ಮೇಲಿನ ಕಾರಣದಿಂದ ಟಿಕೆಟ್ ಅನ್ನು ಆನ್ ಲೈನ್ ನಲ್ಲಿ ಮಾರುತ್ತಿಲ್ಲ!

ಕರನಿರಾಕರಣೆ ಸತ್ಯಾಗ್ರಹದ

ಸಾಂಸ್ಕೃತಿಕ ಚಳುವಳಿ – “ತಾಯವ್ವ”

ನಿಮೆಗೆಲ್ಲ ತಿಳಿದಿರುವ ಹಾಗೆ ಕರನಿರಾಕರಣೆ ಸತ್ಯಾಗ್ರಹವು ಗ್ರಾಹಕರಿಗೆ ಕೈ ಉತ್ಪನ್ನಗಳ ಮೇಲೆ ವಿಧಿಸಿರುವ ಜಿ.ಎಸ್.ಟಿ ಯ ಪರಿಣಾಮವನ್ನು ಮನವರಿಕೆ ಮಾಡಲು “ತಾಯವ್ವ” ಸಂಗೀತ ನಾಟಕದ ಮೂಲಕ ಸಾಸ್ಕೃತಿಕ ಚಳುವಳಿಯ ಆಯಾಮ ಪಡೆದಿದೆ.

ಪ್ರಸನ್ನ ಮ್ಯಾಕ್ಸಿಮ್‌ ಗಾರ್ಕಿಯ ‘ಮದರ್’ ಕಾದಂಬರಿಯನ್ನು ಪ್ರಕೃತಿಯ ರೂಪಕವಾಗಿಸಿದ್ದಾರೆ. ಆಕೆ ಈಗ ‘ಹಸಿರು ತಾಯಿ’ ಆರ್ಥಾತ್ “ತಾಯವ್ವ”.
ಹೆಸರಾಂತ ಸುಗಮ ಸಂಗೀತ ಗಾಯಕಿ ಎಂ.ಡಿ.ಪಲ್ಲವಿ ತಾಯವ್ವ ಳಾಗಿ ಅಭಿನಯಿಸಿದ್ದಾರೆ.

ಇದರ ಮೊದಲ ಪ್ರದರ್ಶನ ಇದೇ ನವಂಬರ್ 21ರಂದು ಎ.ಡಿ.ಎ ರಂಗಮಂದಿರ, ಬೆಂಗಳೂರು, ಇಲ್ಲಿ ಸಂಜೆ 7.೦೦ ಗಂಟೆಗೆ ಆಯೋಜಿಸಲಾಗಿದೆ.

ಸಾಂಸ್ಕೃತಿಕ ಪ್ರದರ್ಶನಕ್ಕೆ ವಿಧಿಸಿರುವ ಜಿ.ಎಸ್.ಟಿ ಮಿತಿಯನ್ನು ಮೀರಬೇಕು ಎನ್ನುವ ದೃಷ್ಟಿಯಿಂದ ಒಂದು ಟಿಕೆಟ್ ದರ 251 ರೂ. ನಾವು ಯಾವುದೇ ಜಿ.ಎಸ್.ಟಿ ಪಡೆಯದೆ ಹಾಗೂ ಕೊಡದೆ, ಕೈ ಉತ್ಪನಗಳ ಪಟ್ಟಿಗೆ ಬರುವ ಸಾಂಸ್ಕೃತಿಕ ಪ್ರದರ್ಶನಗಳಿಗೆ ಶೂನ್ಯ ಕರ ವಿಧಿಸುವಂತೆ ಭಾರತ ಸರ್ಕಾರವನ್ನು ಆಗ್ರಹಿಸುತ್ತಿದ್ದೆವೆ.

ಮೇಲಿನ ಕಾರಣದಿಂದ ಟಿಕೆಟ್ ಅನ್ನು ಆನ್ ಲೈನ್ ನಲ್ಲಿ ಮಾರುತ್ತಿಲ್ಲ!!, ಏಕೆಂದರೆ ಈ ಕಾನೂನು ಬಂಗ ಚಳುವಳಿಯಲ್ಲಿ ನೀವೂ ಪಾಲ್ಗೊಳ್ಳಲ್ಲೆಂದು. ನಾವೆಲ್ಲಾ ಈ ಕಾನೂನನ್ನು ಭಂಗ ಮಾಡಬೇಕಿದೆ. ಏಕೆಂದರೆ, ಒಬ್ಬ ಬಡ ಜಾನಪದ ಕಲಾವಿದ ಅಥವ ನಾಟಕಕಾರ 18% ಜಿ.ಎಸ್.ಟಿ ಕಟ್ಟಲು ಅಸಾಧ್ಯ.

*ಆಫ್ ಲೈನ್ ನಲ್ಲಿ ಟಿಕೆಟ್ ದೊರೆಯುವ ಸ್ಥಳಗಳ ಪಟ್ಟಿ ಯನ್ನು ಶೀಘ್ರವಾಗಿ ಬಿಡುಗಡೆ ಮಾಡುತ್ತೆವೆ. ರಂಗಮಂದಿರದ ಬಳಿ ,ಅಂದು ಬಂದು ಟಿಕೆಟ್ ಖರೀದಿಸ ಬಹುದು.

ಗ್ರಾಮ ಸೇವಾ ಸಂಘ
9980043011

Leave a Reply