ರಾಜಾರಾಂಗೆ ವೈದ್ಯರಲ್ಲದವರಿಂದ ಪ್ರಶ್ನೆ..

ರಾಜಾರಾಮ್ ತಲ್ಲೂರು ಅವರ ನುಣ್ಣನ್ನ ಬೆಟ್ಟ ಅಂಕಣ ಈ ಬಾರಿ  ಕೆಪಿಎಂಇ ಕಾಯ್ದೆ ಬಗ್ಗೆ- ಅದು ಇಲ್ಲಿದೆ. 

ಇದಕ್ಕೆ ಡಾ ಶಶಿಕಿರಣ್ ಉಮಾಕಾಂತ ವಿವರವಾಗಿ ಪ್ರತಿಕ್ರಿಯಿಸಿದ್ದಾರೆ- ಅದು ಇಲ್ಲಿದೆ. 

ಈ ಎರಡಕ್ಕೂ ಉಮೇಶ್ ಚಂದ್ರ ಇಲ್ಲಿ ಪ್ರತಿಕ್ರಿಯಿಸಿದ್ದಾರೆ

 

 

 

 

 

 

ರಾಜಾರಾಮ್ ಹಾಗೂ ಡಾ. ಶಶಿಕಿರಣ್ ರವರ ಲೇಖನಗಳೆರಡನ್ನೂ ಓದಿದೆ!

ಅಬ್ಬರದ ಈ ಸಮಯದಲ್ಲಿ ತೂಕಭರಿತ ತಾತ್ವಿಕ ಲೇಖನಗಳನ್ನು ನೋಡಿ ಸಂತೋಷವಾಯಿತು.

ಈ ಮಧ್ಯೆ ಕೆಲವು ಅಸಮತೋಲನಗಳನ್ನು ಪರಿಗಣಿಸುವುದೊಳಿತು:

೧. ವೈದ್ಯ ಶಿಕ್ಷಣ:

1. ಜಾತಿ/ಧರ್ಮ ಆಧಾರಿತ: St.John medical college NEET rank (GM:242; Christian: 92000). But degree didn’t specify the merit
2. ಅರ್ಹತೆಯ ಇಳಿಕೆ: 50% ಮಾನದಂಡದಿಂದ.50 percentile ಗೆ.ಇಳಿಕೆ – ಸರ್ಕಾರವೇ ಇದಕ್ಕೆ ವಕಾಲತ್ತು ನಡೆಸಿದ್ದು!
3. ಸೀಟ್ಗಳನ್ನು ಹೆಚ್ಚಿಸಿ ಕಿರಿಯ ವೈದ್ಯರ ಶೋಷಣೆಗೆ ಪಟ್ಟಭದ್ರರ ಹುನ್ನಾರ…

೨. ವೈದ್ಯರ ಸಾಮಾಜಿಕ ಸ್ಥಾನ:

1. ಅತ್ಯಂತ ಗೌರವಾನ್ವಿತವಾಗಿದ್ದ ಈ ಸ್ಥಾನಕ್ಕೆ ಸಹಜವಾಗೇ ಬೇಡಿಕೆ ಹೆಚ್ಚಿತ್ತು. ಅರ್ಹತೆ ಇಲ್ಲದವರೂ ತೂರಿಬರುವಂತೆ ಪರೀಕ್ಷಾ ಪದ್ಧತಿಯನ್ನೇ ಶಿಥಿಲಗೊಳಿಸಲಾಯ್ತು!
2. ಅನರ್ಹರನ್ನು ಕಡಿವಾಣದಲ್ಲಿಡುವ ವ್ಯವಸ್ಥೆಯಿಲ್ಲದೇ ಇಡೀ ವೈದ್ಯಸಂಕುಲವೇ ಜನರ ಬಾಯಿಗೆ ಬಿತ್ತು
3. Noble profession ಎಂಬ ಹೆಸರಿನಲ್ಲಿ ಕಾಲಕ್ಕೆ ತಕ್ಕಂತೆ ಅವರ.ಸ್ಥಾನವನ್ನು ಉಳಿಸದೇ ಜೀವನಕ್ಕೆ ಪರದಾಡುವಂತಹ ಪರಿಸ್ಥಿತಿಗೆ ತಳ್ಳಿದ ಪರಿಣಾಮ ಇಂದಿನ ಔದ್ಯೋಗೀಕರಣ… For those of you who do not know, doctors with MD gets lower salary than an ordinary engineer, though he needs to work lot harder…

೩. ಸರ್ಕಾರಿ ಆಸ್ಪತ್ರೆಗಳು:

1. ನಾವೆಲ್ಲ ಹುಟ್ಟಿದ್ದು ಸರ್ಕಾರಿ ಆಸ್ಪತ್ರೆ! ನಮ್ಮ ಮಕ್ಕಳಾರೂ ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಲಿಲ್ಲ: ನಮಗೆ ಹೆಚ್ಚು ಖರ್ಚು ಮಾಡುವ ಚಟವೇ? – 78% ಮೀಸಲಾತಿಯ ಮಧ್ಯೆ ಅರ್ಹತೆಗೇನು ಕೆಲಸ?
೨. ರೋಗಿಯೊಬ್ಬನ ಚಿಕೆತ್ಸೆಗೆ ಸರಕಾರಿ ಆಸ್ಪತ್ರೆಯಲ್ಲಿ ತಗಲುವ ವೆಚ್ಚ ಖಾಸಗಿಗಿಂತ ಬಹಳ ಹೆಚ್ಚು – ಅಂಕಿ ಅಂಶಗಳನ್ನು ಪರಿಶೀಲಿಸಬಹುದು! ತೆರಿಗೆದಾರನು ಕೊಡುವ ಹಣವೂ ಹಣವೇ!
೩. ವೆಚ್ಚ, ರೋಗಿಯ ಅನುಭವ ಹಾಗೂ ಒಟ್ಟಾರೆ ಫಲಿತಾಂಶ ಕೆಳಮಟ್ಟದ ಖಾಸಗಿ ಆಸ್ಪತ್ರೆಗೂ ಕೆಳಗಿರುವುದು ನಮ್ಮ ಸರ್ಕಾರಿ ಪದ್ಧತಿಗೆ ಹಿಡಿವ ಕನ್ನಡಿ!

೪. ವೈದ್ಯ/ಆಸ್ಪತ್ರೆ ವೆಚ್ಚ:

1. ಕೃಷಿಯ ವೃತ್ತಿಯಲ್ಲಿರುವ.ಕಂಪೆನಿಗಳು ಸಬ್ಸಿಡಿ ಪಡೆಯುವುವು. ಆರೋಗ್ಯದಲ್ಲೂ ಹಾಗಿದೆಯೇ?
೨. ಪ್ರತಿಭೆಗಳನ್ನು ವೃತ್ತಿಯೆಡೆಗೆ ಆಕರ್ಷಿಸಲು ಕ್ರಮವೇನು. It is to dangerous to just leave it to its own course now that there are quite a bit of entrenched forces… Doctor can’t get paid like skilled/unskilled/semi skilled professions. This is one of the professions where knowledge, soul technology has to reflect in one person ( not in combination of persons). Unless the profession is in the to percentile in terms of money, prestige…, we can rest assured we will have idiots/quacks treating next generation (a lot more than now…)

ಲೇಖಕರಿಗೆ ಸೂಚನೆ:

೧. ಲ್ಯಾಟಿನ್ ಇಂದ ಕನ್ನಡಕ್ಕೆ ಬಂದರೂ ಪರಿಸ್ಥಿತಿ ಬದಲಾಗದು (ಮೆಡಿಕಲ್ ಸಾಧ್ಯವಾದರೆ ಲ್ಯಾಟಿನ್ ಖಂಡಿತಾ ತೊಂದರೆಯಾಗಲಾರದು)
೨. ತರ್ಜುಮೆಗೂ ಜ್ಞಾನಕ್ಕೂ ಇರುವ ಅಂತರವನ್ನು ಗೌರವಿಸುವುದೊಳಿತು…
೩. ಯಾವುದೇ professional ಆಗಲಿ ಗೂಗಲ್ ನೋಡಿಕೊಂಡು ಬಂದು ಕೆಲಸಕ್ಕೆ ಅಡ್ಡಿ ಮಾಡುವಾಗ ಕಿರಿಕಿರಿ ಸಹಜ (ಈಗ ನನ್ನಂತ ವೈದ್ಯನೂ ಅಲ್ಲದ ಬರಹಗಾರನೂ ಅಲ್ಲದವನ ಈ ವಾಕ್ಯ ತಮಗೆ ಕಿರಿಕಿರಿ ತಂದರೆ ಆಶ್ಚರ್ಯವಿಲ್ಲ)

2 Responses

 1. Krauncha says:

  ಅರ್ಹತೆ ಇಲ್ಲದವರು ಬರುವಂತೆ ಶಿಥಿಲಗೊಳಿಸಲಾಯ್ತು ಅನ್ನೋದು ಅಸಮಂಜಸ. ಒಂದು ವೇಳೆ ಅರ್ಹತೆ ಇಲ್ಲದಿದ್ದರೆ ಮುಂದೆ ಫೇಲ್ ಆಗಿ ಮನೆಗೆ ಹೋಗ್ತಾರೆ ಬಿಡಿ. ಆದರೆ ಮೀಸಲಾತಿ ಪ್ರಶ್ನೆ ಮಾಡೋರ ಪಾಯಿಂಟ್ ನನಗೆ ಅರ್ಥಾನೇ ಆಗಲ್ಲ. Kpme ಗೂ ಹಾಗೂ ಮೀಸಲಾತಿಯಿಂದ ಸೀಟ್ ತೊಗೊಳ್ಳೋದಕ್ಕು ಏನ್ರೀ ಸಂಬಂಧ? ….
  ಮೀಸಲಾತಿಯಿಂದ ಸೀಟ್ ತೊಗೊಂಡಾದ ಮೇಲೆ ಎಲ್ಲರ ತರಹ ಓದಿ ಅವರು ಪಾಸ್ ಆಗ್ಲೇ ಬೇಕಲ್ಲಾ. ಇದರಲ್ಲಿ ಮೆರಿಟ್ ವಿಷಯ ಎಂತದ್ದು…

  • ಸ್ವಾಮಿ, KPMEಗೂ ಮೀಸಲಾತಿಗೂ ಸಂಬಂಧವಿದೆಯ?
   ಇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ!:
   ೧. KPME ಉದ್ದೇಶ: ಖಾಸಗಿಯ ನಿಯಂತ್ರಣ
   ಅ) ಸ್ವನಿಯಂತ್ರಣವೇಕಿಲ್ಲ: ನುರಿತ ವೈದ್ಯರ ಕೊರತೆ ಹಾಗೂ ಸರ್ಕಾರಿ ಆಸ್ಪತ್ರೆಯ ಶೋಚನೀಯ ಸ್ಥಿತಿ!
   ಇ)ಅದೇಕೆ?: Performance orientation ಬದಲು Entitlement orientation! Entitlement ಜಾತಿ/ಧರ್ಮದಿಂದಿರಬಹುದು ಅಥವಾ ಸಂಪತ್ತಿನಿಂದಿರಬಹುದು. ಈ ವಿಧಾನದಿಂದ ಧಕ್ಷತೆ ಪೂರ್ಣವಾಗಿ ನಾಶವಾಗುವುದು ಹಾಗಾಗಿ ಈಗ ನುರಿತವರು ಸರ್ಕಾರಿ ಆಸ್ಪತ್ರೆ ಸೇರಿದರೂ Performance orientation ಇಲ್ಲದ ಸ್ಥಳದಲ್ಲಿ ಏನು ಮಾಡಬಲ್ಲರೋ?
   ೨. ಅವರೂ ಪಾಸ್ ಮಾಡಲ್ವೇ?: ಕಾಫಿ ಫಿಲ್ಟರ್ನಲ್ಲಿ ಕಾಫಿಪುಡಿಯ ಜೊತೆಗೆ ಚಿಕೋರಿ /ಕಲ್ಲುಮಣ್ಣು/ಹಿಟ್ಟು ಎಲ್ಲವನ್ನೂ ಹಾಕಿ ಎಲ್ಲಾ ಹಾಕ್ರಿ ಕಾಫಿ ಅಲ್ದೇ ಇರೋದು ನೀರಿನ ಜೊತೆ ಹೋಗಲ್ಲ – ಹೋಗತ್ತೆ ಬಿಡ್ರೀ ಅಂತ ಹೇಳ್ದಂಗಾಯ್ತು! ಚಿಕೋರಿ ೧೫% ವರೆಗೆ ಕಾಫಿಯ ಗುಣ ಉಳಿದಿರುತ್ತೆ! ಅದಕ್ಕಿಂತ ಹೆಚ್ಚಾದರೆ…
   ಈ ಉದಾಹರಣೆಯನ್ನು ಸಾಂದರ್ಭಿಕವಾಗಿ ಮಾತ್ರ ಸ್ವೀಕರಿಸಬೇಕು!

Leave a Reply

%d bloggers like this: