ನಾಲ್ಕು ಇಡ್ಲಿ, ಎರಡು ವಡೆ 30 ರೂ..

ರೇಣುಕಾರಾಧ್ಯ ಎಚ್ ಎಸ್ 

ಶನಿವಾರದ ಹೊತ್ತಾರೆಯ ಹೊಟ್ಟೆಪೂಜೆ ಆದದ್ದು ಇಲ್ಲೆ.
ತಿ.ನರಸೀಪುರದಿಂದ ಒಂದು ಕಿ.ಮೀ ದೂರದಲ್ಲಿರುವ ಹೆಳವನಹುಂಡಿಯ ‘ ಪೊಣ್ಣಪ್ಪ ಹೋಟೆಲ್’ ತುಂಬಾ ವಿಶೇಷವಾದದ್ದು.

ಹಿಂದೆ ಗುಡಿಸಲು ಹೋಟೆಲ್ಲಾಗಿದ್ದದ್ದು ಇತ್ತೀಚೆಗೆ ಸಿಮೆಂಟ್ ತಾರಸಿ ಆಗಿದೆ. ಮೂರು ತಲೆಮಾರಗಳ ಈ ಹೋಟೆಲಿನಲ್ಲಿ ಇಡ್ಲಿ, ಮಸಾಲೆ ವಡೆ, ಬೆಣ್ಣೆ ದೋಸೆಯ ರುಚಿಯನ್ನು ತಿಂದೆ ಅನುಭವಿಸಬೇಕಾದ್ದೆ ಹೊರತು, ಮಾತಿನಲ್ಲಿ ಹೇಳಿದರೆ ಆಗದು ಅಂತಹ ರುಚಿಕಟ್ಟಾದ ತಿಂಡಿಗಳು ಇಲ್ಲಿನ special.

ಬೆಲೆಯೂ ಕಡಿಮೆ. ನಾಲ್ಕು ಇಡ್ಲಿ (ದೊಡ್ಡವು) ಎರಡು ವಡೆ ಮೂವತ್ತು ರೂ no GST.

* ಬೆಳಿಗ್ಗೆ ಒಂಬತ್ತು ಗಂಟೆಯ ಒಳಗೆ ಹೋದರೆ ಮಾತ್ರ ತಿಂಡಿ ಸಿಗುತ್ತದೆ.

1 Response

  1. G Narayana says:

    miss such eaateries in my Sahakaranagara, Bangalore

Leave a Reply

%d bloggers like this: