ಆಟೋದವರ ಸೇವೆ, ಡಾಕ್ಟರ್ ಸೇವೆ ಎರಡೂ ಒಂದೇನಾ ????

ಸರೋಜಿನಿ ಪಡಸಲಗಿ 

ವೈದ್ಯರು ಎಷ್ಟು ಕೇವಲ ಆಗಿಬಿಟ್ರಲ್ಲ ,ಜನತೆಯ ಕಣ್ಣಲ್ಲಿ!!!!!

ಇದೆಂಥ ಶೋಚನೀಯ ಪರಿಸ್ಥಿತಿ !!!

ಆಟೋದವರು ಸೇವೆ ಡಾಕ್ಟರ್ ಸೇವೆ ಎರಡೂ ಒಂದೇನಾ ????

ವೈದ್ಯೋ ನಾರಾಯಣೋ ಹರಿ ಅಂತಾರೆ ಬಲ್ಲವರು. ತಮ್ಮ ಜೀವ ಒತ್ತೆ ಇಟ್ಟು, ತಮ್ಮ ಸುಖ ದುಃಖ ಗಮನಿಸದೇ ರೋಗಿಗಳ ಗೋಳಾಟಕ್ಕೆ ಸ್ಪಂದಿಸುವ ವೈದ್ಯರನ್ನು ಈ ರೀತಿ ಉಡಾಫೆ ಮಾಡುವುದು ಎಷ್ಟು ಸಮಂಜಸ??

ಒಂದು ಹಾಸ್ಪಿಟಲ್ ಸೆಟ್ ಮಾಡಲು ಬೇಕಾಗುವ ಹಣದ ಅಂದಾಜು ಇದೆಯಾ? ಉನ್ನತ ಮಟ್ಟದ ಚಿಕಿತ್ಸೆ ಬೇಕಾದರೆ, ಅದಕ್ಕೆ ತಕ್ಕ ಸಲಕರಣೆ ಬೇಕು ತಾನೆ ?? ಅದನ್ನು ಸರ್ಕಾರ ಒದಗಿಸ್ತದಾ?

ಸರ್ಕಾರಿ ಆಸ್ಪತ್ರೆಯ ಪರಿಸ್ಥಿತಿ ನೋಡಿದವರ್ಯಾರೂ ಜೀವದಾಸೆ ಇದ್ದವರು ಹೋಗಲ್ಲ ಅನ್ಕೊಂಡೀನಿ. ಇದಕ್ಕೆ ಅಪವಾದ ಇಲ್ಲ ಅಂತೇನಿಲ್ಲ. ಆದರೂ ಜೀವ ಉಳಿಸಿದರೆ- ದೇವರು ಇಲ್ಲ ಅದೇ ವೈದ್ಯ- ಯಮದೂತ ಅನ್ನೋ ಸಮಾಜ.

ಇಂಥವರ ಮಧ್ಯೆ ತಮ್ಮ ವೈಯಕ್ತಿಕ ಜೀವನ ಕೂಡ ಗೌಣ ಅಂತ ಸೇವೆ ಮಾಡೋ ಡಾಕ್ಟರ್ ಗೆ, ಸಮಾಜ, ಸರ್ಕಾರ ಕೊಡೋ ಗೌರವ ಇದು. ಈ ಥರದ ಒತ್ತಡದ ಮಧ್ಯೆ, ನಿಯಂತ್ರಣಗಳ ಮಧ್ಯೆ ನಿರಾತಂಕವಾಗಿ ರೋಗಿಗಳ ಉಪಚಾರ ಮಾಡಲಾದೀತಾ? ವೈದ್ಯರ ಮೇಲೆ ನಿಯಂತ್ರಣ ಹೇರೋ ಸರ್ಕಾರ ಅವರ ಕಾಲೇಜು ಫೀಸ್ ನ ನಿಯಂತ್ರಿಸಲಿ.

ಎಲ್ಲಕ್ಕೂ ಅಪವಾದ ಇರುವಂತೆ ಹೆಚ್ಚು ಹಣ ವಸೂಲಿ ಮಾಡೋ ವೈದ್ಯರೂ ಇಲ್ಲ ಅಂತ ಇಲ್ಲ. ಆದರೂ ಅವರದು ಒಂದು ಜೀವ ಉಳಿಸುವ ನಿಟ್ಟಿನಲ್ಲಿ ಹೆಣಗೋ ಸೇವೆ ಎಂಬುದು ಗಮನದಲ್ಲಿರಲಿ. ನಿಮಗೆ ಖಾಸಗಿ ವೈದ್ಯರ ಸೇವೆ ಬೇಡವಾದರೆ ಸರ್ಕಾರೀ ವೈದ್ಯರನ್ನು ಭೇಟಿಯಾಗಿ. ಆದರೆ ಈ ಥರ ಬೇಜವಾಬ್ದಾರಿ, ಗೌರವಹೀನ ಮಾತುಗಳನ್ನಾಡುವುದು ಸರ್ವಥಾ ಸಲ್ಲ.

ಆಟೋ ಚಾಲಕನ ಮೇಲೆ ನಿಯಂತ್ರಣ ಹೇರುವುದು, ವೈದ್ಯರ ಸೇವೆಯ ಮೇಲೆ ನಿಯಂತ್ರಣ ಹೇರುವುದು ಒಂದೇಯೋ ಹೇಗೆ ಅಂತ ಯೋಚಿಸಿ ಹೇಳಿ.

5 Responses

 1. ತುಂಬ ಸಂಕುಚಿತ ಮನೋಭಾವನೆಯ ಲೇಖನ.

 2. ವೈದ್ಯೋ ನಾರಾಯಾಣೋ ಹರಿಃ ಅಂದರೆ ಡಾಕ್ಟರ್ ದೇವನಾದ ನಾರಾಯಣ ಹರಿಗೆ ಸಮ ಅಂತಲ್ಲ ಅದರರ್ಥ. ಆದರೆ ಇದು ರೂಢಿಯಲ್ಲಿರುವ ತಪ್ಪು ವ್ಯಾಖ್ಯಾನ. ಶ್ಲೋಕ ಪೂರ್ತಿ ಓದಿಕೊಂಡರೆ ಸತ್ಯದ ಅರಿವಾಗುತ್ತದೆ.

  ಎಲ್ಲ ವೃತ್ತಿಯಂತೆಯೇ ವೈದ್ಯಕೀಯ ವೃತ್ತಿಯೂ ಒಂದೆಂದು ಭಾವಿಸಬೇಕು. ಮೇಲಿನ ಲೇಖನದಲ್ಲಿ ಹೇಳಿರುವಂತೆ “ಹೆಚ್ಚು ಹಣ ವಸೂಲಿ” ಮಾಡುತ್ತಿರುವುದು ಸಾಮಾನ್ಯ. ಇದಕ್ಕೆ ಅಪವಾದವೆಂಬಂತೆ ಕೆಲ ಒಳ್ಳೆಯ ವೈದ್ಯರೂ ಇದ್ದಾರೆ. ಆಸ್ಪತ್ರೆಗಳು ಯಾವುದೇ ಉದ್ಯಮದಂತೆ ಆರ್ಥಿಕ ಲಾಭಕ್ಕೆ ಮಣೆ ಹಾಕಿರುವುದು ಜಾಹೀರಾಗಿರುವ ವಿಷಯವೇ.

  ಆದರೂ ವೈದ್ಯರೂ ತಲೆಯ ಮೇಲೆ ಕೊಂಬನ್ನು ಇಟ್ಟುಕೊಂಡೆ ಇರುತ್ತಾರೆ.

 3. Ashalatha, Mangaluru says:

  ಇದೊಂದು ಪೂರ್ವಗ್ರಹ ಪೀಡಿತ ಅಭಿಪ್ರಾಯ ಹೊಂದಿರುವ ಲೇಖನ. ಜನ ಸಾಮಾನ್ಯರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲದೆ, ವೈದ್ಯರನ್ನು ಬೆಂಬಲಿಸಲು ಬರೆದಂತಿದೆ.

 4. Sarojini Padasalgi says:

  ನಾನು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿ ಬರೆದು ಕಳಿಸಿ ದೀನಿ.ಅದ್ಯಾಕೆ ಇಲ್ಲಿ ಬರ್ತಾ ಇಲ್ಲ , ಗೊತ್ತಾ ಗ್ತಿಲ್ಲ.

 1. November 16, 2017

  […] ಆಟೋ ಚಾಲಕ ವೈದ್ಯನಿಗೆ ಪಾಠ ಕಳಿಸಿದ ಬರಹ ಅವಧಿಯಲ್ಲಿ ಪ್ರಕಟವಾಗಿತ್ತು. ಅದು ಇಲ್ಲಿದೆ. […]

Leave a Reply

%d bloggers like this: