ಸಾವಿತ್ರಿ ಬಾಯಿ ಫುಲೆಗಾಗಿ..

ಗದುಗಿಗೆ ಬನ್ನಿ ಸರಳ ಮದುವೆಗೆ
ಸಾವಿತ್ರಿ ಬಾಯಿ ಫುಲೆ ಜನುಮ ದಿನ ಆಚರಣೆಗೆ

ನಮ್ಮ ದಿನಮಾನಗಳಲ್ಲಿ ಸದಾ ಕಾಲ ಸ್ಮರಿಸಲೇಬೇಕಾದಂತಹ ವ್ಯಕ್ತಿತ್ವ ಸಾವಿತ್ರಿಬಾಯಿ ಫುಲೆ ಅವರದ್ದು. ಶಿಕ್ಷಣ ವಂಚಿತ ಸಮುದಾಯಗಳಿಗೆ ಅಕ್ಷರ ಜ್ಞಾನ ನೀಡಿದ ಹಿರಿಮೆ ಅವರದ್ದು. ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವಾದ ಜನವರಿ 3ನ್ನು ಶಿಕ್ಷಕಿಯರ ದಿನವಾಗಿ ಕರ್ನಾಟಕ ಸರಕಾರ ಅಧಿಕೃತವಾಗಿ ಘೋಷಣೆ ಮಾಡಿ ಆಚರಿಸಬೇಕೆಂದು ಆಚರಿಸಬೇಕೆಂದು ಆಗ್ರಹಿಸಿ ಲಡಾಯಿ ಬಳಗ, ಭಾವ ಸಂಗಮ ವಿವಾಹ ವೇದಿಕೆ, ದಲಿತ ಕಲಾ ಮಂಡಳಿ ಸಂಘಟನೆಗಳು ಸೇರಿ ಪತ್ರ ಚಳವಳಿ ಅಭಿಯಾನ ಆರಂಭಿಸಿ ಹದಿನೈದು ದಿನಗಳ ಮೇಲಾಯಿತು. ಈವರೆಗೆ ಸರಕಾರದಿಂದ ಉತ್ತರವಂತೂ ಬಂದಿಲ್ಲ.

ಈ ಸಂಘಟನೆಯ ಗೆಳೆಯರು ಸೇರಿ ಬುದ್ಧ ಬಸವ ಅಂಬೇಡ್ಕರ್ ತತ್ವಾದರ್ಶದಂತೆ ಜನವರಿ ೭ರಂದು ರವಿವಾರ ಗದಗ ಡಾ. ಬಿ ಆರ್. ಅಂಬೇಡ್ಕರ್ ಭವನದಲ್ಲಿ ಸರಳ ವಿವಾಹ ಆಗುತ್ತಿರುವ ಷರೀಫ್ ಬಿಳಿಯಲಿ ಅವರ ಮದುವೆಯನ್ನು ಈ ಅಭಿಯಾನದ ವಿಸ್ತರಣೆಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಶರೀಫರ ವಿವಾಹದ ಆಮಂತ್ರಣ ಪತ್ರಿಕೆಯನ್ನು ಡಾ. ಎಚ್. ಎಸ್. ಅನುಪಮಾ ಅವರು ಬರೆದ “ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ” ಪುಸ್ತಕದಲ್ಲಿ ಮುದ್ರಿಸಿ ಒಂದು ಸಾವಿರ ಪ್ರತಿಗಳ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಈ ವಿವಾಹದ ಎಲ್ಲ ಖರ್ಚು ವೆಚ್ಚವು ಸಾಮೂಹಿಕ ಬದುಕಿನ ಭಾಗವಾಗಿ ಇದೆ.

ಈ ವಿವಾಹ ಮತ್ತು ಅಭಿಯಾನದಲ್ಲಿ ನೀವೂ ಪಾಲ್ಗೊಳ್ಳಿ..
ರವಿವಾರ ಜೂನ 7 ರಂದು ಗದುಗಿಗೆ ಬನ್ನಿ
ಸಾವಿತ್ರಿ ಬಾಯಿ ಫುಲೆ ಮಕ್ಕಳ ಕರೆಯನ್ನು ಮನ್ನಿಸಿ ಜೊತೆಯಾಗಿ….

 

1 Response

  1. Sangeeta srikantha says:

    ನನ್ನ ಅಭಿಪ್ರಾಯದ ಪ್ರಕಾರ ಸಾವಿತ್ರಿ ಬಾಪುಲೆ ಕೇವಲ ಹಿಂದುಳಿದ ವರ್ಗದವರ ಪ್ರತಿನಿಧಿ ಅಲ್ಲಾ, ಅವರು ಭಾರತದ ಪ್ರತಿಯೂಬ್ಬ ಮಹಿಳೆಯರು ಪ್ರತಿನಿಧಿ ಆದ್ದರಿಂದ ಸಾವಿತ್ರಿ ಬಾಪುಲೆ ಅವರ ಜನ್ಮದಿನವನ್ನು ‘ಭಾರತಿಯ ಮಹಿಳಾ’ ದಿನವಾಗಿ ಆಚರಿಸ ಬೇಕು

Leave a Reply

%d bloggers like this: