ಕಾಂಡೊಮ್ ಜಾಹೀರಾತು ನಿಷೇಧ ಏಕೆ..?

 

 

 

 

 

ಜ್ಯೋತಿ ಅನಂತಸುಬ್ಬರಾವ್ 

 

 

 

 

 

ಮಾಧ್ಯಮಗಳಲ್ಲಿ ಕಾಂಡೊಮ್ ಜಾಹೀರಾತುಗಳನ್ನು ನಿರ್ದಿಷ್ಟ ಸಮಯದಲ್ಲಿ ಸಂಪೂರ್ಣ ನಿಷೇಧ ಮಾಡಬೇಕೆನ್ನುವ ಸರ್ಕಾರದ ಧೋರಣೆ ಆರೋಗ್ಯಕರವೆನಿಸುವುದಿಲ್ಲ.

ಜಾಹೀರಾತುಗಳು ಸೂಚ್ಯವಾಗಿ ವಿಷಯವನ್ನು ತಿಳಿಸುವಂತೆಯೂ ಇರಲು ಸಾಧ್ಯ. ಕಾಂಡೊಮ್ ಜಾಹೀರಾತುಗಳು ವ್ಯಾಪಾರದ ದೃಷ್ಟಿಯಿಂದ ಇದ್ದಾಗಲೇ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಬರುವುದು. ವ್ಯಾಪಾರದ ಮನಸ್ಥಿತಿಗೆ ಸಮಾಜದ ಆರೋಗ್ಯಕ್ಕಿಂತ ತನ್ನ ಲಾಭ ಮುಖ್ಯವಾಗುತ್ತದೆ. ಆದ್ದರಿಂದಲೇ ಇಂತಹ ಜಾಹೀರಾತುಗಳಲ್ಲಿ ಹೆಣ್ಣಿನ ದೇಹವನ್ನೂ ಅತಿ ಕೆಟ್ಟದಾಗಿ ಚಿತ್ರಿಸಲಾಗುತ್ತದೆ, ಹೆಣ್ಣನ್ನು ಭೋಗದ ವಸ್ತು ಎಂಬಂತೆ ಪ್ರತಿಬಿಂಬಿಸಲಾಗುತ್ತದೆ. ಅಂತಹವುಗಳನ್ನು ಯಾವುದೇ ಸಮಯದಲ್ಲಿ ಎಲ್ಲೇ ಬಿತ್ತರಿಸಿದರೂ ಅಪಾಯ ಕಟ್ಟಿಟ್ಟ ಬುತ್ತಿಯೇ.

ಆದ್ದರಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು, ಯುವಜನರ ಆರೋಗ್ಯ ಕಾಪಾಡಲು ಕಾಂಡೊಮ್ ಬಗ್ಗೆ ತಿಳುವಳಿಕೆ ನೀಡುವುದು ಅತ್ಯಗತ್ಯ. ಅಂತಹ ಜಾಹೀರಾತುಗಳನ್ನು ಆರೋಗ್ಯ ಇಲಾಖೆ ಸಿದ್ಧಪಡಿಸಿದರೆ ಒಳ್ಳೆಯದು. (ಆರೋಗ್ಯ ಇಲಾಖೆ ಗರ್ಭನಿರೋಧಕಗಳ ಬಗ್ಗೆ ಪ್ರಚಾರ ಮಾಡುತ್ತಿದ್ದುದು ನೆನಪಿಗೆ ಬರುತ್ತದೆ).

ಕಾಂಡೊಮ್ ಕಂಪನಿಗಳ ಲಾಭದ ದಾಹಕ್ಕೆ ಹೆಣ್ಣು ಬಲಿಯಾಗಬಾರದು, ಹಾಗೆಯೇ ಸಂಪ್ರದಾಯವಾದಿ ಮನಸ್ಥಿತಿಯ ಕೇಂದ್ರ ಸರ್ಕಾರದ ಹುಚ್ಚು ತೀರ್ಮಾನಗಳಿಗೆ ಸಮಾಜದ ಆರೋಗ್ಯವೂ ತುತ್ತಾಗಬಾರದು. (HIV ನಿಯಂತ್ರಣ ಕಾರ್ಯಕ್ರಮದಡಿ ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಲಾಗುತ್ತಿದ್ದ ಕಾಂಡೊಮ್ ಗಳನ್ನೂ ಈ ಸರ್ಕಾರ ಕಡಿತಗೊಳಿಸಿದ್ದ ನಿದರ್ಶನಗಳೂ ಇಲ್ಲದಿಲ್ಲ.) ವೈಜ್ಞಾನಿಕತೆಯ ಆಧಾರದಲ್ಲಿ ಕಾರ್ಯಪ್ರವೃತ್ತರಾಗದೆ ಸಮಸ್ಯೆಗಳನ್ನು ಉಲ್ಬಣ ಮಾಡಿಕೊಳ್ಳುವುದು ದೇಶಕ್ಕೆ ಅಪಾಯಕಾರಿ.

ಇನ್ನೊಂದು ವಿಷಯ; ಕಾಂಡೊಮ್ ಜಾಹೀರಾತು ನಿಷೇಧ ಮಾಡುವ ಕೇಂದ್ರ ಸರ್ಕಾರ ಜನರಲ್ಲಿ ಮೌಢ್ಯ ಬಿತ್ತುವುದನ್ನು ಏಕೆ ನಿಲ್ಲಿಸುವ ಯೋಚನೆಯನ್ನೂ ಮಾಡಲಾರದು? ಬೆಳಿಗ್ಗೆ ಕಣ್ಣು ತೆರೆದಾಗಿನಿಂದಲೂ ಕಣ್ಣು ಮುಚ್ಚುವ ವರೆಗೂ ಮಾಧ್ಯಮಗಳಲ್ಲಿ ಒಂದಲ್ಲೊಂದು ರೀತಿ ಮೌಢ್ಯ ಬಿತ್ತುವ ಕಾರ್ಯಕ್ರಮ, ಜಾಹೀರಾತುಗಳು ಪ್ರಸಾರವಾಗುತ್ತಿದ್ದರೂ ಅವುಗಳು ಕಾಂಡೊಮ್ ಜಾಹಿರಾತಿಗಿಂತ ಸುರಕ್ಷಿತ ಎಂದು ತಿಳಿದಿದೆಯೇ ಸರ್ಕಾರ? ಮೊದಲು ಕೇಂದ್ರ ಸರ್ಕಾರದ ಅವಿವೇಕತನ ಮತ್ತು ಮೌಢ್ಯ ನಿವಾರಣೆಗೆ ಯಾವುದಾದರೂ ಹೋಮ ಮಾಡಿಸಬೇಕು!

3 Responses

  1. Shashidhara says:

    If you have small kids at home, you would have understood and supported this decision. Day by day due to competition, these advts are getting very bold.It is better govt has addressed this at least now.

  2. raheem ujire says:

    Superb

  3. ನಿಮ್ಮ ನಿಲುವಿಗೆ ನನ್ನದೊಂದು ಓಟು. ನಿಮ್ಮ ಅನಿಸಿಕೆ ಸರಿಯಾಗಿದೆ.ಸರ್ಕಾರಗಳಿಗೆ ಈ ಪರಿಯ ವಿವೇಕ ಬರುವುದು ಯಾವಾಗ?

Leave a Reply

%d bloggers like this: