ಬೊಳುವಾರರ ಈ “ಅನುಬಂಧ”..!!

 

 

 

 

ಗಿರಿಧರ ಕಾರ್ಕಳ

 

 

 

ನವಕರ್ನಾಟಕ ಸಾಹಿತ್ಯ ಸಂಪದವು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರ ಬದುಕು ಬರಹ ಮಾಲೆಯಲ್ಲಿ ಬೊಳುವಾರು ಮಹಮದ್ ಕುಂಞಿ ಕುರಿತು ಟಿ.ಪಿ.ಅಶೋಕ ಬರೆದ ಪುಸ್ತಕ ಪ್ರಕಟಿಸಿದೆ.

ಬೊಳುವಾರು ಬದುಕಿನ ವಿವರಗಳ ಜೊತೆಗೆ ಬೊಳುವಾರರ ವಿಶಿಷ್ಟ ಕಥನಲೋಕವನ್ನೂ ಅಶೋಕ್ ಸೊಗಸಾಗಿ ತೆರೆದಿಟ್ಟಿದ್ದಾರೆ.

ಆದರೆ ಎಲ್ಲಕ್ಕಿಂತ ನನ್ನ ಗಮನ ಸೆಳೆದದ್ದು,ಪುಸ್ತಕದ ಕೊನೆಯಲ್ಲಿ ಬೊಳುವಾರು ಕೊಟ್ಟ – “ಅನುಬಂಧ-1”..!!.
ತನ್ನ ಬದುಕಿನ ಮುಖ್ಯ ವರ್ಷಗಳನ್ನು ದಾಖಲಿಸುವ ಬೊಳುವಾರು,ತನ್ನ ಒಬ್ಬ ತಮ್ಮನ ಕುರಿತು ನಾಲ್ಕು ಅಂಶಗಳನ್ನು ಬರೀತಾರೆ. ಬೊಳುವಾರು ಅವರಿಗೆ ಇನ್ನಿಬ್ಬರು ಸೋದರಿಯರು,ಇನ್ನೊಬ್ಬ ತಮ್ಮ (ಪ್ರಸಿದ್ಧ ರಂಗಕರ್ಮಿ ಐ.ಕೆ.ಬೊಳುವಾರು)ಇದ್ದರೂ ತಮ್ಮ ಸಮುದಾಯದ ಹೊರತು ಯಾರಿಗೂ ಗೊತ್ತಿಲ್ಲದ ಈ ತಮ್ಮನ ಬಗ್ಗೆ ಮಾತ್ರ ಉಲ್ಲೇಖಿಸಿದ್ದಾರೆ.

ಅದು ಹೀಗಿದೆ:

1981: ಕಿರಿಯ ಸೋದರ ಉಮರ್ ಕುಂಞಿ – ಉಮೇಶ್ ಕುಮಾರನಾಗಿ ಮತಾಂತರವಾದದ್ದು.(ಧರ್ಮಸ್ಥಳ)

1983: ಲತಾ ಎಂಬವರನ್ನು ಉಮೇಶ್ ಕುಮಾರ್ ಮದುವೆಯಾದದ್ದು(ತೊಕ್ಕೊಟ್ಟು- ಉಳ್ಳಾಲ)

1983: ‘ಅಂಕ’ಕತೆಗೆ ಪ್ರಜಾವಾಣಿ ಕಥಾಸ್ಫರ್ಧೆಯಲ್ಲಿ ಮೊದಲ ಬಹುಮಾನ ಬಂದಾಗ,ಅದು ತನ್ನ ಕತೆ ಎಂಬ ಕಾರಣಕ್ಕೆ ಉಮೇಶ್ ಕುಮಾರ್ ಬಹುಮಾನದ ಅರ್ಧ ಮೊತ್ತವನ್ನು ವಸೂಲಿ ಮಾಡಿದ್ದು (ಮಂಗಳೂರು)

1999: ಕಿರಿಯ ಸೋದರ ಉಮರ್ ಕುಂಞಿ ಯಾನೆ ಉಮೇಶ್ ಕುಮಾರ್ ತೀರಿಕೊಂಡದ್ದು ( ಪುತ್ತೂರು)

ಬೊಳುವಾರರ ಬದುಕಿನಲ್ಲಿ “ಎನಿಗ್ಮಾ” ಎನಿಸಿದ ತಮ್ಮನ ಈ ನಾಲ್ಕು ಅಂಶಗಳೇ ರೋಚಕ ಕತೆಯೊಂದನ್ನು ಹೇಳುತ್ತದೆ.
ಮತ್ತೆ ಸುಮ್ ಸುಮ್ನೆ ಅಂತಾರಾ- ಬೊಳುವಾರು ಒಳ್ಳೇ ಕತೆಗಾರ ಅಂತ..!!

Leave a Reply