ಶಾಲೆ, ಆಸ್ಪತ್ರೆ ಎರಡರ ಹೆಸರೆತ್ತಿದರೂ ಭಯ..

ಪಲ್ಲವಿ ಐದೂರ್ 

ಖಾಸಗೀ ಬ್ಯಾಂಕ್ ಗಳಿಗಿಂತ ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳ ಮೇಲೇ ನಮಗೆ ಅಧಿಕ ಭರವಸೆ. ಇದಕ್ಕೆ ಮೂಲ ಕಾರಣ ರಾಷ್ಟ್ರೀಕರಣ. ಹಾಗೆಯೇ ಒಂದು ಕ್ರಾಂತಿ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರದಲ್ಲೂ ನಡೆದರೆ ಸಾರ್ವಜನಿಕರ ಎರಡು ಬಹುದೊಡ್ಡ ಸಮಸ್ಯೆಗಳಿಗೆ ತಕ್ಕ ಮಟ್ಟಿನ ಪರಿಹಾರ ಸಿಗಬಹುದೇನೊ!!

ಶಾಲೆ ಆಸ್ಪತ್ರೆ ಎರಡರ ಹೆಸರೆತ್ತಿದರೂ ಭಯಪಡುವಂತಾಗಿದೆ ಸಾರ್ವಜನಿಕರ ಜೀವನ…!!!

1 Response

 1. Govind Chandra Shekar says:

  ಮೊದಲು ವೈದ್ಯಕೀಯ ವಿದ್ಯಾ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸಲು ಹೇಳಿ, ವೈದ್ಯನಾಗಲು ಹಲವು ಲಕ್ಷಗಳಿಂದ ಕೋಟಿಗೂ ಮೀರಿ ಖರ್ಚಾಗುವಾಗ, ವೈದ್ಯೋಃ ನಾರಾಯಣೊಃ ಹರಿ… ಯೆಂಬುದು ವೈದ್ಯನೇ ನರನರವನೂ ಹರಿದ ನೆಂಬಂತಾದರೆ ತಪ್ಪೇ… ನಾವು ಟ್ಯಾಕ್ಸ ಕಟ್ಟುವುದು ಕಡ್ಡಾಯವಾಗುತ್ತಿರುವ ಕಾಲದಲ್ಲಿ ಶೇ.2 ವೈದ್ಯಕೀಯ ಕರ ಕಟ್ಟೋಣ, ಆರೋಗ್ಯ ವೆಚ್ಚ ಸರ್ಕಾರದ ಕೈಯಲ್ಲಿದ್ದರೆ, ಖಾಸಗಿ ವೈದ್ಯರ ಸುಲಿಗೆ ಪ್ರಶ್ನೆ ಬರುವುದಿಲ್ಲ. ವ್ಯಾಪಾರಿಕರಣದಲ್ಲಿ ವಿದ್ಯಾಬ್ಯಾಸ ಮಾಡಿ, ಸೇವಾಕರಣದಲ್ಲಿ ವೃತ್ತಿ ಮಾಡಿಯೆಂದರೆ ಹೇಗೆ, ಪ್ರತಿಯೊಬ್ಬರು ತರ್ಕಮಾಡಬೇಕಾದ ವಿಷಯ…
  ಯಂಬಿಬಿಯಸ್ 66ತಿಂಗಳು ಮುಗಿಸಲು ಕಡಿಮೆಯೆಂದರೂ
  5ರಿಂದ8 ಲಕ್ಷ ಬೇಕು, ಯಂಡಿ 33ತಿಂಗಳು 15ರಿಂದ20 ಲಕ್ಷ ಬೇಕು, ಜನರಲ್ ಮೆರಿಟ್ ಹೈ ಪರ್ಸೆಂಟಗೆ ಬರುವ ವೆಚ್ಚ…
  ಕಾಮೆಡ್ ಕೆ ಸೀಟ್ ಆದಲ್ಲಿ ವೆಚ್ಚ ಮೂರು ಪಟ್ಟು ಹೆಚ್ಚು,
  ಪೇಮೆಂಟ್ ಸೀಟ್ ಆದಲ್ಲಿ ವೆಚ್ಚ ಹತ್ತು ಪಟ್ಟು ಹೆಚ್ಚು…
  ಹೀಗಿರುವಾಗ ವೈದ್ಯರು ಹರಿ ಹರ ಬ್ರಹ್ಮರಾಗುವುದು ಹೇಗೆ…
  ಆಸ್ಪತ್ರೆಗಳು ಆಲಯಗಳಾಗುವುದು ಹೇಗೆ…
  ವೈದ್ಯ ವಿದ್ಯಾಲಯಗಳು ರಾಜಕೀಯದವರ ಕೈಯಿಂದ ಸರ್ಕಾರದ ಕೈಗೆ ಬರುವಂತಾಗಲು ರಾಷ್ಟ್ರೀಕರಣವಾಗಬೇಕು, ಪ್ರಸ್ತುತವಿರುವ ಸಂಸ್ಥೆಗಳು ಸಾರ್ವಜನಿಕ ಹಣದಿಂದ ನಿರ್ಮಿಸಲ್ಪಟ್ಟವಾದ್ದರಿಂದ ಪರಿಹಾರದ ಪ್ರಶ್ನೆಯೂ ಬರುವುದಿಲ್ಲ, ಯಾರಿಗೂ ನಷ್ಟದ ಪ್ರಶ್ನೆಯೂ ಬರುವುದಿಲ್ಲ…
  ಪ್ರದಾನಮಂತ್ರಿ ಮೋದಿಯವರು ಮನಸ್ಸು ಮಾಡಿದರೆ ಮಾತ್ರ ಸಾದ್ಯ… ನಿಜವಾಗಿ ಸಾಮಾನ್ಯ ಜನಗಳ ಪರವೆನ್ನುವುದು ಸಾಬೀತುಪಡಿಸಲು ಪ್ರಯತ್ನಿಸುತ್ತಾರಾ… ಕಾದುನೋಡೋಣ.

Leave a Reply

%d bloggers like this: