ಅಮ್ಮಪ್ರಶಸ್ತಿ ಪ್ರಕಟ: ರಾಜಾರಾಂ ತಲ್ಲೂರು, ಎಂ ಆರ್ ಕಮಲಾ, ಎಚ್ ಆರ್ ಸುಜಾತಾ ಕೃತಿಗೆ ಮನ್ನಣೆ

ಎಂ ಆರ್ ಕಮಲ

ಎಂ ಆರ್ ಕಮಲ

‘ಅವಧಿ’ಯ ಅಂಕಣಕಾರರಾದ ರಾಜಾರಾಂ ತಲ್ಲೂರು ಸೇರಿದಂತೆ ಐವರು ಬರಹಗಾರರಿಗೆ ಈ ಸಾಲಿನ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಘೋಷಿಸಲಾಗಿದೆ.

ಸೇಡಂನ ಅಮ್ಮ ಪ್ರತಿಷ್ಠಾನದ `ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರು ತಿಳಿಸಿದ್ದಾರೆ.

ರಾಜಾರಾಂ ತಲ್ಲೂರು ಅವರು ‘ಅವಧಿ’ಯ ಅಂಕಣಕಾರರಾಗಿದ್ದು ಅದೇ ಹೆಸರಿನಲ್ಲಿ ಬರೆದ ಅಂಕಣಗಳ ಗುಚ್ಛಕ್ಕೆ ಪ್ರಶಸ್ತಿ ಲಭಿಸಿದೆ.

ಎಂ ಆರ್ ಕಮಲಾ ಅವರ ‘ಮಾರಿಬಿಡಿ’ ಕವನ ಸಂಕಲನ, ಗಿರೀಶ್ ಜಕಾಪುರೆ ಅವರ ‘ನಾಜಿ ನರಮೇಧ’ ಅನುವಾದ, ಎಚ್ ಆರ್ ಸುಜಾತಾ ಅವರ ‘ನೀಲಿ ಮೂಗಿನ ನತ್ತು’ ಪ್ರಬಂಧ ಸಂಕಲನ, ರೇಖಾ ಕಾಖಂಡಕಿ ಅವರ ಕಾದಂಬರಿ ‘ದೈವಸ್ವತ’ಕ್ಕೆ ಪ್ರಶಸ್ತಿ ಘೋಷಿಸಲಾಗಿದೆ.

ಪ್ರಶಸ್ತಿಯು ತಲಾ 5000 ರೂ. ನಗದು ಪ್ರಶಸ್ತಿ ಫಲಕವನ್ನು ಹೊಂದಿದೆ.

ಇದೇ ನವೆಂಬರ್ 26 ರಂದು ಸಂಜೆ 5.30ಕ್ಕೆ ಸೇಡಮ್‍ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎಚ್ ಆರ್ ಸುಜಾತ

ಎಚ್ ಆರ್ ಸುಜಾತ

 

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು

ರೇಖಾ ಕಾಖಂಡಕಿ

ರೇಖಾ ಕಾಖಂಡಕಿ

 

ಗಿರೀಶ್ ಜಕಾಪುರೆ

ಗಿರೀಶ್ ಜಕಾಪುರೆ

 

8 Responses

 1. Lalitha siddabasavayya says:

  ಓಹ್,,, ಕಮಲಾ, ಸುಜಾತಾ , ತಲ್ಲೂರು , ಜಕಾಪುರೆ , ಕಾಖಂಡಕಿ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು

 2. LAXMINARASIMHA KANTHAVEENAM says:

  ಪ್ರಶಸ್ತಿ ವಿಜೇತ ಎಲ್ಲರಿಗೂ ಅಭಿನಂದನೆಗಳು.

 3. S.P.Vijaya lakshmi says:

  ,ಕಮಲಾ, ಬಹಳ ಸಂತೋಷವಾಯ್ತು ಸುದ್ದಿ ಓದಿ. …ಹೃತ್ಪೂರ್ವಕ ಅಭಿನಂದನೆಗಳು…

 4. Uday Itagi says:

  Congrats to all

 5. rajumalavalli says:

  ಬಹಳ ಸಂತೋಷವಾಯ್ತು. ಪ್ರಶಸ್ತಿ ವಿಜೇತರಿಗೂ ಅಭಿನಂದನೆಗಳು.

 6. ಎಚ್. ಎಸ್. ಬೇನಾಳ says:

  ಅಮ್ಮ ಪ್ರಶಸ್ತಿ ಪುರಸ್ಕೃತ ಸಾಹಿತಿಗಳೆಲ್ಲರಿಗೂ ಅಭಿನಂದನೆಗಳು.

Leave a Reply

%d bloggers like this: