‘ಮಲ್ನಾಡ್ ಪ್ರೆಶ್’ ಮಥಾಯಿಸ್

ರೈತರ ದಿನಾಚರಣೆ
ಮಥಾಯಿಸ್ ಹೊಸ ಯತ್ನ

ಶಿವಾನಂದ ತಗಡೂರು 

ಜಾನ್ ಮಥಾಯಿಸ್
ಒಂದು ಕಾಲಘಟ್ಟಕ್ಕೆ
ಅಕ್ಷರ ಲೋಕದವರಿಗೆ ಈ ಹೆಸರು ಚಿರಪರಿಚಿತ.

ಹೌದು‌ ಅದೇ ಜಾನ್ ಮಥಾಯಿಸ್ ರಿಪೋರ್ಟಿಂಗ್ ನಲ್ಲಿ ಎತ್ತಿದ ಕೈ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಒಂದಿಲ್ಲೊಂದು ವಿಷಯದ ಮೇಲೆ ಬೆಳಕು ಚೆಲ್ಲುತ್ತಿದ್ದ ಅವರು, ಚಳವಳಿ ರೂಪದಲ್ಲಿ ಬಂದ ಜನವಾಹಿನಿ ಪತ್ರಿಕೆಗೂ ಶಕ್ತಿಯಾಗಿದ್ದರು. ಆ ಪತ್ರಿಕೆ ಸಂಪಾದಕರಾಗಿ ಜವಾಬ್ದಾರಿ ನಿಭಾಯಿಸಿದರು.
ಯಾಕೊ ಬಳಿಕ ಅಕ್ಷರ ಲೋಕದಿಂದ ದೂರವೆ ಸರಿದುಬಿಟ್ಟರು.

ಹೈನೋದ್ಯಮ ಸೇರಿದಂತೆ ಕೆಲ ಹೊಸ ಉದ್ಯಮ ಪ್ರಯತ್ನಗಳಲ್ಲಿ ಕೈ ಸುಟ್ಟುಕೊಂಡರು.
ಈಗ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅದೇ ಮಲ್ನಾಡ್ ಪ್ರೆಶ್.

ಪಶ್ಚಿಮ ಘಟ್ಟಗಳ ರೈತರು ಬೆಳೆದು ಸಂಸ್ಕರಿಸಿದ ಆಹಾರ ಉತ್ಪನ್ನಗಳ (ಸಹಜ ಸಾವಯವ ಕೃಷಿ) ಮಾರಾಟ ಮಳಿಗೆಯನ್ನು ಬೆಂಗಳೂರೆಂಬ ಮಾಯಾನಗರಿಯ ಸಹಕಾರ ನಗರದಲ್ಲಿ ಪ್ರಾರಂಭಿಸಿದ್ದಾರೆ.

ಬೆಳಿಗ್ಗೆ ಅಲ್ಲಿಗೆ ಹೊರಟಾಗ ನಮ್ಮ ಪತ್ರಿಕೆಯ ರುದ್ರಣ್ಣ ಹರ್ತಿಕೋಟೆ ಅವರು ಜೊತೆಯಾದರು.

ಸಹಕಾರ ನಗರದಲ್ಲಿ ಹಳೆ ಜನವಾಹಿನಿ ಬಳಗದವರೆಲ್ಲ ಸಿಕ್ಕರು. ರುದ್ರಪ್ಪ ಬಂದಿದ್ರು. ಜಂಗಲ್ ಲಾಡ್ಜ್ ಅಧ್ಯಕ್ಷ ಮಹೇಶ್ ಸೇರಿದಂತೆ ಅನೇಕರಿದ್ದರು.
ನಮ್ಮ ಜೊತೆಗೆ ಬಾಗೂರು-ನವಿಲೆ ಹೋರಾಟದಲ್ಲಿ ಭಾಗವಹಿದ್ದ ಕಾಮ್ರೆಡ್ ಸಾಥಿ ಸುಂದರೇಶ್ ದಂಪತಿಗಳು ಸಿಕ್ಕಿದ್ದರು.

ಸಚಿವ ರಾಮಲಿಂಗ ರೆಡ್ಡಿ, ನಟ ರಾಮಕೃಷ್ಣ ಹೊಸ ಮಳಿಗೆ ಉದ್ಘಾಟಿಸಿದರು.

ಅಂಗಡಿಯಲ್ಲಿ
ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ರಾಷ್ಟ್ರಕವಿ ಕುವೆಂಪು, ತೇಜಸ್ವಿ ಅವರು ಪೋಟೋಗಳು ಗಮನಸೆಳೆದವು.

ಅಲ್ಲಿ ಎಲ್ಲವೂ ಸಾವಯವ ತಿಂಡಿ ಉಪಚಾರವೂ ಜೋರಾಗಿತ್ತು. ಎಲ್ಲ ಕಡೆಗೂ ಮಲ್ನಾಡ್ ಪ್ರೆಶ್ ಮಳಿಗೆ ವಿಸ್ತರಿಸಲಿ ಎಂದು ಶುಭ ಹಾರೈಸಿ ಹೊರಟೆವು.

ನೀವು ಮಲ್ನಾಡ್ ಪ್ರೆಶ್ ಗೆ ಭೇಟಿ ಕೊಡಿ. ಯಾವುದೇ ಕಲಬೆರಕೆ ಇಲ್ಲದ ನೈಜ, ತಾಜಾ ಆಹಾರೋತ್ಪನ್ನ
ನಿಮಗೂ ಅಲ್ಲಿ ಲಭ್ಯ

ಪೋನ್
8277234333

Leave a Reply