ವೈದ್ಯ, ನಾರಾಯಣ, ಹರಿ..

ಟಿ ಎನ್ ಸೀತಾರಾಂ

ಆ ವಿಧೇಯಕದಲ್ಲಿ ಒಂದೆರಡು draconian ಅಂಶಗಳು ಇದೆ.. ಇಲ್ಲವೆಂದಲ್ಲ… ಆ draconian ಅಂಶಗಳನ್ನು ತಿಳಿಗೊಳಿಸುವುದಕ್ಕೆ ಸದನ ಸಮಿತಿ ಶಿಫಾರಸು ಮಾಡಿದೆ…

ದಂಡ ಮತ್ತು ಇತರ ಸಂಗತಿಗಳು ಇರವುದು ಕೂಡಾ ವೈದ್ಯರುಗಳ ವಿರುದ್ಧ ಅಲ್ಲ… ಮ್ಯಾನೇಜ್ ಮೆಂಟ್ ಗಳ ವಿರುದ್ಧ…. ಅದೂ ಸರಿ ಇಲ್ಲದಿದ್ದರೆ ಅದರ ಬಗ್ಗೆ ಚರ್ಚೆ ಗೆ ಆಗ್ರಹಿಸಬಹುದಿತ್ತು….ವಿಧೇಯಕವಿನ್ನೂ ಮಂಡನೆಯಾಗಿಲ್ಲ..ಅಲ್ಲಿ ಚರ್ಚೆ ಆಗುತ್ತದೆ….

ಅದಾದ ತಕ್ಷಣ ವಿಧೇಯಕ ಕಾನೂನು ಆಗುವುದಿಲ್ಲ…. ರಾಜ್ಯಪಾಲರು ಪರಿಶೀಲಿಸಿ ಅಂಕಿತ ಹಾಕಿದಾಗ ಮಾತ್ರ ಕಾನೂನು ಆಗುತ್ತದೆ…. ಆಗಲೂ ಕೂಡ ಸರಿ ಇಲ್ಲದಿದ್ದರೆ ಅದನ್ನು ಚಾಲೆಂಜ್ ಮಾಡಿ ಹೈಕೋರ್ಟ್ ಗೆ ಹೋಗಬಹುದು….ಸುಪ್ರೀಂಕೋರ್ಟ್ ಗೆ ಹೋಗಬಹುದು…‌ಅನ್ಯಾಯವಿದ್ದರೆ ನ್ಯಾಯಾಲಯಗಳು ಅದನ್ನು ಸರಿಪಡಿಸುತ್ತವೆ..‌‌ ಈ ವಿಧೇಯಕ ಒಟ್ಟು ಏಳು ಬಾಗಿಲುಗಳನ್ನು ದಾಟಿ ಕಾನೂನು ಆಗಬೇಕಾಗುತ್ತದೆ…….

ಆದರೆ ಈಗಲೇ ಈ ಖಾಸಗಿ ಆಸ್ಪತ್ರೆ ಮ್ಯಾನೇಜ್ ಮೆಂಟುಗಳು ಜನದ ಜೀವಗಳನ್ನು ಪಣಕ್ಕಿಟ್ಟು ಆಸ್ಪತ್ರೆಗಳನ್ನು ಮುಚ್ಚಿ ಜನದ ಪ್ರಾಣಗಳ ಜತೆ ಚೆಲ್ಲಾಟವಾಡುತ್ತಿದೆ.. ಇದರ ಕ್ರೌರ್ಯ, ಮನಸ್ಸನ್ನು ಆತಂಕಕ್ಕೆ ದೂಡುತ್ತದೆ…

ಸರಕಾರ ಕೂಡ ಅಷ್ಟೇ….ರಮೇಶ್ ಕುಮಾರ್ ಆಗಲಿ, ಸಿದ್ದರಾಮಯ್ಯ ನವರಾಗಲೀ ಇದನ್ನು ಪ್ರತಿಷ್ಠೆ ಯ ವಿಷಯವಾಗಿ ತೆಗೆದುಕೊಳ್ಳಬಾರದು….ಕೋಪದ ಬದಲು ವಿನಯದಿಂದ ಕರೆದರೆ ಯಾರಾದರೂ ಮೃದುವಾಗುತ್ತಾರೆ ಎನ್ನುವುದನ್ನು ತಿಳಿದು ಅವರನ್ನು ಮಾತುಕಥೆಗೆ ಕರೆಯಬೇಕಾಗುತ್ತದೆ……ವಿಧೇಯಕದದ ಬಗ್ಗೆ ಮ್ಯಾನೇಜ್ಮೆಂಟ್ ಗಳವರು ವೈದ್ಯರಿಗೆ ದಾರಿ ತಪ್ಪಿಸಿರುವುದನ್ನು ವಿವರಗಳೊಂದಿಗೆ ವೈದ್ಯರುಗಳಿಗೆ ಸ್ಪಷ್ಟಪಡಿಸಬೇಕಾಗಿದೆ…

ನಾನು ಅತ್ಯಂತ ಹೆಚ್ಚಾಗಿ ಗೌರವಿಸುವುದು ವೈದ್ಯ ವೃತ್ತಿಯನ್ನು ಮತ್ತು ಶಿಕ್ಷಕರ ವೃತ್ತಿಯನ್ನು..ದೇವರಂಥ ಅನೇಕ ಡಾಕ್ಟರ್ ಗಳನ್ನು ನಾನು ನೋಡಿದ್ದೇನೆ
ವೈದ್ಯರೇ ನಿಮ್ಮನ್ನು ನಾರಾಯಣ, ಹರಿ ಎಂದು ಕೃತಜ್ಞತೆ ಯಿಂದ ಸ್ಮರಿಸುತ್ತೇವೆ…..ಆ ಗೌರವ ದಯವಿಟ್ಟು ಉಳಿಸಿಕೊಳ್ಳಿ…‌‌…ಮುಷ್ಕರ ಬಿಡಿ…

ಸರ್ಕಾರ ಕೂಡಾ ಅಷ್ಟೇ….ಜನದ ಪ್ರಾಣಗಳ ಜತೆ ಜೂಜು ಬೇಡ..ರಮೇಶ್ ಕುಮಾರ್ ಅವರೇ ಅವಮಾನ ಎಂದು ಭಾವಿಸಬೇಡಿ….ಪ್ರತಿಷ್ಠೆ ಬದಿಗಿಟ್ಟು ಮಾತಿಗೆ ನೀವೇ ಕರೆದು ಇದನ್ನು ಬಗೆಹರಿಸಬೇಕಾಗುತ್ತದೆ..ಜನಗಳ ಜೀವದ ಪ್ರಶ್ನೆ……

ವೈದ್ಯರು ನಾರಾಯಣ, ಹರಿಗಳಾಗಿ ಇರಿ….

 

Leave a Reply