ಒಬ್ಬಂಟಿತನಕ್ಕೂ ಒಂದು ಸರಕಾರಿಇಲಾಖೆ..ಇದಕ್ಕೂಓರ್ವಮಂತ್ರಿ..!!

ಒಬ್ಬಂಟಿತನಕ್ಕೂಒಂದು ಸರಕಾರಿಇಲಾಖೆ.

‘Ministry of Loneliness’..!!

ಒಬ್ಬಂಟಿತನಕ್ಕೂ ಒಂದು ಸರಕಾರಿಇಲಾಖೆ. ಇದಕ್ಕೂಓರ್ವಮಂತ್ರಿ. ಇತ್ತೀಚೆಗೆಇಂಥದ್ದೊಂದು ವಿಶಿಷ್ಟನಡೆಯನ್ನಿಟ್ಟು ಸುದ್ದಿಯಾದವರು ಬ್ರಿಟಿಷ್ಪ್ರಧಾನಿ ಥೆರೇಸಾಮೇ.

ಒಬ್ಬಂಟಿತನವೆಂಬ ಸಮಸ್ಯೆಗೂ ಒಂದು ಮಂತ್ರಾಲಯವನ್ನು ರೂಪಿಸಿಟ್ರೇಸಿಕ್ರೌಚ್ಎಂಬ ಸಮರ್ಥಮಹಿಳೆಯೊಬ್ಬರನ್ನು ಸಚಿವಸ್ಥಾನದಲ್ಲಿ ಕೂರಿಸಿಬಿಟ್ಟಿದ್ದರು ಪ್ರಧಾನಮಂತ್ರಿಗಳು. ಮಾನಸಿಕ ಆರೋಗ್ಯದವಿಚಾರದಲ್ಲಿ ಭಾರತದಲ್ಲಿರುವ ಭಾವನೆಗಳು ಎಂಥದ್ದು ಎಂಬುದು ನಮಗೆಲ್ಲರಿಗೂ ಗೊತ್ತಿರುವಂಥದ್ದೇ. ಆದರೂ ಈಬಗ್ಗೆ ನಾನು ಕೆಲವರನ್ನು ಸುಮ್ಮನೆ ಮಾತನಾಡಿಸಿದೆ. ಕೆಲವರು ಸುಮ್ಮನೆ ನಗೆಯಾಡಿದರು. ಇದೊಂದು ಬಾಕಿಯಿತ್ತು ಎಂದರು. ಎಂದಿನಂತೆ ಒಬ್ಬಂಟಿತನ, ಖಿನ್ನತೆಗಳೆಲ್ಲಾ ಹೊಟ್ಟೆತುಂಬಿದವರ ಖಾಯಿಲೆ ಎಂದರು.

ಏನೇಇರಲಿ. ಈಬಗ್ಗೆ ಕುಹಕವಾಡಿದವರೇ ಹೆಚ್ಚೇ ಹೊರತು ಈಸುದ್ದಿಯ ಆಳಕ್ಕಿಳಿಯಲು ಪ್ರಯತ್ನಿಸಿದವರು ಕಮ್ಮಿಯೇ! ಅಸಲಿಗೆ ಜೋಕಾಕ್ಸ್ಆಯೋಗದ ವರದಿಯು ಇಂಗ್ಲೆಂಡಿನಲ್ಲಿ ತೊಂಭತ್ತುಲಕ್ಷಕ್ಕೂ ಹೆಚ್ಚುಮಂದಿ ಒಬ್ಬಂಟಿತನದಿಂದ ಬಳಲುತ್ತಿದ್ದಾರೆ ಮತ್ತು ಈಮೂಲಕವಾಗಿ ವಿವಿಧಬಗೆಯ ಮಾನಸಿಕಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿತ್ತು. ಬಹುಷಃ ಈ ಅಂಕಿಅಂಶಗಳನ್ನು ನೋಡಿಯೇ ಸರಕಾರವು ಬೆಚ್ಚಿಬಿದ್ದಿರಬೇಕು. ”ಆಧುನಿಕ ಜೀವನಶೈಲಿಯು ನಮ್ಮನ್ನು ಎಲ್ಲಿಗೆ ತಂದುಬಿಟ್ಟಿದೆ ನೋಡಿ”, ಎಂದು ನಿಟ್ಟುಸಿರಾದರು ಥೆರೇಸಾಮೇ. ಹಾಗೆನೋಡಿದರೆ ಈಸರಕಾರಿಮಂತ್ರಾಲಯವು ಲೇಬರ್ಪಾರ್ಟಿಸದಸ್ಯರಾಗಿದ್ದ ಜೋಕಾಕ್ಸ್ರವರ ಕನಸಿನಕೂಸೇ. ಪಕ್ಷ ರಾಜಕೀಯವನ್ನೂ ಮೀರಿ ಲವಲವಿಕೆಯಿಂದ ಕೆಲಸಮಾಡುತ್ತಾ ಒಳ್ಳೆಯಹೆಸರನ್ನು ಪಡೆದಿದ್ದಜೋ ಇಂದು ನಮ್ಮೊಂದಿಗಿಲ್ಲ. 2016 ರಲ್ಲಿ ಆಗಂತುಕನೊಬ್ಬ ಜೋರನ್ನು ಹಾಡಹಗಲೇ ಬರ್ಬರವಾಗಿ ಹತ್ಯೆಮಾಡಿದ್ದ. ಆದರೆ ಆಯೋಗದ ಚುಕ್ಕಾಣಿಯನ್ನುಹಿಡಿದಿದ್ದ ಮತ್ತಿಬ್ಬರು ಸಂಸದರಾದ ರೇಶಲ್ರೀವ್ಸ್ಮತ್ತು ಸೀಮಾಕೆನಡಿಯವರಿಂದಾಗಿ ವರದಿಯು ಸುಸೂತ್ರವಾಗಿ ಹೊರಬಂದಿತ್ತು.

ಸರಕಾರದ ಇಂಥದ್ದೊಂದು groundbreaking ನಡೆಯನ್ನು ನೋಡಲಾದರೂ ಜೋಕಾಕ್ಸ್ನಮ್ಮೊಂದಿಗಿರಬೇಕಿತ್ತು ಎಂದು ಅನ್ನಿಸತೊಡಗಿದೆ.

*********

ಮೊನ್ನೆ ಭಾರತಕ್ಕೆ ಬಂದಾಗ ಪರಿಚಿತವೃದ್ಧರೊಬ್ಬರು ಏನನ್ನೋಹೇಳುತ್ತಿದ್ದರು.

ಈಘಟನೆಯು ನಮ್ಮ ಮಾತಿನಲ್ಲಿ ಅದ್ಹೇಗೆ ಬಂದಿತೋ ಗೊತ್ತಿಲ್ಲ. ಆದರೆ ಯಾವುದೋ ಸುದ್ದಿವಾಹಿನಿಯಲ್ಲಿ ಪ್ರಸಾರವಾದಸುದ್ದಿಯೊಂದರ ಬಗ್ಗೆ ಅವರು ಹೇಳುತ್ತಲಿದ್ದರು. ಒಂದು ವಿಚಿತ್ರ ಸುದ್ದಿ ಎಂಬ ಪೀಠಿಕೆಯೊಂದಿಗೆ ಶುರುವಾಯಿತು ಅವರ ನಿರೂಪಣೆ. ಅದೇಭೂತ-ಪ್ರೇತ-ಪ್ರಳಯ-ಪುನರ್ಜನ್ಮಗಳ ಬುಲೆಟಿನ್ಇ ರಬೇಕು ಅಂದುಕೊಂಡೆ. ಆದರೆ ಅದರಲ್ಲಿ ಮತ್ತೇನೋ ಇತ್ತು. ಮಗನೊಬ್ಬ ತಾಯಿಯನ್ನು ಪ್ರಯಾಸದಿಂದ ಎತ್ತಿಕೊಂಡು ಕೆಲ ಮಹಡಿಹತ್ತಿದನಂತೆ, ನಂತರ ಮೇಲಿನಿಂದ ಕೆಳಕ್ಕೆ ದೂಡಿದನಂತೆ, ಇವೆಲ್ಲವೂ ಕಟ್ಟಡದ ಸಿಸಿಟಿವಿಯಲ್ಲಿ ದಾಖಲಾಗಿತ್ತಂತೆ. ಇದನ್ನು ಕೇಳಿ ನನಗೋ ಕೂತಲ್ಲೇ ಹಾರರ್ಚಿತ್ರವೊಂದರ ಕಥೆಯನ್ನುಕೇಳಿದಂತಾಗಿತ್ತು. ಅಬ್ಬಬ್ಬಾ, ಅದೆಂಥಾಕ್ರೌರ್ಯ! ನಾನು ಒಳಗೊಳಗೇ ಸಣ್ಣಗೆನಡುಗಿ ಹೋಗಿದ್ದೆ.

”ನೀವು ನಿಜಕ್ಕೂ ಸರಿಯಾಗಿ ನೋಡಿದಿರಾ? Are you sure? Are you sure?”, ಎಂದು ಅಂದು ನಾನು ಅವರಲ್ಲಿ ಕೇಳುತ್ತಲೇ ಇದ್ದೆ. ಆಘಾತ ಒಂದು ಕಡೆಯಾದರೆ, ಅಚ್ಚರಿ ಇನ್ನೊಂದು ಕಡೆ. ಹೀಗೂ ಆಗಬಹುದೇ ಎಂಬ ವಿಚಿತ್ರ ಸಂದಿಗ್ಧ ಬೇರೆ. ಟೆಲಿವಿಷನ್, ಅಂತರ್ಜಾಲದಿಂದ ಕೆಲದಿನಗಳ ಕಾಲ ದೂರವಿದ್ದ ನನಗೆ ನಂತರ ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಲಾಗಿರಲಿಲ್ಲ. ಆದರೆಕ್ರೌರ್ಯದ ಈವಿಲಕ್ಷಣಕಥೆಯು ನನ್ನನ್ನು ದಿನವಿಡೀ ಕಾಡಿದ್ದಂತೂ ಹೌದು.

‘ಅವಧಿ’ ಈಘಟನೆಯನ್ನುಮತ್ತೊಮ್ಮೆನೆನಪಿಸಿತು. ವೀಡಿಯೋ ನೋಡಿ ಬೆಚ್ಚಿಬಿದ್ದಿದ್ದೆ. ಮಕ್ಕಳಿಲ್ಲದೆ ಪರಿತಪಿಸುವವರದ್ದು ಒಂದು ಕಥೆ. ಇದ್ದೂ ಹೀಗಾಗುವುದು ಇನ್ನುಕೆಲವರ ವ್ಯಥೆ. ಮನಸ್ಸು ನಿಜಕ್ಕೂ ಭಾರ!

*********

ಅಸಲಿಗೆ ಇಂಗ್ಲೆಂಡಿನಲ್ಲಿ ‘ಒಬ್ಬಂಟಿತನದಇಲಾಖೆ’ಯಸ್ಥಾಪನೆಯನಂತರವೇ ಭಾರತದಲ್ಲಿ ಇದರ ಪರಿಸ್ಥಿತಿಯು ಹೇಗಿರಬಹುದು ಎಂದುನಾನು ಯೋಚಿಸತೊಡಗಿದ್ದು. ದೇಶವೊಂದರಪ್ರಧಾನಮಂತ್ರಿಗಳುಸಮಸ್ಯೆಯಿಂದಕಂಗೆಟ್ಟು, ಅದನ್ನುನಿವಾರಿಸಲುನೋಡಲುಕೇಳಲುವಿಚಿತ್ರವಾಗಿರುವಮಂತ್ರಾಲಯವೊಂದನ್ನುರೂಪಿಸುವುದೆಂದರೆಅದುಚಿಲ್ಲರೆಸಂಗತಿಯೇನೂಆಗಿರಲಿಲ್ಲ. ಇದನ್ನೂಕೂಡಆರೋಗ್ಯಇಲಾಖೆಯಡಿಗೇಸರಿಸಿಪ್ರಧಾನಮಂತ್ರಿಗಳುಕೈತೊಳೆದುಕೊಳ್ಳಬಹುದಾಗಿತ್ತು. ಆದರೆಹಾಗಾಗಲಿಲ್ಲ. ಅಂದರೆಈಸಮಸ್ಯೆಯುಆಗಲೇದೊಡ್ಡಪೆಡಂಭೂತವಾಗಿಕಾಡಿಸುತ್ತಿದೆಎಂದಾಯಿತು. ಬ್ರಿಟನ್ನಿನಒಟ್ಟುಜನಸಂಖ್ಯೆಯನ್ನುಪರಿಗಣಿಸಿದರೂಕೂಡತೊಂಭತ್ತುಲಕ್ಷನಿಜಕ್ಕೂದೊಡ್ಡಸಂಖ್ಯೆಯಾಗುತ್ತದೆ. ಒಟ್ಟಾರೆಯಾಗಿಈನಡೆಯುಸ್ವಾಗತಾರ್ಹ.

ಮರಳಿಭಾರತಕ್ಕೆಬರುವುದಾದರೆಭಾರತದಲ್ಲಿಒಬ್ಬಂಟಿತನದಸಮಸ್ಯೆಯುಎಲ್ಲಿಯವರೆಗೆಬಂದುನಿಂತಿದೆಎಂದುಕುತೂಹಲದಿಂದಮಾಹಿತಿಕಲೆಹಾಕುತ್ತಿದ್ದನಾನುಕೊನೆಗೂಬಂದುಮುಟ್ಟಿದ್ದುಹಿರಿಯನಾಗರಿಕರೆಡೆಗೇ. ಹಿಂದುಸ್ತಾನ್ಟೈಮ್ಸ್ಕಳೆದವರ್ಷವಷ್ಟೇಒಂದುಅಂಕಿಅಂಶವನ್ನುಪ್ರಕಟಿಸಿತ್ತು. ಇದರಪ್ರಕಾರಭಾರತದಲ್ಲಿ 104 ಮಿಲಿಯನ್ (ಹತ್ತುಕೋಟಿಚಿಲ್ಲರೆ) ಹಿರಿಯನಾಗರಿಕರಿದ್ದಾರಂತೆ. ಇದುಭಾರತದಒಟ್ಟುಜನಸಂಖ್ಯೆಯ 8.6 ಪ್ರತಿದಷ್ಟಾಗುತ್ತದೆ. ಅಲ್ಲದೆಇದುಸ್ಪೇನ್, ಕೆನಡಾಮತ್ತುಶ್ರೀಲಂಕಾದಒಟ್ಟುಜನಸಂಖ್ಯೆಯಷ್ಟಾಗುತ್ತದೆಯಂತೆ. 2021 ರಲ್ಲಿಈಸಂಖ್ಯೆಯು 143 ಮಿಲಿಯನ್ಅನ್ನುತಲುಪಲಿದೆ. 2001 ರಿಂದ 2011 ರಅವಧಿಯಲ್ಲಿಹಿರಿಯನಾಗರಿಕರಸಂಖ್ಯೆಯು 36% ಏರಿದೆಎನ್ನುತ್ತಿದೆಈವರದಿ. ಇದುಈಅವಧಿಯಲ್ಲಾದಒಟ್ಟಾರೆಜನಸಂಖ್ಯಾಏರಿಕೆಯಎರಡುಪಟ್ಟುಹೆಚ್ಚು. ಏರಿದಜೀವಿತಾವಧಿಮತ್ತುಕಮ್ಮಿಮಕ್ಕಳನ್ನುಹೊಂದಿರುವವರುಹೆಚ್ಚುತ್ತಿರುವಪರಿಣಾಮವಾಗಿಹಿರಿಯನಾಗರಿಕರಸಂಖ್ಯೆಯುಮತ್ತಷ್ಟುಏರಲಿದೆಎನ್ನುತ್ತಿದೆಈವರದಿ. ಅಂದಹಾಗೆಹಿಂದುಸ್ತಾನ್ಟೈಮ್ಸ್Ministry of Statistics and Program Implementation 2016 ರಲ್ಲಿಹೊರತಂದವರದಿಯಿಂದಈಮಾಹಿತಿಗಳನ್ನುಎತ್ತಿಕೊಂಡಿತ್ತು.

ಭಾರತದಹಿರಿಯನಾಗರಿಕರಬಗ್ಗೆಇಷ್ಟೆಲ್ಲಾಏಕೆಪ್ರಸ್ತಾಪಿಸಬೇಕಾಗಿಬಂದಿತೆಂದರೆದಿನೇದಿನೇಒಬ್ಬಂಟಿಗಳಾಗುತ್ತಲೇಹೋಗುತ್ತಿರುವನಮ್ಮದೇಶದದೊಡ್ಡವರ್ಗವಿದು. ಬೀದಿಗೆಬಿದ್ದವರು, ವೃದ್ಧಾಶ್ರಮಗಳುಒಂದುಕಡೆಯಾದರೆಯಾರಾದರೂತಮ್ಮೊಂದಿಗೆಕೊಂಚಹೊತ್ತುಕಳೆದುತಮ್ಮಏಕಾಂಗಿತನವನ್ನುನಿವಾರಿಸಲುಬರಲಿಎಂದುದಾರಿಕಾಯುತ್ತಿರುವವೃದ್ಧರುಇನ್ನೊಂದುಕಡೆ. ಕಳೆದಕೆಲವರ್ಷಗಳಿಂದಈಎರಡನೇವರ್ಗಕ್ಕಾಗಿಕೆಲಸಂಸ್ಥೆಗಳುಸ್ವಯಂಸೇವಕರನ್ನುಆರಿಸಿ, ತಿಂಗಳಿಗೆಒಂದಿಷ್ಟುಅಂತಕೊಟ್ಟುಇವರನ್ನುವೃದ್ಧರಬಳಿಗೆಕಳಿಸುತ್ತಿದೆ. ಅವರೋಒಂದಿಷ್ಟುಹರಟೆ, ಓದು, ವಿಹಾರಎಂದೆಲ್ಲಾಇವರುಗಳಜೊತೆಒಂದೆರಡುತಾಸುಗಳನ್ನುಕಳೆಯುತ್ತಾರೆ. ಈಅಸಹಾಯಕವೃದ್ಧರಿಗೆನೆರವಾದೆವುಎಂಬಸಾರ್ಥಕಭಾವಇವರದ್ದಾದರೆತನ್ನಚಿಕ್ಕಪುಟ್ಟಖರ್ಚುಗಳಿಗೆಸರಿಹೊಂದುತ್ತದೆಎಂಬಸಮಾಧಾನವೂಕೂಡ. ‘ಆಜಿಕೇರ್’ ಎಂಬಇಂಥದ್ದೇಸಂಸ್ಥೆಯನ್ನುನಡೆಸುತ್ತಿರುವಪ್ರಸಾದ್ಭಿಡೆಯವರನ್ನುಮಾತನಾಡಿಸಿ ‘ಯುವರ್ಸ್ಟೋರಿ’ ಜಾಲತಾಣವುಲೇಖನವನ್ನೂಪ್ರಕಟಿಸಿತ್ತು.

ಆಜಿಕೇರ್ನಂತಹಸಂಸ್ಥೆಗಳುದೆಹಲಿ, ಗುರುಗ್ರಾಮ್, ಮುಂಬೈ, ಪುಣೆ, ಅಹ್ಮದಾಬಾದ್ಗಳಂತಹಶಹರಗಳಲ್ಲಿಆಗಲೇಬೇರುಬಿಟ್ಟಿವೆ. ದೆಹಲಿಯಸಂವೇದನಾಸೀನಿಯರ್ಕೇರ್, ಫಸ್ಟ್ಸೀನಿಯರ್ಸ್, ಪುಣೆಯಲ್ಲಿರುವಮಾಯಾಕೇರ್ಇತ್ಯಾದಿಗಳೂಕೂಡಇತರಉದಾಹರಣೆಗಳು. ವಾಟ್ಸಾಪ್ನಂತಹಸ್ಮಾರ್ಟ್‍ಫೋನ್ಸಂವಹನಸಂಬಂಧಿಆಪ್ಗಳು, ಅಂತರ್ಜಾಲ, ಯೋಗ, ಸಂಗೀತ, ಚಿತ್ರಕಲೆಗಳನ್ನುಕಲಿಸುವುದಲ್ಲದೆಒಂದಿಷ್ಟುಹರಟೆ, ಚಿಕ್ಕಪುಟ್ಟಬೋರ್ಡ್ಆಟಗಳು, ಓದುವಿಕೆಮತ್ತುಕಾಲ್ನಡಿಗೆಯಂತಹಕಾಲಕಳೆಯಲಷ್ಟೇಸೀಮಿತವಾಗಿರುವಸರಳಚಟುವಟಿಕೆಗಳನ್ನೂಕೂಡಇವುಗಳುಏಕಾಂಗಿವೃದ್ಧರಿಗಾಗಿನಡೆಸುತ್ತಿವೆ. ಇನ್ನುಈಕೆಲಸಗಳಿಗಾಗಿಅಭ್ಯರ್ಥಿಗಳನ್ನುಆರಿಸುವಾಗಅವರಪೂರ್ವಾಪರಗಳನ್ನುಕೂಲಂಕುಷವಾಗಿಪರಿಶೀಲಿಸಿಯೇನೇಮಿಸಿಕೊಳ್ಳಲಾಗುತ್ತದಂತೆ.

ಇದುಎಲ್ಲರೂಎಲ್ಲವೂಇದ್ದೂಅನಾಥರಂತೆಬದುಕುತ್ತಿರುವಜೀವಗಳಕಥೆ.

*********

ಒಬ್ಬಂಟಿತನದಬಗ್ಗೆಮಾತನಾಡುತ್ತಾನಾವುಈವರೆಗೆಹಿರಿಯನಾಗರಿಕರಸಮಸ್ಯೆಗಳಮೇಲೆಸಂಕ್ಷಿಪ್ತವಾಗಿಕಣ್ಣಾಡಿಸಿದ್ದಷ್ಟೇಹೊರತುಉಳಿದವರ್ಗಗಳನ್ನುಪರಿಗಣಿಸಿಲ್ಲ. ಇನ್ನುಒಬ್ಬಂಟಿತನ, ಖಿನ್ನತೆ, ಕೀಳರಿಮೆ, ಅಭದ್ರತೆ, ದುವ್ರ್ಯಸನಮತ್ತುಇತರೆಮಾನಸಿಕಸಮಸ್ಯೆಗಳೊಂದಿಗೆಸೆಣಸಾಡುತ್ತಿರುವಯುವಕರನ್ನೂಪರಿಗಣಿಸಿದರೆನಮ್ಮೆದುರಿಗಿರುವಸವಾಲಿನಅಗಾಧತೆನಮಗರಿವಾಗುತ್ತದೆ. ತಾನುಹುಟ್ಟಿಬೆಳೆದನೆಲ, ಹೆತ್ತವರು, ಬಂಧುಗಳುಹೀಗೆಎಲ್ಲರನ್ನೂಬಿಟ್ಟುಮಹಾನಗರಗಳಿಗೆಗುಳೆಹೋಗುತ್ತಿರುವವರತಲ್ಲಣಗಳುಅವರವರಿಗೇಗೊತ್ತು. ಈವರ್ಗದಒಬ್ಬಂಟಿತನವನ್ನೇಮಾರುಕಟ್ಟೆಯನ್ನಾಗಿಸಿ’Speed Dating’ ಜಾಲತಾಣಗಳುಕಾಸುಮಾಡಿಕೊಳ್ಳುತ್ತಿರುವಬಗ್ಗೆಇಂಡಿಯಾಟುಡೇಹತ್ತುವರ್ಷಗಳಹಿಂದೆಯೇಪ್ರಕಟಿಸಿತ್ತು. ಡೇಟಿಂಗ್ತಾಣಗಳುಹಲವರಿಗೆತಮ್ಮಸಮಸ್ಯೆಗಳಿಂದನುಣುಚಿಕೊಳ್ಳಲುಒಂದುಅಡ್ಡದಾರಿಯಂತೆಕೊಂಚಮಟ್ಟಿಗೆನೆರವಾಗಿರಲೂಬಹುದು. ಆದರೆಸಮಗ್ರವಾಗಿನೋಡುವುದಾದರೆ, ಒಬ್ಬಂಟಿತನವನ್ನೂಒಳಗೊಂಡಂತೆಮಾನಸಿಕಆರೋಗ್ಯದಬಗ್ಗೆನಾವುಅದೆಷ್ಟುಜಾಗೃತಿಯನ್ನುಹೊಂದಿದ್ದೇವೆ, ನಮ್ಮವ್ಯವಸ್ಥೆಇವುಗಳನ್ನುಎಷ್ಟುಪರಿಣಾಮಕಾರಿಯಾಗಿನಿಭಾಯಿಸಿದೆಎಂದೆಲ್ಲಾಸೂಕ್ಷ್ಮವಾಗಿಅವಲೋಕಿಸಿದರೆಕಣ್ಣೆದುರುನಿಲ್ಲುವುದುದೊಡ್ಡದೊಂದುಪ್ರಶ್ನಾರ್ಥಕಚಿಹ್ನೆಮಾತ್ರ!

ಕೆಲದಿನಗಳಹಿಂದೆಸ್ಪೈಕ್ಜೋನ್ಝ್ನಿರ್ದೇಶನದ ‘Her’ ಚಿತ್ರವನ್ನುನೋಡುತ್ತಿದ್ದೆ. ಮಿತಭಾಷಿ, ಏಕಾಂಗಿಯಾಗಿರುವಕಥಾನಾಯಕತನ್ನಏಕಾಂಗಿತನವನ್ನುನೀಗಿಸಿಕೊಳ್ಳಲೆಂದೇArtificial Intelligenceಅನ್ನುಹೊಂದಿರುವOperating Systemಒಂದನ್ನುತರಿಸಿಕೊಂಡುಅದರೊಂದಿಗೆಸುಮ್ಮನೆಮಾತಿಗಿಳಿಯುತ್ತಾನೆ. ತನ್ನೊಂದಿಗೆಮಾತನಾಡುವದನಿಯುಹೆಣ್ಣಾಗಿರಬೇಕುಎಂಬುದನ್ನುsettingsವಿಭಾಗದಲ್ಲಿಅವನುಸ್ವತಃಆರಿಸಿಕೊಳ್ಳುವುದಲ್ಲದೆಅದಕ್ಕೊಂದುಮುದ್ದಾದಹೆಸರನ್ನೂಇಟ್ಟಿರುತ್ತಾನೆ. ಕಥಾನಾಯಕನಮನಸ್ಥಿತಿಗೆತಕ್ಕಂತೆಈಅತ್ಯಾಧುನಿಕಯಂತ್ರವುಅವನೊಂದಿಗೆಮಾತನಾಡುವುದಲ್ಲದೆಕ್ಷಣಕ್ಷಣವೂತನ್ನನ್ನುತಾನುಮತ್ತಷ್ಟುವಿಕಸಿತಗೊಳಿಸುತ್ತಾಬಳಕೆದಾರನಿಗೆಸರಳವಾಗುವಂತೆನೋಡಿಕೊಳ್ಳುವಷ್ಟುಸಾಮಥ್ರ್ಯದಪ್ರೋಗ್ರಾಮಿಂಗ್ಅದಾಗಿರುತ್ತದೆ.

ಆದರೆವಿಪರ್ಯಾಸನೋಡಿ. ನಮ್ಮಕಥಾನಾಯಕಆಹೆಣ್ಣುದನಿಯೊಂದಿಗೆಮಾತಾಡುತ್ತಾಮಾತಾಡುತ್ತಾಅದೊಂದುದನಿಯಷ್ಟೇಎಂಬುದನ್ನುಮರೆತುಅದರೊಂದಿಗೆದಿನೇದಿನೇಆಪ್ತನಾಗುತ್ತಾಹೋಗುತ್ತಾನೆ. ಅದರೊಂದಿಗೆಕಷ್ಟಸುಖಗಳನ್ನುಹೇಳಿಕೊಳ್ಳುತ್ತಾನೆ. ನಗುತ್ತಾನೆ, ಅಳುತ್ತಾನೆ, ಕಣ್ಣೀರಾಗುತ್ತಾನೆ, ನಿಟ್ಟುಸಿರಾಗುತ್ತಾನೆ. ಕ್ರಮೇಣಹೊಸದಾಗಿಪ್ರೀತಿಯಲ್ಲಿಬಿದ್ದಹೈಸ್ಕೂಲುಹುಡುಗನಂತೆಅನುದಿನವೂಆದನಿಯುತನ್ನಜೊತೆಗೇಇರಬೇಕೆಂದುಹಂಬಲಿಸುತ್ತಾನೆ. ನಂತರಈದನಿಯುತನ್ನಂತೆಯೇಹಲವುಲಕ್ಷಬಳಕೆದಾರರಿಗೂತನ್ನಸೇವೆಯನ್ನುಒದಗಿಸುತ್ತಿದೆಎಂಬುದುತಿಳಿದಾಗಏಕಾಏಕಿಪ್ರೇಯಸಿಯುಕೈಕೊಟ್ಟುಹೋದಂತೆಭ್ರಮನಿರಸನಕ್ಕೊಳಗಾಗುತ್ತಾನೆ. ಯಾಕೆಹೀಗೆಮಾಡಿದೆಎಂದುಬಿಕ್ಕುತ್ತಾನೆ. ಕೋಪದಿಂದಸಿಡುಕುತ್ತಾನೆ. ಹಿಂದೆಂದಿಗಿಂತಲೂಹೆಚ್ಚಿನಖಾಲಿತನವುಅವನಲ್ಲಿಈಗಹೊಸದಾಗಿಮನೆಮಾಡಿಕೊಂಡಿರುತ್ತದೆ.

ನಾವೂಕೂಡಕೆಲವೊಮ್ಮೆಹೀಗೆಯೇಎಂದುನನಗನ್ನಿಸುವುದು. ಕಣ್ಣೆದುರಿಗಿರುವುದುಅಕ್ಷರಶಃಭ್ರಮೆಯೆಂಬುದುತಿಳಿದಿದ್ದರೂಸುಮ್ಮನೆಅದನ್ನುಮೋಹಿಸುತ್ತೇವೆ. ಹಂಬಲಿಸುತ್ತೇವೆ. ”ನನಗೂಒಬ್ಬಗೆಳೆಯಬೇಕು”, ಎಂಬಕವಿಸಾಲುಹಾಯೆನಿಸುತ್ತದೆ. ಕೊನೆಗೆಅದುಕಾರಣಾಂತರದಿಂದಕೈಬಿಟ್ಟುಹೋದಾಗತೀರಾನೆಲಕಚ್ಚಿಹೋಗುತ್ತೇವೆ. ಅಸ್ತಿತ್ವದಲ್ಲೇಇರದಿದ್ದವಸ್ತುವೊಂದನ್ನೋ, ಭ್ರಮೆಯೊಂದನ್ನೋತನ್ನದೆಂದುಭಾವಿಸಿಅದನ್ನುಕಳೆದುಕೊಂಡಹತಾಶೆಯಲ್ಲಿವೃಥಾಕೊರಗುತ್ತೇವೆ.ಸಂಪತ್ತು, ಸಂತಾನಗಳೆರಡೂನಶ್ವರವೆನಿಸತೊಡಗುತ್ತದೆ.ಕ್ರಮೇಣನಮ್ಮೊಳಗಿನಖಾಲಿತನವುತಳವಿಲ್ಲದಕೊಡದಂತೆಭಾಸವಾಗತೊಡಗುತ್ತದೆ. ತುಂಬಿದಷ್ಟೂಅದುಖಾಲಿಖಾಲಿ.

ಎಂಥದ್ದೇಅತ್ಯಾಧುನಿಕಆಪ್ಗಳಿದ್ದರೂ, ಎಂಥದ್ದೇಕೇರ್ಸೆಂಟರ್ಗಳಿದ್ದರೂನಾವುಒಬ್ಬಂಟಿಯೇಎಂದುನಮಗೆಸ್ವತಃತಿಳಿದಿರುತ್ತದೆ. ಆದರೆಈಕಟುಸತ್ಯವನ್ನುಕಣ್ಣಲ್ಲಿಕಣ್ಣಿಟ್ಟುನೋಡುವುದು, ಒಪ್ಪಿಕೊಳ್ಳುವುದುಮಾತ್ರಕಷ್ಟ. ಮತ್ತಷ್ಟು ‘ಒಬ್ಬಂಟಿತನದಇಲಾಖೆ’ಗಳುಹುಟ್ಟದಿರಲಿ. ಅಷ್ಟೇ!

************

 

 

 

 

 

 

 

 

 

 

 

 

 

 

 

 

 

 

 

Leave a Reply