ನನ್ನಾಳವನ್ನು ಕಲಕುತ್ತಿರುವುದು ಈ movie.

ಮಂಜುನಾಥ್ ಲತಾ 

ಒಂದಿಲ್ಲೊಂದು ರೀತಿಯಲ್ಲಿ ನಮ್ಮೊಳಗಿರುವ ಚೆಗೆವಾರ ನನ್ನಾಳವನ್ನು ಕಲಕುತ್ತಿರುವುದಕ್ಕೆ ಕಾರಣವಾಗಿದ್ದು ಈ movie.

ಮೂರು ದಿನಗಳಿಂದಲೂ ಅಸಹನೀಯ ಬೆನ್ನು ನೋವು, ಜ್ವರದಿಂದ ಬಳಲುತ್ತಿರುವ ನನ್ನನ್ನು ಅಷ್ಟಿಷ್ಟು ಸಂತೈಸಿದ್ದು ಈ motorcycle dairies( ೨೦೦೪) ಎಂಬ ಪ್ರಾಂಜಲ ಸಿನಿಮಾ. ಇದನ್ನು share ಮಾಡಿದ್ದು ಗೆಳೆಯ ಸದೇಶ್. ಅದಕ್ಕೂ ಮುಂಚೆ ಆತನಿಗೆ ಚೆಗೆವಾರನ motorcycle diaries ನ ಕನ್ನಡ ಅನುವಾದ (ಡಾ. ಎಚ್. ಎಸ್. ಅನುಪಮಾ)ವನ್ನು ಓದುವಂತೆ ಹೇಳಿದ್ದೆ..

ಚೆಗೆವಾರನ ಟಿಪ್ಪಣಿಗಳನ್ನಿಟ್ಟುಕೊಂಡು ರೂಪಿಸಿರುವ ಈ movie ತನ್ನ ಭಾಷೆಯನ್ನೂ ಮೀರಿ (ಮೂಲ: Spanish) ಮನುಕುಲದ ಸಂಬಂಧಗಳನ್ನು ಎಚ್ಚರಿಸುತ್ತದೆ.

ಚೆಗೆವಾರ ಮತ್ತವನ ಗೆಳೆಯನ journeyಯಲ್ಲಿ ಕಂಡುಬರುವ ಮನುಷ್ಯ ಬಾಂಧವ್ಯಗಳ ನಿರೂಪಣೆ, ದೃಶ್ಯ ವೈಭವ ಮನತಾಕುತ್ತದೆ..ಅದರಲ್ಲೂ ಕುಷ್ಠರೋಗಿಗಳ campನಲ್ಲಿ ಚೆ ತೋರಿಸುವ ಅನುಕಂಪ ನನಗೆ ಮದರ್ ತೆರೆಸಾ ಸೇವೆಯನ್ನು ನೆನಪಿಸಿತು…

ಬೇರೆಯವರ ನೋವಿನಲ್ಲಿ ತನ್ನ ನೋವನ್ನು ನೀಗಿಕೊಳ್ಳುವ ಗುಣ ನನಗೆಂದಿಗೆ ದಕ್ಕುವುದೋ ಎಂದು ಈ ಸಿನಿಮಾ ನೋಡಿ ಹಪಹಪಿಸುತ್ತಿರುವೆ…
ಜ್ವರ, ಬಳಲಿಕೆಯಿಂದಾಗಿ ಹೆಚ್ಚು ಬರೆಯಲು ಆಗುತ್ತಿಲ್ಲ.. ಆ ಪುಸ್ತಕ, ಆ ಸಿನಿಮಾ ಕುರಿತು ಸುದೀರ್ಘವಾಗಿ ಬರೆಯುವ ಆಸೆಯಂತೂ ಇದೆ..

Leave a Reply