ಟ್ರಿಪಲ್ ತಲಾಖ್ ಬಗ್ಗೆ ಬೊಳುವಾರು ಟ್ರಿಪಲ್ ಪ್ರಶ್ನೆಗಳು

ಬೊಳುವಾರು 

‘ಟಿಟಿ ಬಗ್ಗೆ ಟ್ರಿಪಲ್ ಪ್ರಶ್ನೆಗಳು:

(ಮಸೂದೆಯನ್ನು ಪೂರ್ತಿಯಾಗಿ ಓದಿರುವೆ.)

೧) ತನ್ನ ಗಂಡ ಒಂದೇ ಉಸಿರಿನಲ್ಲಿ ಮೂರು ತಲಾಕ್ ಹೇಳಿರುತ್ತಾನೆಂದು ಹೆಂಡತಿಯೊಬ್ಬಳು ನ್ಯಾಯಾಲಯದಲ್ಲಿ ‘ಹೊಸ ಕಾನೂನಿನಂತೆ’ ಸಾಕ್ಷಿಸಹಿತ ಸಾಬೀತು ಪಡಿಸಲು ಸಾಧ್ಯವೆ?

೨) ಹಾಗೊಂದು ವೇಳೆ ಸಾಬೀತುಪಡಿಸಿ, ಗಂಡನನ್ನು ಮೂರು ವರ್ಷಗಳ ಕಾಲ ಜಾಮೀನುರಹಿತ ಜೈಲುಪಾಲು ಮಾಡಿದ ಹೆಂಡತಿಗೆ, ತನ್ನ ಮಕ್ಕಳ ಪೋಷಣೆಯ ಉದ್ದೇಶದಿಂದ ಬೇರೆ ಗಂಡನ್ನು ಮದುವೆಯಾಗುವ ಹಕ್ಕಿರುತ್ತದೆಯೆ? ಅಥವಾ, ಶಿಕ್ಷೆ ಅನುಭವಿಸಿ ಮರಳಿ ಬಂದು ಮುಸ್ಲಿಮ್ ವೈಯಕ್ತಿಕ ಕಾನೂನಿನಂತೆ (ತಿಂಗಳಿಗೊಂದು ಬಾರಿಯಂತೆ ಮೂರು ತಿಂಗಳು ಹತ್ತು ದಿನಗಳ ಇದ್ದತ್ ಅವಧಿ ಪೂರೈಸುವ) ಗಂಡ ತಲಾಕ್ ನೀಡುವವರೆಗೂ ಕಾಯಬೇಕೆ?

೩) ಒಂದು ವೇಳೆ, ಮೂರು ವರ್ಷಗಳ ಶಿಕ್ಷೆಯ ಬಳಿಕ ಅವರಿಬ್ಬರೂ ರಾಜಿಯಾದಲ್ಲಿ, ಜೊತೆಸಂಸಾರ ನಡೆಸಲು ಚಾಲ್ತಿಯಲ್ಲಿರುವ ‘ಮುಸ್ಲಿಮ್ ವೈಯಕ್ತಿಕ ಕಾನೂನು’ ಅನುಮತಿಸುತ್ತದೆಯೆ?

1 Response

  1. Pavana sutha says:

    ನಿಜ.ಈ ತರಹದ ಕಾನುನು ತರಬಾರದು ಬದಲಾಗಿ ಎಲ್ಲರಿಗು ಒಂದೆ ಕಾನುನು ತರಬೇಕು.ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು.ಇದರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ.

Leave a Reply

%d bloggers like this: