‘ಹೊರಳು ದಾರಿ’ಗೆ ಪ್ರಶಸ್ತಿ

ಸ್ವಸ್ತಿ ಪ್ರಕಾಶನ ಕುಮಟಾ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ ಶಿರಸಿಯ ಬಕ್ಕಳದ ‘ಶ್ರೀ ಶಂಕರ’ದಲ್ಲಿ ನಡೆಯಿತು.

ಬೆಳಗಿನಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಸರ ತಜ್ಞ ಶಿವಾನಂದ ಕಳವೆ ವಹಿಸಿದ್ದರು.

ಬೆಳಗಿನ ಕಾರ್ಯಕ್ರಮ ದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಬದುಕು ಬರಹಗಳ ಕುರಿತು ಸಂವಾದ ನಡೆಯಿತು. ಡಾ ಗೋವಿಂದ ಹೆಗಡೆ, ಪ್ರಶಾಂತ್ ನಾಯ್ಕ ಕರ್ಕಿ, ಪ್ರಶಾಂತ್ ಪಟಗಾರ್ ದೇವರಬಾವಿ, ಗುರುಗಣೇಶ್, ಕರ್ಕಿ ಕೃಷ್ಣಮೂರ್ತಿ, ತೇಜಸ್ವಿನಿ ಹೆಗಡೆ, ಗಾಯತ್ರೀ ರಾಘವೇಂದ್ರ , ಇನ್ನೂ ಅನೇಕರು ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಧ್ಯಾಹ್ನ ಸ್ವಸ್ತಿ ಪ್ರಕಾಶನದ ಬಹುಮಾನಿತ ಕೃತಿ ತೇಜಸ್ವಿನಿ ಹೆಗಡೆಯವರ “ಹೊರಳುದಾರಿ” ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ ಹಾಗೂ ಶ್ರೀಮತಿ ತೇಜಸ್ವಿನಿಯವರಿಗೆ ಸನ್ಮಾನ ಮತ್ತು ರಾಜ್ಯೋತ್ಸವ ಸ್ಪರ್ಧೆಯ ವಿಜೇತ ಕವಿಗಳಿಗೆ ಬಹುಮಾನ ವಿತರಣೆ ನಡೆದವು.

ಪುಸ್ತಕ ಬಿಡುಗಡೆ ಮಾಡಿದ ನಾರಾಯಣ ಶೇವಿರೆ ಅವರು ತೇಜಸ್ವಿನಿಯವರ ಸಾಹಿತ್ಯದ ಆಸಕ್ತಿ ಹಾಗೂ ಸಾಧನೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಕಳವೆ ಹಳ್ಳಿಗಳ ಜೀವನದ ಕುರಿತಾದ ಯಾವ ಬರಹಗಳೂ ಇತ್ತೀಚೆಗೆ ಕಾದಂಬರಿ ರೂಪದಲ್ಲಿ ಬರುತ್ತಿಲ್ಲ ಎಂದು ವಿಷಾದಿಸಿದರು.

‘ನಮ್ಮಿಂದ ನಿಮಗೆ ಕನ್ನಡವು ಮನೆಮನೆಗೆ’ ಎಂಬ ಸ್ವಸ್ತಿ ಪ್ರಕಾಶನದ ಆಶಯದಂತೆ ನಾಲ್ಕನೇ ವರ್ಷದ ಈ ಕಾರ್ಯಕ್ರಮ ಶ್ರೀ ಸಂಜಯ್ ಭಟ್ ಬೆಣ್ಣೆಯವರ ಮನೆ ‘ಶ್ರೀ ಶಂಕರ’ದ ಸುಂದರ ಪರಿಸರದಲ್ಲಿ ನಡೆಸಿಕೊಡಲಾಯಿತು. ಸ್ವತಃ  ಸಂಜಯ್ ಭಟ್ ಅವರು ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು. ರಾಜ್ಯದ ಅನೇಕ ಭಾಗಗಳಿಂದ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Reply