ಕರಾವಳಿಗರ ಬುದ್ಧಿವಂತಿಕೆಗಿಂತ ನಮ್ಮ ದಡ್ಡತನವೇ ನೆಮ್ಮದಿ ಅನಿಸ್ತಾ ಇದೆ..

 

 

 

 

ಅಮರನಾಥ್  

 

 

 

 

ನಮ್ಮದು ಆಗಿನ ಕೋಲಾರ, ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಊರು..

ಶೈಕ್ಷಣಿಕ ಫಲಿತಾಂಶಗಳ ಆಧಾರದಲ್ಲಿ ಹೇಳೋದಾದರೆ ನಾವು ಅತ್ಯಂತ ದಡ್ಡರು..

ಅಂದಹಾಗೆ, ನಮ್ಮ ಎರಡೂ ಜಿಲ್ಲೆಗಳಲ್ಲಿ ಸಾಕಷ್ಟು ಮುಸಲ್ಮಾನರಿದ್ದಾರೆ… ಅದರಲ್ಲಿ ಬಹುತೇಕರು ಹಿಂದೂ ಹಬ್ಬಗಳು ಬಂದಾಗಲೂ ಸಂಭ್ರಮಿಸ್ತಾರೆ.. ಇನ್ನು ಮುಸಲ್ಮಾನರ ಬಾಬಯ್ಯನ ಹಬ್ಬವನ್ನ ಹಿಂದೂಗಳೇ ಇಲ್ಲಿ ಆಚರಿಸೋದು.. ಮುಸಲ್ಮಾನರ ಉರುಸ್ ಗೆ ಹಿಂದೂಗಳು ಸಪೋರ್ಟ್ ಮಾಡಿದರೆ, ಎಷ್ಟೋ ಹಳ್ಳಿಗಳಲ್ಲಿ ಗಣೇಶನನ್ನ ಕೂರಿಸೋದು ಮುಸ್ಲಿಂ ಯುವಕರು…

ಇನ್ನು ನಮ್ಮ ಭಾಗದ ಸಾಕಷ್ಟು ಮುಸಲ್ಮಾನರಿಗೆ ಉರ್ದುನೇ ಬರೋದಿಲ್ಲ.. ಬಂದರೂ ಮಾತನಾಡುವುದು ಕಡಿಮೆ… ಬುರ್ಖಾ ತೊಡುವುದು, ಟೋಪಿ ಧರಿಸುವುದು ಕೂಡಾ ಅಪರೂಪ… ಇನ್ನು ಹಿಂದೂಗಳು ಕೂಡಾ ತಮ್ಮ ಆಚರಣೆಗಳೇನಿವೆಯೋ ಅವನ್ನು ಮಾಡಿಕೊಂಡು ಹೋಗುತ್ತಾರೆ..

 

ಎಲ್ಲೂ ನಾನು ಹಿಂದೂ, ನಾನು ಹಿಂದೂ ಧರ್ಮವನ್ನು ರಕ್ಷಿಸ್ತೀನಿ ಅಂತ ಓಡಾಡೋದಿಲ್ಲ… ಅದಕ್ಕೇ ಇಲ್ಲಿ ಯಾವುವೂ ಅಧರ್ಮಗಳಾಗಿಲ್ಲ..

ಆದರೆ ನಾವು ಶೈಕ್ಷಣಿಕವಾಗಿ ದಡ್ಡರು… ಮೊದಲು ಪರೀಕ್ಷಾ ಫಲಿತಾಂಶಗಳು ಬಂದಾಗ ನಾವು ಎಷ್ಟು ದಡ್ಡರು ಅಂತ ನನಗೆ ಬೇಸರವಾಗುತ್ತಿತ್ತು.. ಆದರೆ ಈಗ ಕರಾವಳಿಗರ ಬುದ್ಧಿವಂತಿಕೆಗಿಂತ ನಮ್ಮ ದಡ್ಡತನವೇ ನೆಮ್ಮದಿ ಅನಿಸ್ತಾ ಇದೆ….

ಅಂದಹಾಗೆ, ನಿಮಗೆ ಗೊತ್ತಿರಲಿ.. ನಮ್ಮಲ್ಲಿ ಆರ್ ಎಸ್ ಎಸ್, ಭಜರಂಗದಳಗಳು ಇಲ್ಲ, ಪಿಎಫ್ಐ ಇರೋದಿರಲಿ, ಅದರ ಹೆಸರನ್ನ ಎಷ್ಟೋ ಜನ ಕೇಳೇ ಇಲ್ಲ…

2 Responses

  1. sajeev2000 says:

    Please don’t advertise 🙂 . People with dirty minds will be waiting to open the sanga /P.F.I .

    Just silently pray let the current situation continue forever ( excluding daddatana 🙂

  2. Anasuya M R says:

    100℅ true sir

Leave a Reply

%d bloggers like this: