ಅಮ್ಮ ನೀಡಿದ ಮಡಿಲಕ್ಕಿ ಪ್ರಶಸ್ತಿ

 

ಭಾವನಾತ್ಮಕ ವಾತಾವರಣದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ
ಸಾಹಿತ್ಯ ಲೋಕದ ಅವಿಸ್ಮರಣೀಯ ಪ್ರಶಸ್ತಿ: ಎನ್ ಆರ್ ವಿಶುಕುಮಾರ್

ಅಮ್ಮ ಎಂದರೆ ಕಾಪಾಡುವ ಕೈ. ತೊಗರಿ ಬೇಳೆ ಕೊಟ್ಟು ಮಡಿಲಕ್ಕಿ ತುಂಬಿದಂತಾಯ್ತು. ತವರು ಪ್ರೀತಿ ನೆನಪಾಯ್ತು ಎಂದರು ಎಂ.ಆರ್.ಕಮಲ

ಸಾಹಿತ್ಯ ಲೋಕದಲ್ಲಿ ಕಳೆದ ಹದಿನೇಳು ವರ್ಷಗಳಿಂದ ಬದ್ಧತೆಯಿಂದ ನಡೆಸಿಕೊಂಡು ಬರುತ್ತಿರುವ ಅಮ್ಮ ಪ್ರಶಸ್ತಿ ನಿಜಕ್ಕೂ ಅವಿಸ್ಮರಣೀಯ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಹೇಳಿದರು.

ಸೇಡಂ ನಗರದ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನದ ವತಿಯಿಂದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಆಯೋಜಿಸಿದ್ದ 17ನೇ ವರ್ಷದ`ಅಮ್ಮ ಪ್ರಶಸ್ತಿ’ ಪ್ರದಾನ ಹಾಗೂ`ಅಮ್ಮ ಗೌರವ’ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ತಾಯಿಯನ್ನು ಪ್ರೀತಿಸುವರ ಸಂಖ್ಯೆ ದಿನ ಕಳೆದಂತೆ ಕಡಿಮೆಯಾಗುತ್ತಾ ಬರುತ್ತಿದೆ. ಮಾನವ ಕುಲ ಕೋಟಿಯನ್ನು ಪ್ರೀತಿಸುವ ವ್ಯಕ್ಯಿ ಸಮಾಜಕ್ಕೆ ಅವಶ್ಯನಾಗಿದ್ದಾನೆ, ವಾಸ್ತವದ ಪ್ರಜ್ಞೆ ಮನುಷ್ಯರಾದ ನಮ್ಮಲ್ಲಿ ಬೆಳೆಯಬೇಕಾಗಿದೆ. ಈ ಪ್ರತಿಷ್ಠಾನವು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಗೌರವ, ಪ್ರಶಸ್ತಿ, ಪುರಸ್ಕಾರ ಸಲ್ಲುತ್ತಿರುವುದು ಸಂತಸದ ವಿಚಾರ. ಅಮ್ಮ’ನ ಹೆಸರಿನ ಪ್ರಶಸ್ತಿ ಶ್ರೇಷ್ಠವಾದದ್ದು, ಇಲ್ಲಿ ಪ್ರದಾನ ಮಾಡುತ್ತಿರುವ ಪ್ರಶಸ್ತಿಯು ಸರ್ಕಾರದ ಯಾವುದೇ ಸಹಾಯವಿಲ್ಲದೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಂಥಾಲಯ ಇಲಾಖೆ ನಿರ್ದೆಶಕ ಸತೀಶಕುಮಾರ ಹೊಸಮನಿ, ಉದ್ಯಮಿ ರಾಜಗೋಪಾಲರೆಡ್ಡಿ ಭಾಗವಹಿಸಿದ್ದರು. ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ ವೇದಿಕೆಯಲ್ಲಿದ್ದರು.

ಪ್ರಸ್ತುತ ಸಾಲಿನ ಪ್ರಶಸ್ತಿಗೆ ಆಯ್ಕೆಯಾದ ಎಂ.ಆರ್.ಕಮಲ, ರಾಜಾರಾಂ ತಲ್ಲೂರ, ರೇಖಾ ಕಾಖಂಡಕಿ, ಎಚ್.ಆರ್.ಸುಜಾತಾ, ಗಿರೀಶ ಜಕಾಪುರೆ ಅವರಿಗೆ ಅಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡ ನಾಡು, ನುಡಿಗೆ ಸಲ್ಲಿಸಿದ ಸೇವೆಗೆ ಡಾ.ಚನ್ನಣ್ಣ ವಾಲಿಕಾರ, ಎ.ರಮೇಶ ಉಡುಪ, ಡಾ.ಎಸ್.ಎಸ್.ಗುಬ್ಬಿ, ಡಾ.ರಮೇಶ ಐನಾಪೂರ ಅವರಿಗೆ ಅಮ್ಮ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.

ಕಲಬುರಗಿಯ ಕಿರಣ್ ಪಾಟೀಲ, ಶ್ರವಣಕುಮಾರ ಮಠ, ರೆಹಮಾನ ಮಸ್ಕಿ `ಅಮ್ಮ’ನ ಕುರಿತು ಹಾಡುಗಳನ್ನು ಹಾಡಿದರು.

ಪ್ರತಿಷ್ಠಾನದ ಸಂಸ್ಥಾಪಕ ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿ, ಸ್ವಾಗತಿಸಿದರು. ರಂಗಕರ್ಮಿ ಪ್ರಭಾಕರ ಜೋಶಿ ಪ್ರಾಸ್ತವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ನಾಗಪ್ಪ ಮಾಸ್ತರ್ ಮುನ್ನೂರ ಅವರ ಸ್ಮರಣಾರ್ಥ ಸಲಿಮಾ ಸಾದಿಕ್ ಮತ್ತು ರತ್ನಮ್ಮ ಶರಣಪ್ಪ ತಳವಾರ ಅವರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.

ರಂಗಾಯಣ ನಿರ್ದೇಶಕ ಮಹೇಶ ಪಾಟೀಲ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಶ್ವರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ, ಅನಂತರೆಡ್ಡಿ ಪಾಟೀಲ, ರಾಜಕುಮಾರ ಪಾಟೀಲ ತೆಲ್ಕೂರ್, ಪತ್ರಕರ್ತ ಪಿ.ಎಂ.ಮಣ್ಣೂರ, ಲೇಖಕರಾದ ಗವೀಶ ಹಿರೇಮಠ, ಡಾ.ಶ್ರೀಶೈಲ ಬಿರಾದಾರ, ಸಿದ್ದಪ್ಪ ತಳ್ಳಳ್ಳಿ, ಹಾಶರೆಡ್ಡಿ ಮನ್ನೆ, ಭೀಮಣ್ಣ ಆಡಕಿ, ರವೀಂದ್ರ ಮುನ್ನೂರ್, ಓಂಪ್ರಕಾಶ ಗಂವ್ಹಾರ, ಶಿವಶರಣರೆಡ್ಡಿ ಪಾಟೀಲ, ಸಂತೋಷ ಕುಲಕರ್ಣಿ ಇತರರಿದ್ದರು.

4 Responses

 1. M R kamala says:

  Thank you very much Avadhi 🙂

 2. H.R.sujatha says:

  Tnku ಅವಧಿ, ನಿಮ್ಮದೇ ಪುರಸ್ಕಾರ ಅದು, ನಿಮ್ಮ ಮುಖಪುಟದಲ್ಲಿ ಬರೆದ ಬರಹಕ್ಕೆ ಸಿಕ್ಕ ಅಭಿಮಾನ.
  ಪುರಸ್ಕಾರ .

 3. Kaligananath Gudadur says:

  ನಿಜವಾಗಿಯೂ ಭಾವನಾತ್ಮಕ ಕಾರ್ಯಕ್ರಮ. ಸೇಡಂನಿಂದ ಇಡೀ ನಾಡಿಗೆ ಹಬ್ಬಿರುವ “ಅಮ್ಮ”ನ ಪ್ರೀತಿ ಅನುಭವಿಸಬೇಕಷ್ಟೇ. ಮುನ್ನೂರು ಬಾಂಧವರಿಗೆ ನೂರು ನಮನ.

 4. Lakshmi Shankar joshi says:

  ಅಮ್ಮ ಎಂದರೆ ಮೈ ಮನ ಹೂವಾಗುವಂತೆ,ಕಾರ್ಯಕ್ರಮ ಕೂಡ ಅತ್ಯಂತ ಭಾವನಾತ್ಮಕವಾಗಿರುತ್ತದೆ.ಸಂಚಾಲಕಿ ರತ್ನಕಲಾ ಹಾಗೂ ಮುನ್ನೂರ್ ದಂಪತಿಗಳು ಅಭಿನಂದನಾರ್ಹರು….

Leave a Reply

%d bloggers like this: