ಆ ಮಾಟಗಾತಿ ಮದಿರೆಗಿಂತಲೂ ಅಮಲು..

 

 

 

ಎನ್ ರವಿಕುಮಾರ್ ಶಿವಮೊಗ್ಗ

 

 

 

 

 

ಹೋಳಿ

ಆ ಮಾಟಗಾತಿ
ಮದಿರೆಗಿಂತಲೂ
ಅಮಲು
ಅವಳ ತುಟಿ ಬಣ್ಣಕ್ಕೀಗ
ಹೋಳಿಯ  ಹುರುಪು
ಅಂಗಾಂಗ ಗಳ
ಕಸುವ ಕಡೆದು
ಸಂಗಸರಸದಲ್ಲಿ
ಬಣ್ಣವೆಲ್ಲಾ ಚೆಲ್ಲಾಡಿದಾಗ
ಶೃಂಗಾರ ಮೈ ನೆರೆದ
ಘಳಿಗೆ
ಕರುಳ ಅಂಗಳದಲ್ಲಿ
ಬಂಗಾರದ ಬೆಳಕು.

ಮದಿರೆಯ ಮಹಾಯಾನ

ಆ ಮಾಟಗಾತಿ
ಮದಿರೆಗಿಂತಲೂ ಅಮಲು
ಮೈದುಂಬಿ
ಮಾಗಿ ಮೊರೆಯುವ
ಅವಳ ಪ್ರಣಯ ಪಲ್ಲಂಗದ
ನಶೆಯಲ್ಲಿ ಚಿತ್ತಾಗಿ
ಕುಡಿದಷ್ಟು ದಾಹ
ಕಡೆದಷ್ಟು ಮೋಹ
ಋತುಕಾಲ-ಅಹೋರಾತ್ರಿ
ಸಾರ ಹೀರಿ ಸರಸ ಸೊಗಸು
ಮದ ಮಥಿಸಿದ ಮಹಾಯಾನ
ಅವಳ ತುಟಿ ಬಣ್ಣಕ್ಕೀಗ
ಹೋಳಿಯ  ಹುರುಪು
ಅಂಗಾಂಗಗಳ
ಕಸುವ ಕಡೆದು
ಸಂಗಸರಸದಲ್ಲಿ
ಬಣ್ಣವೆಲ್ಲಾ ಚೆಲ್ಲಾಡಿದಾಗ
ಶೃಂಗಾರ ಮೈ ನೆರೆದ ಘಳಿಗೆ
ಕರುಳ ಅಂಗಳದಲ್ಲಿ
ಬಂಗಾರದ ಬೆಳಕು.
ಅಲ್ಲೀಗ ಸಖೀಗೀತೆಯ
ಸುಖ ಸುರಿದಿದೆ
ದಿವ್ಯ ಬೆಳಕಿನ ತೊಟ್ಟಿಲು ತೂಗಿದೆ.

 

Leave a Reply