ಹೊಳಪು ಕಂಗಳ ಹುಡುಗಿ..

ಲಹರಿ ತಂತ್ರಿ 

ಹೂ ಎಸಳುಗಳಿಗೆ ರೇಶಿಮೆಯ ಬಣ್ಣ
ಭೂಮಿಗೆ ತಂದವರಾರು ಅಂಗೈಯಲ್ಲಿ ಇಟ್ಟವರಾರು?

ಗಾಳಿ ಬೀಸಿದಂತೆಲ್ಲ ತೆರೆದುಕೊಳ್ಳುವ ರೆಕ್ಕೆ
ನವಿಲ ಗರಿಯ ನೇಯ್ದವರಾರು ಬೆನ್ನಿಗೆ ನವಿರಾಗಿ ಪೋಣಿಸಿದವರಾರು?

ಎದೆನದಿಯಲ್ಲಿ ಸದಾ ಹರಿವ ಪ್ರೀತಿ ಜೇನು
ಅಮೃತದ ಹೊಳೆಗೆ ಅಡ್ಡಗಟ್ಟಿದವರಾರು ಕಲ್ಲಿನ ಅಣೆಕಟ್ಟು ಕಟ್ಟಿದವರಾರು?

ಹುಡುಗಿಯವಳು,,
ಹೂವಂತೆ ಅರಳಿದಳು; ಹಕ್ಕಿಯಂತೆ ಹಾರಿದಳು; ನದಿಯಂತೆ ಹರಿದಳು..

ಹೊಳಪು ಕಂಗಳ ಹುಡುಗಿ ನಕ್ಷತ್ರವಾದಳು
ಆಕಾಶದ ತುಂಬೆಲ್ಲ ಹರಡಿಕೊಂಡಳು!

1 Response

  1. ವಿವೇಕಾನಂದ says:

    ಸೊಗಸು ಮನದಲಿದ್ದರ ಪದಗಳು ಮಾಂತ್ರಿಕತೆ ಪಡೆಯುತ್ತವೆ… ಮಗೂ ಮುದ್ದಾದ ಕವನ. ..

Leave a Reply

%d bloggers like this: