ಏಕಾಂತ ಮತ್ತು ವೈನ್ ಕರಗಿ ಆವಿಯಾದವು..

ವಿಜಯಭಾಸ್ಕರ್ ರೆಡ್ಡಿ 

ಮಿಕ್ಕ ಕನಸುಗಳನ್ನು ಕಟ್ಟಿ
ಮಿಕ್ಕ ವೈನ್ ಮೂಲೆಗೆಸೆದು
ಸಿಗರೇಟು ಫಿಲ್ಟರ್ ಹೀರುತ್ತಾ
ಮತ್ತಾದ ಹಸಿ ನಿದ್ರೆಯಲ್ಲಿ
ಕಳೆಯುವ ರಾತ್ರಿಗಳು ಮರುಗುತ್ತಿವೆ
ಕರಗುವ ಒಂದು ಹಿಡಿ ಆಸೆ

ಮಧ್ಯರಾತ್ರಿಯ ಪ್ರಶ್ನೆಗಳು
ಆಚರವನ್ನು ಗಂಟು ಕಟ್ಟಿದ ಗಳಿಗೆ
ವ್ಯಸನದ ಪಾಯಸವನ್ನು ಮತ್ತು
ಕಬಾಬ್ ನ ಮಿಕ್ಕ ಚೂರನ್ನು
ಕಳೆದುಕೊಂಡ ಹುಡುಗಿಯ ಸಾಲಲ್ಲಿ
ಕಾದ ಎದೆಗೆ ಒತ್ತಿ ಕಣ್ಣೀರಾದ ದಿನಗಳು
ಮತ್ತೆ ಹುಟ್ಟಿದ ಒಲವಿಗೆ ಚೂರು ವೈನ್ ಜಾಸ್ತಿ
ಕರಗಿದ ಕನಸಿಗೆ ಬೇರೆ ಫ್ಲೇವರ್ ಸಿಗರೇಟು
ತೊಯ್ದ ತುಟಿಗಳು ಬೆಚ್ಚಗಾಗುವುದು ನಿನ್ನಿಂದ ಮಾತ್ರ
ಹಗಲಾಗುವ ಹೊತ್ತಿಗೆ ಚೂರು ಮಿಕ್ಕ ನಿದ್ರೆ
ಏಕಾಂತ ಮತ್ತು ವೈನ್ ಕರಗಿ ಆವಿಯಾದವು

Leave a Reply