ಹುಡುಗಗೆರಡು ರೆಕ್ಕೆ ಬಂದು..

ನೀಲಿ-ನಕ್ಷತ್ರ 

ದಾದಾಪೀರ್ ಪಿ ಜೈಮನ್ 

 

ಶಾಲೆ ಬಿಡುವ ವೇಳೆ

ಹುಡುಗ ಬಿಡಿಸುವಂತೆ

ಬೇಡಿಕೊಂಡ ತಾರೆಗಳ ಚಿತ್ರ

ಮುಂಗೈ ಮೇಲೆ ಮಾಸ್ತರು

ಬರೆದರು ನೀಲಿ ನಕ್ಷತ್ರ

 

ಚಿಕ್ಕ ಚಿತ್ರ ಚಿತ್ತವಾಗಿ

ಚಿಟ್ಟೆಯಾಗಿ ಮೇಲಕೇರಿ

ಹಾರಿ ಹಾರಿ ಗಗನಸೇರಿ

ಹಂಸವರ್ಣ ತಾಳಿ ಹೊಳೆದು

ತಾರೆಗಣವ ಸೇರಿತು

ಗಗನ ಕುಸುಮವಾಯಿತು

 

ಉಳಿದ ನೀಲಿ ಶಾಯಿ ಗಂಧ

ಮೂಸುವುದಕೆ ಎಷ್ಟು ಚೆಂದ

ಮುಟ್ಟಿ ಮುಟ್ಟಿ ಮೂಸಿ ಮೂಸಿ

ಹುಡುಗಗೆರಡು ರೆಕ್ಕೆ ಬಂದು

ಭುವಿಯ ಬಂಧವೆಲ್ಲ ತೊರೆದು

ಅನಂತವನೆ ತಲುಪುವಲ್ಲಿ

ಕನಸು ಜಾರಿಬಿಟ್ಟಿತು

ಬೆಳಗು ಮೂಡಿಬಿಟ್ಟಿತು

 

ಮ್ಲಾನವದನನಾಗಿ ಹುಡುಗ

ಹಿತ್ತಲೆಡೆಗೆ ನಡೆದನು

ಒಡನೆ ಪುಳಕಗೊಂಡನು

ನಿನ್ನೆ ಕಂಡ ಬಾನತಾರೆ

ಇಂದು ಹೂವ ಬಿಂಬವಾಗಿ

ಅರಳಿ ಮರಳಿ ಬಂದಿದೆ

ಕಂಡು ಕಂಡು ಖುಷಿಯಗೊಂಡು

ಆನಂದದಿ ಮಿಂದು ತಿಂದು

ಕಲಿಯಲೆಂದು ಹೊರಟನು

ಶಾಲೆಯಲ್ಲಿ ಜಾಣ ಹುಡುಗ

ಸಂಜೆಗಾಗಿ ಕಾದನು

1 Response

  1. veda says:

    Chendada kavana

Leave a Reply

%d bloggers like this: