ಮಾಲೀಕರ ಮುಂದೆ ದನಿ ಎತ್ತುವ ಸಂಪಾದಕರು ಇದ್ದಿದ್ದರೆ..

ಜಿ ಎನ್ ಮೋಹನ್ 

ನಿನ್ನೆ ಮತ್ತೆ ಪಿ ಸಾಯಿನಾಥ್ ಜೊತೆಗೆ ಒಂದು ಬೀದಿ ಸುತ್ತಾಟ ಮಾಡುವ ಅವಕಾಶ.

ಅದು ಒಂದು ರೀತಿ ಕಾಲುದಾರಿಯಲ್ಲಿ ನಡೆಯುತ್ತಾ ಜಾಗತೀಕರಣವನ್ನು ಕೈಗೆಟುಕಿಸಿಕೊಳ್ಳುವ ಪ್ರಯತ್ನ. ಇಬ್ಬರಿಗೂ

ಈ ಬಾರಿ ಅಚಾನಕ್ ಆಗಿ ಅದಕ್ಕೆ ಕೊಂಡಿಯಾದದ್ದು ಹಲವು ಕನಸುಗಣ್ಣಿನ ಹುಡುಗರು. ‘ಸಂವಾದ’ ಹೊಸದಾಗಿ ಆರಂಭಿಸಿರುವ ಆನ್ಲೈನ್ ಪತ್ರಿಕೋದ್ಯಮ ಕೋರ್ಸ್ ನ ಕಾರ್ಯಾಗಾರ ನಡೆಯುತ್ತಿತ್ತು. ನಾವಿಬ್ಬರೂ ಅಚಾನಕ್ಕಾಗಿ ಅಲ್ಲಿಗೂ ಹೆಜ್ಜೆ ಹಾಕಿಬಿಟ್ಟೆವು.

ಹುಡುಗರ ಕಣ್ಣಿನ ಮಿಂಚು, ಸೆಲ್ಫಿ ಅಬ್ಬರಗಳ ಮಧ್ಯೆ ಅವರು ಹೇಳಿದ್ದು ಯಾಕೋ ನನ್ನೊಳಗೆ ಇನ್ನು ಗಿರಿಗಿಟ್ಲೆಯಾಡುತ್ತಿದೆ

ಪತ್ರಿಕೋದ್ಯಮ ಎನ್ನುವುದು ಮತ್ತೆ ಮತ್ತೆ ಪುನರ್ ಪರಿಶೀಲನೆಗೆ ಒಳಪಡುವ ಕ್ರಿಯೆ. ಇಲ್ಲದಿದ್ದಲ್ಲಿ ಒಂದು ವರದಿಗೂ ಒಂದು ಟ್ವೀಟ್ ಗೂ ಏನು ವ್ಯತ್ಯಾಸ ಉಳಿಯುತ್ತದೆ ಎಂದರು. ಹೌದಲ್ವಾ. ಪಟ್ಟನೆ ಬೆರಳನ್ನು ಸ್ಮಾರ್ಟ್ ಫೋನ್ ಮೇಲೆ ಕುಣಿಸುವಾಗ ನಾವು ಮಿದುಳನ್ನು ಬಳಸುತ್ತೇವೆ ಎನ್ನುವ ಯಾವ ಗ್ಯಾರಂಟಿಯೂ ಇಲ್ಲ. ಇನ್ನು ಪುನರ್ ಪರಿಶೀಲಿಸುವ, ಸತ್ಯಾಂಶಗಳನ್ನು ಮತ್ತೆ ಮತ್ತೆ ಖಾತರಿಪಡಿಸಿಕೊಳ್ಳುವ ಮಾತು ಬಿಡಿ

ಹೀಗೆ ಯೋಚಿಸುತ್ತಿರುವಾಗಲೇ ಪಿ ಸಾಯಿನಾಥ್ ಹೇಳಿಬಿಟ್ಟರು. ಮಾಧ್ಯಮ ಎನ್ನುವುದು ಉದ್ದಿಮೆ ಆದರೆ ಪತ್ರಿಕಾ ಧರ್ಮ ಎನ್ನುವುದು ನಮ್ಮೊಳಗಿನ ಅಂತರಂಗದ ಕರೆ.

ಹೌದಲ್ವಾ.. ಮಾಧ್ಯಮ ಸಂಸ್ಥೆಗೆ ಯಾವುದೇ ನಿಲುವು ಇಲ್ಲ ಎನ್ನುವುದು ಸುಳ್ಳು. ನಾವು ನೀವೆಲ್ಲರೂ ಮನುಷ್ಯರೇ. ನೀವು ನಿಮ್ಮ ನಿಮ್ಮ ನಿಲುವನ್ನು ಇಟ್ಟುಕೊಳ್ಳಬಹುದು ಆದರೆ ಸತ್ಯವನ್ನು ಹೇಳಿ, ಪ್ರಾಮಾಣಿಕವಾಗಿ ಹೇಳಿ

ಪತ್ರಕರ್ತರೆಂದರೆ ಸಮನ್ವಯ ಕವಿಗಳಿದ್ದಂತೆ, ಇಲ್ಲವೇ ಗಿರಡ್ಡಿ ಗ್ಯಾಂಗ್ ಪ್ರತಿಪಾದಿಸುವ ಮಧ್ಯಮ ಮಾರ್ಗಿಗಳಿದ್ದಂತೆ ಅಲ್ಲೂ ಅಲ್ಲ ಇಲ್ಲೂ ಅಲ್ಲ ಎನ್ನುವಂತಿರಬೇಕು ಎಂದೇ ಎಲ್ಲರೂ ಅಂದುಕೊಂಡಿದ್ದಾಗ ಸಾಯಿನಾಥ್ ಈ ಮಾತನ್ನು ದೃಢವಾಗಿ ಹೇಳುತ್ತಿದ್ದರು.

ಮೊನ್ನೆ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ದನಿ ಎತ್ತಿದ್ದನ್ನು ಚರ್ಚೆಗೆ ಎತ್ತಿಕೊಂಡ ಅವರು ಮಾಧ್ಯಮ ಸಂಸ್ಥೆಯೊಳಗೂ ನೀವು ಮಾಡುತ್ತಿರುವುದು ಸರಿ ಇಲ್ಲ ಎಂದು ತಮ್ಮ ಮಾಲೀಕರ ಮುಂದೆ ದನಿ ಎತ್ತುವ ಸಂಪಾದಕರು ಇದ್ದಿದ್ದರೆ.. ಎಂದರು

ಹೌದಲ್ಲಾ…

5 Responses

 1. Gayatri l says:

  Houdu sir…

 2. Sudha ChidanandGowd says:

  Very nice to see p.sainath@ avadhi

  ಮಾಲೀಕರ ವಿರುದ್ಧ ದನಿ ಎತ್ತುವುದೆಂದರೆ ಪ್ರವಾಹಕ್ಕೆ ವಿರುದ್ಧ ಈಜುವುದು… ಅದರ ಅವಶ್ಯಕತೆಯಿದೆ ಎಂದಾದಾಗ ಕೆಲವರಾದರೂ ಬೆರಳೆಣಿಕೆಯಷ್ಟು ಜನರಾದರೂ ಸಿಗುತ್ತಾರೆಯೇ? ಎಂಬುದು ಪ್ರಶ್ನೆ.

 3. Shailaja Gornamane says:

  ಮಾಲಿಕರ ವಿರುದ್ಧ ಧ್ವನಿ ಎತ್ತುವ ತಾಕತ್ತು ? ಮುಂದಿನ ತಿಂಗಳಿನ ಮಗುವಿನ ಸ್ಕೂಲ್ ಫೀಸ್ ನ ಎದುರು ಮೌನವಾಗಿದೆ ಸರ್.

 4. ಶ್ರೀದೇವಿ says:

  ಮಾಲಿಕರ/ಸಂಪಾದಕರ ವಿರುದ್ಧದ ಧ್ವನಿ ಎಂದರೆ ಅದು ಆ ಪತ್ರಿಕೆಯಲ್ಲಿ ನಮ್ಮ ಬರೆಹಗಳನ್ನ ಪ್ರಕಟಿಸುವುದನ್ನು ನಿಲ್ಲಿಸಲು ನಾವೇ ಸುಪಾರಿ ಕೊಟ್ಟಹಾಗೆ.

 5. nutana doshetty says:

  haagondu adarshavannu vidyarthigalige helabahudu..

Leave a Reply

%d bloggers like this: