggers like this: