ಜನಕೇಗೌಡರು ಹೋಟೆಲ್ ಮಯೂರದ ಪಕ್ಕ ಅದೇ ಕೊಡೆಯನ್ನು ಕೈಯಲ್ಲಿ ಹಿಡಿದು ಓಲಾಡಿಸಿಕೊಂಡು ಹೋಗುತ್ತಿದ್ದರು..

 

 

 

 

ನೆಂಪೆ  ದೇವರಾಜ್

 

 

ಬದಲಾದ ತೀರ್ಥಹಳ್ಳಿಯಲ್ಲಿ ಜನಕೇಗೌಡರು.

ಜನಕೇಗೌಡರು ಹೋಟೆಲ್ ಮಯೂರದ ಪಕ್ಕ ಅದೇ ಕೊಡೆಯನ್ನು ಕೈಯಲ್ಲಿ ಹಿಡಿದು ಓಲಾಡಿಸಿಕೊಂಡು ಹೋಗುತ್ತಿದ್ದರು, ಎಂಬತ್ತರ ಆಸುಪಾಸಿನ ಜನಕೇಗೌಡರಿಗೆ ಈಗಲೂ ಗೋಪಾಲಗೌಡರಿಗೆ ಎಲ್ಲ ಚುನಾವಣೆಯಲ್ಲೂ ಅವರ ಪರವಾಗಿ ಭಯಂಕರವಾಗಿ ಪ್ರಚಾರ ಮಾಡಿದ್ದರ ಬಗ್ಗೆಯೇ ಕನವರಿಕೆಗಳು.ತೀರ್ಥಹಳ್ಳಿಯ ಹೋಟೆಲ್ ಮಯೂರದ ಎದುರಿಗೆ ಇದ್ದ ಆಗಿನ ಕಾಂಗ್ರೆಸ್ ಮತ್ತು ಸೋಷಲಿಸ್ಟ್ ಪಕ್ಷದ ಕಚೇರಿಗಳ ಬಗ್ಗೆ ಕೈ ತೋರಿಸಿದರು.

ಅಲ್ಲಿದ್ದ ನಾಡ ಹೆಂಚಿನ ಕಟ್ಟಡಗಳು ಈಗಿಲ್ಲ. ಇದೀಗ ಕಾಂಕ್ರೀಟಿನಿಂದ ಕಂಗೊಳಿಸಿಕೊಳ್ಳುತ್ತಿದ್ದೇವೆ ಎಂಬ ಹೆಮ್ಮೆಯಲ್ಲಿವೆ. ೧೯೬೭ರ ಚುನಾವಣೆಯಲ್ಲಿ ಈ ಎರಡು ಪಕ್ಷಗಳ ನಡುವೆ ನಡೆದ ಸೋಡಾ ಬಾಟಲಿ ಮತ್ತು ಕಲ್ಲುಗಳ ನಡುವಿನ ಸಂಘರ್ಷ ಅವರ ಬಾಯಿಂದ ಹೊರ ಬರುವಾಗ ಅವರಿಗಾಗುತ್ತಿದ್ದ ರೋಮಾಂಚನ ಸೆರೆ ಹಿಡಿಯಲಾಗದ ಸಂಭ್ರಮ.ಗೋಪಾಲಗೌಡರ ವಿರುದ್ದ ಕಾಂಗ್ರೆಸ್ಸಿನಿಂದ ಬಿ.ಎಸ್ ವಿಶ್ವನಾಥ್ ರವರು ಅಭ್ಯರ್ಥಿಯಾಗಿದ್ದರು.

ಗೋಪಾಲಗೌಡರ ಬಗ್ಗೆ ಹೇಳುವಾಗ ಇವರ ಮುಗ್ಧ ಮುಖ ಅರಳುತ್ತದೆ.ಪ್ರಪಂಚದ ಬಹುದೊಡ್ಡ ಅಧಿಕಾರದ ಹುದ್ದೆಯನ್ನು ಅಲಂಕರಿಸಿದಷ್ಟು ಸಂತೋಷ ಇವರ ಆತ್ಮದಲ್ಲಿ!ಎಂಬತ್ತೇಳರ ವಯಸ್ಸಲ್ಲೂ ತಮ್ಮ ಊರಾದ ಶಿರುಪತಿ ಟೆಂಕಬೈಲಿನ ಕಡೆ ತೀರ್ಥಹಳ್ಳಿ ಪಟ್ಟಣದಿಂದ ನಡೆದೇ ಹೋಗುವ ಉಲ್ಲಾಸ !

 

Leave a Reply