ವಾನಳ್ಳಿಯವರೂ.. ‘ಕುಮಾರತ್ವ’ವೂ..

9 Responses

 1. Sumangala says:

  ಅಯ್ಯಯ್ಯೋ… “ಖ್ಯಾತ ಕಥೆಗಾರ್ತಿ” ವಿಶೇಷಣ ನಂಗೆ ಹೆಚ್ಚಾಯ್ತೂರಿ!!

 2. Sumangala, well said!

 3. Gopinath Rao says:

  ವಾನಳ್ಳಿಯವರ ಪದಪ್ರಯೋಗಕ್ಕೂ ಕಂಬಾರರೋ ನಾಗತಿಹಳ್ಳಿಯವರೋ – ಕಥೆಗಾರರ ಪಾತ್ರವೊಂದರಲ್ಲಿ ಬರಬಹುದಾದ ವ್ಯಾಖ್ಯಾನಕ್ಕೂ ವ್ಯತ್ಯಾಸ ಇದೆ.
  ನಾವು ಬೆಳೆದು ಬಂದ ಪರಿಸರ, ಓದಿಕೊಂಡು ಬಂದ ಹಿಂದಿನವರ ಸಾಹಿತ್ಯ ಇಂತಹ ಉಪಮೆಗಳ ಪ್ರಯೋಗಕ್ಕೆ ಕಾರಣ. ಬರವಣಿಗೆಯಲ್ಲಿ ಈ ರೀತಿ ಬರದ ಹಾಗೆ ನೋಡಿಕೊಳ್ಳುವುದು ಲೇಖಕನ ಕರ್ತವ್ಯ. ಭಾಷಣದಲ್ಲಿ ಮಾತಿನಭರದಲ್ಲಿ ಇಷ್ಟೂ ದಿನ ಅವ್ಯಾಹತವಾಗಿ ತಾವು ಓದಿಕೊಂಡು ಬಂದಿದ್ದ ಸಾಹಿತ್ಯದ ಪ್ರಭಾವದಿಂದ ಕೆಲವೊಮ್ಮೆ ಈ ರೀತಿಯ ಮಾತುಗಳು ನುಸುಳಿ ಬಂದು ಬಿಡುವುದುಂಟು. ಈ ರೀತಿಯ ತಪ್ಪು ಮಾಡಿದ್ದೇನೆ ಎಂಬುದು ಅರಿವಾಗುವುದೂ ಕೆಲವೊಮ್ಮೆ ಇನ್ನೊಬ್ಬರು ತಿಳಿಸಿದ ಮೇಲೆಯೇ! ನಾರೀತ್ವದ ಅಪಮಾನ ಮುಖ್ಯ ಉದ್ದೇಶವಾಗಿಲ್ಲದ ಇಂತಹ ಹೇಳಿಕೆಗಳನ್ನು ಅವರ ಅವಗಾಹನೆಗೆ ತಂದು ಮರೆತು ಬಿಡುವುದು ಒಳ್ಳೆಯದು.
  ಸಾಹಿತಿಯೋರ್ವರು ತಮ್ಮ ಪಾತ್ರ ಚಿತ್ರಣದಲ್ಲಿ ಇಂತಹ ಹೇಳಿಕೆಗಳನ್ನು ಬಳಸಬಹುದೇ ಎನ್ನುವುದು ತರ್ಕಯೋಗ್ಯ ಪ್ರಶ್ನೆ. ಉದಾಹರಣೆಗೆ ಅಜ್ಜಿಯ ಪಾತ್ರವೊಂದು ಮೊಮ್ಮಗಳನ್ನು ಜರೆಯುವ ಸಮಯದಲ್ಲಿ ಅಜ್ಜಿ ಬಾಯಲ್ಲಿ ಬರುವ ಮಾತುಗಳು ಸ್ತ್ರೀದೂಷಣೆಗಳೇ ಆಗಿರುತ್ತವೆ. ಹಾಗೆಯೇ ಲೇಖಕ ಬರೆದರೆ ಅದು ಲೇಖಕನ ಮಾತು ಎನ್ನುವುದು ಎಷ್ಟು ಸಮಂಜಸ? ಪಾತ್ರ ಚಿತ್ರಣದ ಔಚಿತ್ಯ ಹಾಗೂ ಸ್ತ್ರೀತ್ವದ ದೂಷಣೆಗಳೆರಡರ ನಡುವೆ ಲೇಖಕ ಎಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು?

  ಯಾರೇ ಆಗಲಿ, ಮಾತನ್ನು, ಬರವಣಿಗೆಯನ್ನು ಹಿಂಪಡೆಯಬಹುದು, ತಿದ್ದಿಕೊಳ್ಳಬಹುದು. ಆಶಯ, ಮನಸ್ಸು ಶುದ್ಧವಾಗಿರಬೇಕಾದುದು ಮುಖ್ಯ.

  • Sumangala says:

   ಒಂದು ಸ್ಪಷ್ಟೀಕರಣ – ನಾಗತಿಹಳ್ಳಿಯವರು ಅವರ ಕಥೆಯಲ್ಲಿ ಈ ಮಾತನ್ನು ಹೇಳಿರಲಿಲ್ಲ, ಅವರು ಮೈಸೂರು ವಿವಿಯನ್ನು ಮೆನೋಪಾಸ್ ಆದ ಹೆಂಗಸರಿಗೆ ಹೋಲಿಸಿದ್ದು ಮಯೂರದಲ್ಲಿ ಹಿಂದೆ ನಡೆದ ವಿವಿಗಳ ಗುಣಮಟ್ಟ ಕುರಿತ ಚರ್ಚೆಯಲ್ಲಿ. ಹಾಗೆಯೆ ಭೂಮಿಯನ್ನು ಚಪ್ಪಟೆ ಎದೆಗೆ ಹೋಲಿಸಿದ್ದು ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ ಅವರ ಪ್ರವಾಸ ಕಥನದ (ನನಗೆ ಪ್ರವಾಸ ಕಥನದ ತಲೆಬರೆಹ ಮರೆತಿದೆ) ಲೇಖನದಲ್ಲಿ.

 4. Ashalatha, Mangaluru says:

  ಲೇಖಕರೆಲ್ಲ ಹೆಣ್ಣನ್ನು ಹೋಲಿಸಿ ಕೊಡುವ ಉಪಮೆಗಳನ್ನು ಚೆನ್ನಾಗಿ ವಿಮರ್ಶೆ ಮಾಡಿದ್ದೀರಿ.

 5. ಲೋಕೇಶ್ Mosale says:

  ವಾನಳ್ಳಿ ಯವರು ಕನ್ಯತ್ತ್ವ ಇಟ್ಟು ಕೊಂಡು ಈಗ ಪೀಠಾಧಿಪತಿ ಯಾಗಿದ್ದಾರೆ !!! ಏನೋ ರಾಮಕೃಷ್ಣ ಆಶ್ರಮದಲ್ಲಿ ಕಲಿತು (ಸ್ವಲಿಂಗಿಗಳೋದಿಗೆ) ಸಮಾಜಕ್ಕೆ “ಕನ್ಯತ್ತ್ವ ” ಪಾಠ ಮಾಡಿ ಮೌನವಹಿಸಿದ್ದಾರೆ . “ಕನ್ಯತ್ತ್ವ “ಇಟ್ಟುಕೊಂಡು ಬಾಳು ನಡೆಸುತ್ತಿರುವ ಇವರ ಬರಹ – ಬದುಕು ನಡೆ – ನುಡಿ-ಮಾತು- ದನಿ ಯಲ್ಲವೂ”ಕನ್ಯತ್ತ್ವ “ಉಳಿಸಿ ಕೊಂಡ “ಕನ್ಯೆ”ಯಂತೆಯೇ…ಶಾಂತಂ ಪಾಪಮ್….!! ಪಾಪ ಹೆಣ್ಣು ಮಕ್ಕಳ ತಂದೆಯಾಗಿ ನೂರಾರು ವಿದ್ಯಾರ್ಥಿಗಳ ಪ್ರೊಫೆಸರ್ ,ಗುರುಗಳಾಗಿ, ಡಾಕ್ಟರ್ ವಾನಳ್ಳಿ ಯವರು ಮಹಿಳೆಯರನ್ನು ನಿಂದಿಸುವುದು ಉಂಟೆ ? ಅವರ ಸಂಸ್ಕಾರ- “ಕನ್ಯತ್ತ್ವ”ವನ್ನು ದಯಮಾಡಿ ಹಾಳು ಮಾಡಬೇಡಿ . ಅಚ್ಛೆ ದಿನಗಳು ಬಹು ದೂರವಿಲ್ಲ,

 6. ಆನಂದ್ ಋಗ್ವೇದಿ says:

  ಅದೊಂದು ತುಟಿ ಮೀರಿದ ಮಾತಷ್ಟೇ ಅಲ್ಲ. ಅದರಲ್ಲಿ ಈ ಸಮಾಜ ಪೋಷಿಸಿಕೊಂಡು ಬಂದ ಕನ್ಯತ್ವದ ಬಗೆಗಿನ ನಂಬುಗೆಯೇ ಗಟ್ಟಿಯಾಗಿ ಉಪಮೆಯಾಗಿದೆ. ಕಾನೀನರನ್ನು ಹೊಂದಿರುವ ಮಹಾಭಾರತವೇ ಇವರಿಗೆ ಪವಿತ್ರ ಗ್ರಂಥವಾಗಿರುವಾಗ ಕನ್ಯತ್ವ ಒಂದು ಪ್ರಶ್ನಾರ್ಹ ಸಂಗತಿ ಆಗಬಾರದಿತ್ತು. ಸಾರ್ವಜನಿಕ ವಿಶ್ವಾಸಾರ್ಹತೆ ಬಗ್ಗೆ ಹೋಲಿಕೆಗೂ ಈ ಪದ ಬಳಕೆ ಅನಗತ್ಯ ಎಂಬುದು ತಿಳಿದವರಷ್ಟೇ ಪ್ರಾಜ್ಞರು. ಉಳಿದವರು ಗಂಡಸರು ಮಾತ್ರ!!

 7. .ಮಹೇಶ್ವರಿ.ಯು says:

  ಗೋಪಿನಾಥರಾವ್ ಅವರ ಪ್ರತಿಕ್ರಿಯೆಗೆ ನನ್ನದೂ ಸಹಮತವಿದೆ.ನಾವಾಡುವ ಭಾಷೆಯ ಹಿಂದೆ ನಮ್ಮ ಹಿರಿಯರಿದ್ದಾರೆ.ನಮ್ಮ ಸಾಮಾಜಿಕ ವ್ಯವಸ್ಥೆ ಇದೆ.ಭಾಷೆ ಎನ್ನುವುದು ಕಲಿತು ಬಂದಂಥದ್ದು.ಈ ಮತ್ತು ಇಂತಹ ಪ್ರಯೋಗಗಳು ನಮಗರಿವಿಲ್ಲದೆ ಬಂದು ಬಿಡಬಹುದು. ಉದಾಹರಣೆಗೆ’ ಕನ್ನೆನೆಲ’ದಂತಹ ಪ್ರಯೋಗಗಳು ಕೂಡ. ಇದಕ್ಕೆ ಆ.- ಈ ವ್ಯಕ್ತಿಹೊಣೆಗಾರರಾಗಿರುವುದಿಲ್ಲ.ಇಂತಹ ಪ್ರಯೋಗಗಳು ಲೇಖಕಿಯರಿಂದಲೂ ಬರಬಹುದು. ಹಾಗಂತ ಈ ಪ್ರಯೋಗಗಳನ್ನು ನಾನು ಸಮರ್ಥಿಸುತ್ತಿದ್ದೇನೆಂದು ಅರ್ಥವಲ್ಲ.ಈ ಸೂಕ್ಷ್ವವನ್ನು ತಿಳಿಯಹೇಳುವುದು, ಅದರ ಕುರಿತು ಗಮನ ಹರಿಸುವುದು ಮುಖ್ಯ ಹೊರತು ಒಬ್ಬ ವ್ಯಕ್ತಿಯನ್ನು ವೈಯಕ್ತಿಕವಾಗಿ ಸ್ತ್ರೀದ್ವೇಷಿ ಎಂಬಂತೆ ಹಳಿಯುವುದು ವಿವೇಕವೆಂದು ನನಗನಿಸುವುದಿಲ್ಲ.

  • Rekha Chouhan says:

   Well said Sumangala, they also undergo something called andropouse almost in the same age as women go through, they also loose shoulders and become flat, they also begin looking dull as they age . .They also incapable of doing many things much before a women of same age. But they must have enough sense to understand this dimension as well. The sensible Saahiti. . can never make such comments because only they can see life in many dimensions.

Leave a Reply

%d bloggers like this: