ದೇವರೇ ಬೇಸ್ತು ಬಿದ್ದ ಕಥೆ

 

 

 

ನಟರಾಜ ಅರಳಸುರಳಿ 

 

 

ಹೊಸಪೇಟೆಯ ವಕೀಲ ಗೆಳೆಯ ಕಲ್ಲಂಭಟ್ ಮತ್ತು ಶೈಲಜ ದಂಪತಿಗಳಿಗೆ ತ್ರಿವಳಿ ಮಕ್ಕಳು. ಅವರೇ ಸಂಗೀತಾ, ಸಹನಾ ಮತ್ತು ಸೌಮ್ಯ.

ಮೂವರೂ ಪ್ರಥಮ ಪಿಯುಸಿ ವ್ಯಾಸಂಗ ಮಾಡ್ತಿದ್ದಾರೆ.

ದೇವರೇ, ನಮಗೊಂದು ಮಗು ಕರುಣಿಸಪ್ಪಾ ಅಂತ ಕಲ್ಲಂಭಟ್ಟರು ಒಬ್ಬ ದೇವರಲ್ಲಿ ಹರಕೆ ಮಾಡಿದ್ದರಂತೆ. ಅವರ ಹೆಂಡತಿ ಇನ್ನೊಬ್ಬ ದೇವರಲ್ಲಿ ಬೇಡಿಕೆ ಇಟ್ಟಿದ್ದರಂತೆ. ಅವರ ತಾಯಿ ‘ನನ್ನ ಮಗನಿಗೊಂದು ಮಗು ಜನಿಸಲಿ ‘ ಅಂತ ಬೇರೊಬ್ಬ ದೇವರನ್ನು ಬೇಡಿಕೊಂಡರಂತೆ.

ಎಲ್ಲಾ ದೇವರೂ ದಯಾಮಯಿ… ಮೂರೂ ಭಕ್ತರ ಬೇಡಿಕೆಗೆ ‘ತಥಾಸ್ತು’ ಅಂದರಂತೆ. ಆದರೆ, ದೇವರುಗಳಿಗೆ ಮೂವರದ್ದೂ ಒಂದೇ ಅಪ್ಲಿಕೇಶನ್ ಅಂತ ಗೊತ್ತಾಗದೆ ಒಬ್ಬೊಬ್ಬ ದೇವರೂ ಒಂದೊಂದು ಮಕ್ಕಳನ್ನ ಸ್ಯಾಂಕ್ಷನ್ ಮಾಡಿಯೇ ಬಿಟ್ಟರು!

3 Responses

 1. kvtirumalesh says:

  ಈ ಮೂವರು ಸುಂದರ ಹುಡುಗಿಯರ ಜೀವನವೂ ಸುಂದರವಾಗಿರಲಿ!
  ಕೆ.ವಿ. ತಿರುಮಲೇಶ್

 2. ಗೋಪಾಲಕೃಷ್ಣ says:

  ಮೂರೂ ಕೂಸುಗಳ ಜೀವನ ಸುಖಮಯ ವಾಗಿರಲಿ

 3. ನೂತನ ದೋಶೆಟ್ಟಿ says:

  ಅವರು ಮೊರೆಗೆ ಬಹುಮಾನದ ಜೊತೆ ಬೋನಸ್..
  ಎಲ್ರೂ ಹೀಗೇ ಸದಾ ನಗುತ್ತಿರಿ

Leave a Reply

%d bloggers like this: