ವಿಶಿಷ್ಟ ಘರಾಣೆ ಕ್ಯಾಲೆಂಡರ್

ಹಿಂದುಸ್ಥಾನೀ ಸಂಗೀತ ಪರಂಪರೆ ಹರಿದು ಬಂದಿದ್ದೇ ಹತ್ತಾರು ಘರಾಣೆಗಳೆಂಬ ನದಿಗಳ ಮೂಲಕ. ಹಿಮಾಲಯದೆತ್ತರದ ಸಾಧಕ ಪ್ರತಿಭೆಯ ಚಿಲುಮೆಗಳಿಂದ ಹರಿದು ಬಂದ ಒಂದೊಂದು ನದಿಗೂ ಒಂದೊಂದು ಪಾತ್ರ,ಹರಿವು,ಲಾಲಿತ್ಯ. ಅವುಗಳದೇ ಆದ ಮಾಧುರ್ಯ,ಬನಿ. ಘರಾನಾ ಎಂದರೆ ಮನೆತನ.

ಸಂಗೀತಕ್ಕೆ ಮೀಸಲಾದ ರಾಗ್ ಸಂಸ್ಥೆ ಈ ಬಾರಿ ಅಂತಹ ಘರಾಣೆಗಳ ಆದ್ಯ ಪ್ರವರ್ತಕರನ್ನು ಪರಿಚಯಿಸುವ ಆಕರ್ಷಕ ಕ್ಯಾಲೆಂಡರನ್ನು ಪ್ರಕಟಿಸಿದೆ.ಪ್ರಸಿದ್ಧ ಕಿರಾಣಾ ಘರಾನಾ,ಗ್ವಾಲಿಯರ್,ಜೈಪುರ್, ಇಂದೋರ್… ಹೀಗೆ ಒಂದೊಂದು ತಿಂಗಳು ಒಂದೊಂದು ಘರಾಣೆಗೆ ಮೀಸಲು.

ಹನ್ನೊಂದು ಘರಾಣೆಗಳ ನಂತರ ಕೊನೇ ತಿಂಗಳು ಮಾತ್ರ ಇಂತಹ ಸಿದ್ಧ ಘರಾಣೆಗಳ ಪರಂಪರೆಯನ್ನು ಮುರಿದು ಕಟ್ಟಿದ ಪಂ.ಕುಮಾರ ಗಂಧರ್ವ, ಶೋಭಾ ಗುರ್ತು,ಜಿತೇಂದ್ರ ಅಭಿಷೇಕಿ, ಶುಭಾ ಮುದ್ಗಲ್ ರಂತಹ PATH BREAKERS ನ್ನು ಪರಿಚಯಿಸಿದೆ.

ಒಟ್ಟಿನಲ್ಲಿ , ಹಿಂದುಸ್ಥಾನಿ ಸಂಗೀತ ಪರಂಪರೆಯ ಹರಿವನ್ನುಗುರುತಿಸುವ ಈ ಕ್ಯಾಲೆಂಡರಿಗೆ ತನ್ನದೇ ಅನನ್ಯತೆ ಇದೆ.

– ಗಿರಿಧರ ಕಾರ್ಕಳ

 

1 Response

  1. Chandra says:

    How can we get this in USA?

Leave a Reply

%d bloggers like this: