ಮುದ್ದುಮಾತಿನ ಮೋಹಗಾರನೆ

 

 

 

ಜಯಶ್ರೀ ಭ ಭಂಡಾರಿ

 

 

ನಿಲ್ಲದಿರು ದೂರ

ಉಸಿರ ಉಸಿರಲಿ ನಿನ್ನದೆ ಹೆಸರು
ನೆನಪ ಮೆರವಣಿಗೆಯದು ಹಸಿರು
ಅರಿತು ಬೆರೆತ ನವನೀತದ ಮೊಸರು
ಕನಸಕಂಗಳಲಿ ತುಂಬಿದೆ ಉಸಿರು

ದೂರದಲಿ ನೀನಿದ್ದರೂ ಇಲ್ಲ ಅಂತರ..
ಹುಚ್ಚು ಪ್ರೀತಿಯದು ತೀರದ ದಾಹ
ಕಡಲ ಅಲೆಗಳಾಗಿವೆ ಆಸೆಗಳು
ಬಂದು ಬಿಡು ತಾಳಲಾರೆ ಈ ವಿರಹ ನೋವ

ನಿನ್ನ ಸನಿಹ ಬೇಕೆನಗೆ ನಿರಂತರ
ಬಯಕೆಗಳ ರಂಗೋಲಿಗೆ ರಂಗಾಗು
ಬಾ ಗೆಳೆಯನೆ ಸಹಿಸಲಾರೆ ಅಂತರ
ಜೊನ್ನಮಳೆ ಜೇನಹೊಳೆ ನೀನಾಗು

ಕತ್ತಲೆಯ ಸರಿಸು ಹರಸು ಬಾ
ಬೆಳಕಾಗಿ ಹೃದಯ ಮೀಟು ಬಾ
ಪ್ರೀತಿಯ ಮಹಲಿನ ಅರಸನೆ ಬಾ
ಅಂತರ ಸಾಕು ನಿರಂತರವಾಗಿ ಬಾ

ಮುದ್ದುಮಾತಿನ ಮೋಹಗಾರನೆ
ಗೆಜ್ಜೆಸದ್ದಿಗೆ ಮರುಳ ಮಾಯಗಾರನೆ
ಮನದ ರಿಂಗಣಕೆ ಮೆಲ್ದನಿಯಾದವನೆ
ಎದೆಯ ತಲ್ಲಣ ಅರಿತವನೆ
ಶಮನಮಾಡು ಬಾ ನಿರಂತರ

ಈ ಹೂ ಸದಾ ನಿನ್ನ ಪೂಜೆಗೆ ಒಲುಮೆಸಿರಿಯೆ
ಅಂತರ ಸಾಕಿನ್ನು
ಬಾಳದಾರಿಯಲಿ ಅನವರತ ಬೇಕಿನ್ನು
ನಿಲ್ಲದಿರು ಸಖನೆ ದೂರದೂರ.

Leave a Reply