ಬೆಂಗಳೂರಿನಲ್ಲಿ ‘ಕನ್ನಡತಿ ಉತ್ಸವ’

ಕನ್ನಡತಿ ಉತ್ಸವ

ಡಿಸೆಂಬರ್ 8-10, 2017 

‘ಅವಳ ಹೆಜ್ಜೆ’ ತಂಡ ಆಯೋಜಿಸಿರುವ  “ಕನ್ನಡತಿ ಉತ್ಸವ”ವನ್ನು ಖ್ಯಾತ ಕವಿ ಮತ್ತು ಅಭಿನೇತ್ರಿ  ಪದ್ಮಾವತಿ ರಾವ್ ಅವರು ಡಿಸೆಂಬರ್ 8 ರಂದು 11 ಗಂಟೆಗೆ ಉದ್ಘಾಟಿಸಲಿದ್ದು, ಥ್ರೋ ಬಾಲ್ ಭಾರತೀಯ ತಂಡದ ಕ್ಯಾಪ್ಟನ್ ಕೃಪಾ ಪ್ರಸಾದ್ ಸಹಾ  ಭಾಗವಹಿಸಲಿದ್ದಾರೆ.

ವರ್ಣಚಿತ್ರ, ಕವಿತೆ, ಲೇಖನ ಮತ್ತು ಪುಸ್ತಕಗಳ ಪ್ರದರ್ಶನ ಮೂರೂ ದಿನ ಬೆಳಿಗ್ಗೆ 11 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ.

ಕಿರು-ಚಲನಚಿತ್ರಗಳು, ನೇರ ಪ್ರದರ್ಶನಗಳು ಮತ್ತು ಸಂವಾದ ಸರಣಿಯ ವೇಳಾಪಟ್ಟಿ ಹೀಗಿದೆ:

8 ಡಿಸೆಂಬರ್, ಶುಕ್ರವಾರ

11:00                ಉದ್ಘಾಟನೆ:  ಖ್ಯಾತ ಕವಿ ಮತ್ತು ಅಭಿನೇತ್ರಿ ಪದ್ಮಾವತಿ ರಾವ್

12:00-13:00     ಸಂವಾದ 1: ಉದ್ಯಮಿಗಳ ಜಗತ್ತು

14:00-15:00     ಸಾಕ್ಷ್ಯಚಿತ್ರ: ಸ್ತ್ರೀ ನಾಟಕ ಮಂಡಳಿ ಬಗ್ಗೆ ದಿ. ಪ್ರೇಮಾ ಕಾರಂತ್

17:00-18:00     ಕುಡಿತಿನಿಯ ಅಕ್ಕನಾಗಮ್ಮ ಅವರಿಂದ ಜನಪದ ಸಂಗೀತ

9 ಡಿಸೆಂಬರ್, ಶನಿವಾರ    

12:00-13:00      ಸಾಕ್ಷ್ಯಚಿತ್ರ:  “ಸಾಂಗ್ ಆಫ್ ದಿ ಸೈಕಿ” – ವಿಮೋಚನಾ ಸಂಸ್ಥೆ

15:00-16:00      ಸಂವಾದ 2:  ಪಕ್ಷಗಳನ್ನು ಮೀರಿದ ರಾಜಕೀಯ

17:00-18:00      ಜಿ. ಎಸ್. ಶಾರದಾ ಅವರಿಂದ ಜಾದೂ ಪ್ರದರ್ಶನ

10 ಡಿಸೆಂಬರ್, ಭಾನುವಾರ 

11:30-12:00      “ರಕ್ತಾಕ್ಷಿ” ಯ ಒಂದು ಅಂಕ – ದೀಪದ ಮಲ್ಲಿಯವರಿಂದ

12:00-13:00      ಸಂವಾದ 3: ಮಾರ್ಗದರ್ಶಕರನ್ನು ಹುಡುಕುತ್ತಾ…

14:00-15:00     ಸಾಕ್ಷ್ಯಚಿತ್ರ: ಕಾಲುವೆಯಾ ಕಾಲ – ನೃತ್ಯದರ್ಪಣ

17:00-18:00      ರಂಗಲಕ್ಷ್ಮಿಯವರಿಂದ ಹಾಸ್ಯ ಪ್ರದರ್ಶನ

Leave a Reply