ಪ್ರದ್ಯುಮ್ಮನ ಕೊಂದವರು ಯಾರು ?

ಸಿ ಜೆ ರಾಜೀವ

ಏಳು ವರ್ಷದ ದಿಲ್ಲಿಯ ಆ ಮುದ್ದಾದ ಮಗು
ಪ್ರದ್ಯುಮ್ನನ ಕೊಂದವರು ಯಾರು ?
ಸಿಕ್ಕಿಬಿದ್ದಿದ್ದಾನೆ 17 ವರ್ಷದ ಪೋರ
ಆತನೇ ಕೊಲೆಗಾರ ಎನ್ನುತ್ತಿದೆ ಖಾಕಿ
ಒಪ್ಪಿಕೊಳ್ಳಲು ಭಯವಾಗುತ್ತಿದೆ
ನನ್ನವ್ವ ಹೇಳುತ್ತಿದ್ದಾಳೆ
ಅವನಲ್ಲ ಮಗನೇ, ಕೊಲೆಗಾರ ಎಂದು !

ಆಕೆ ಕೇಳುತ್ತಾಳೆ
ಯಾರಾದರೂ ಸತ್ತರೆ ಶಾಲೆಗೆ ರಜೆ ಎಂಬ
ಭರವಸೆಯ ಮೂಡಿಸಿದವರು ಯಾರು ?
ಪುರದ ಗಣ್ಯರು ಮೃತರಾದರೆ
ರಜೆ ನಿಶ್ಚಿತ ಎಂದು ಬಿಂಬಿಸಿದವರು ಯಾರು ?
ಸತ್ತರೆ ಕೆಲಸದ ದಿನವೇ
ಸಾಯಲಿ ಎಂದು
ರಜೆಯ ಬಯಸಿದವರು ಯಾರು ?
ನಾವಲ್ಲವೇ ?

ಪ್ರದ್ಯುಮ್ನನ ಕೊಲೆಗೆ ಆತನನ್ನು
ಪ್ರಚೋದಿಸಿದ್ದು ಯಾರು ?
ಪರೀಕ್ಷೆಯಲಿ ಆತ ಪಾಸಾಗಲೇ
ಬೇಕೇಂದು ಶಪಥ
ತೊಟ್ಟವರು ಯಾರು
ಪರೀಕ್ಷೆ ಬರೆಯದಿದ್ದರೆ
ಪ್ರಪಂಚವೇ ಮುಳುಗುತ್ತದೆ ಎಂದು
ಹೆದರಿಸಿದ್ದು ಯಾರು ?
ಪರೀಕ್ಷೆಯೇ ಒಂದು ಭೀತಿ
ಎಂದು ಪ್ರಚೋದಿಸಿದವರು
ಯಾರು ? ನಾವಲ್ಲವೇ ?

ನನ್ನವ್ವ ಮತ್ತೆ ಕೇಳಿದಳು,
ಈಗ ಹೇಳು,
ಪ್ರದ್ಯುಮ್ಮನ ಕೊಂದವರು ಯಾರು ?
17ರ ಹರೆಯದ ನನ್ನ ಪೋರನ
ಮುಂದಿಟ್ಟುಕೊಂಡು ನಾ ಹೇಳಿದೆ
ನಾನಾಗಲಾರೆ ಕೊಲೆಗಾರ !

2 Responses

  1. Naveen says:

    Very true..

  2. Sachinkumar Hiremath says:

    ವಾಸ್ತವತೆಗೆ ಹಿಡಿದ ಕನ್ನಡಿ

Leave a Reply

%d bloggers like this: