ಅಮ್ಮ ಪ್ರಶಸ್ತಿ ಪ್ರಕಟ: ವಿನಯಾ ವಕ್ಕುಂದ, ಚನ್ನಣ್ಣ ವಾಲೀಕಾರ, ನವಕರ್ನಾಟಕ ಉಡುಪ ಅವರಿಗೆ ಗೌರವ ಪ್ರಶಸ್ತಿ

ಕಲಬುರ್ಗಿಯ ಸೇಡಂನ ಅಮ್ಮ ಪ್ರತಿಷ್ಠಾನ ಈ ಸಾಲಿನ ಗೌರವ ಪ್ರಶಸ್ತಿಗಳನ್ನು ಘೋಷಿಸಿದೆ.

ಹಿರಿಯ ಸಾಹಿತಿ, ದಲಿತ – ಬಂಡಾಯ ಚಳವಳಿಯ ಮುಖ್ಯರಲ್ಲಿ ಒಬ್ಬರಾದ ಚನ್ನಣ್ಣ ವಾಲೀಕಾರ, ಕವಿತೆ, ಕಥೆ, ವಿಚಾರವಾದದ ಮೂಲಕ ಗಮನ ಸೆಳೆದ ವಿನಯಾ ವಕ್ಕುಂದ ಹಾಗೂ ನವಕರ್ನಾಟಕ ಪ್ರಕಾಶನದ ಮುಖ್ಯಸ್ಥರಾದ ಎ ಆರ್ ಉಡುಪ, ವೈದ್ಯ ಲೇಖಕ ಡಾ.ಎಸ್.ಎಸ್. ಗುಬ್ಬಿ ಯಾದಗಿರಿ, ಸಾಂಸ್ಕøತಿಕ ವ್ಯಕ್ತಿತ್ವ ಡಾ.ರಮೇಶ ಐನಾಪುರ ಸೇಡಂ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರು ತಿಳಿಸಿದ್ದಾರೆ.

ಇದೇ ನವೆಂಬರ್ 26 ರಂದು ಸಂಜೆ 5.30ಕ್ಕೆ ಸೇಡಮ್‍ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

 

 

 

ವಿನಯಾ ವಕ್ಕುಂದ

ವಿನಯಾ ವಕ್ಕುಂದ

ಎ ಆರ್ ಉಡುಪ

ಎ ಆರ್ ಉಡುಪ

 

ಚನ್ನಣ್ಣ ವಾಲೀಕಾರ

ಚನ್ನಣ್ಣ ವಾಲೀಕಾರ

 

ಡಾ ರಮೇಶ್ ಐನಾಪುರ್

ಡಾ ರಮೇಶ್ ಐನಾಪುರ್

 

ಡಾ ಎಸ್ ಎಸ್ ಗುಬ್ಬಿ

ಡಾ ಎಸ್ ಎಸ್ ಗುಬ್ಬಿ

Leave a Reply