ನನ್ನವ್ವ ಆತ್ಮಹತ್ಯೆ ಮಾಡಿಕೊಂಡಳು..

 

 

ಸಬೀರ ಹಕಾ |ಇರಾನಿ ಕವಿ

ಕನ್ನಡಕ್ಕೆ: ಮೆಹಬೂಬ ಮುಲ್ತಾನಿ

 

 

 

 

ನನ್ನವ್ವ ಆತ್ಮಹತ್ಯೆ
ಮಾಡಿಕೊಂಡಳು
ನನ್ನಪ್ಪನನ್ನು ಕೆಲಸದಿಂದ ತೆಗೆದುಹಾಕಲಾಯಿತು
ರಾತ್ರಿ ಊಟವಿಲ್ಲದೆ ನನ್ನ ಕೆಲ ಮಿತ್ರರು ಸತ್ತು ಹೋದರು
ಉಳಿದವರು ಉಳ್ಳವರ ಸುಡುವ ಕುಲುಮೆಯಲ್ಲಿ ಬೆಂದು ಹೋದರು…

ಯುದ್ಧ
ಪ್ರತಿ ಮನುಷ್ಯನ ಹೃದಯದಲ್ಲಿ ಅಸ್ತಿತ್ವ ಸಾಧಿಸಿದೆ.
ನಾವು ಸುಂದರ ಜಗತ್ತಿನ ಕನಸು ಬಿತ್ತುತ್ತಿದ್ದೇವೆ.
ಆದರೆ
ಏಳು ಬಿಲಿಯನ್ ಮನುಷ್ಯರು ಜಗತ್ತಿನ ತುಂಬೆಲ್ಲಾ ಹರಡಿಕೊಂಡಿದ್ದಾರೆ……

 

 

 

 

 

 

 

 

 

 

Leave a Reply