ಸುಮ್ಮನೇ ಶೋಕಿ ಮಾಡುತ್ತಾರೆ ಜನ..

 

 

ಲಹರಿ ತಂತ್ರಿ

 

 

 

ಕೈ ಚಾಚಿದರೆ ಸಿಗುವಷ್ಟು ದೂರದಲ್ಲೇ ನಿಂತಿರುತ್ತದೆ
ಮೊಂಡು ಕೈ ಎಂದು ನೆಪ ಹೇಳುತ್ತಾರೆ ..
ನಾಲ್ಕೇ ಹೆಜ್ಜೆಯ ಅಂತರದಲ್ಲಿ ಹರಡಿಕೊಂಡಿರುತ್ತದೆ
ದಾರಿ ಗೊತ್ತಿಲ್ಲವೆಂದು ಸುಳ್ಳಾಡುತ್ತಾರೆ..

ಮನಸ್ಸಿನೊಳಗೇ ಕಾಲು ಮಡಚಿ ಕುಳಿತಿರುತ್ತದೆ
ಅರಿವೇ ಇಲ್ಲದಂತೆ ನಟಿಸುತ್ತಾರೆ..
ಸತ್ಯವೋ ಮಿಥ್ಯವೋ ಸ್ಪಷ್ಟವಾಗಿ ಗೋಚರಿಸುತ್ತಿರುತ್ತದೆ
ಪ್ರಜ್ಞೆಯೇ ಇಲ್ಲದಂತೆ ಇದ್ದುಬಿಡುತ್ತಾರೆ..

ಇಷ್ಟವಿದ್ದೂ ಇಲ್ಲದಂತಿರುತ್ತಾರೆ,
ಹಿಂಸೆಯೆನಿಸಿದ್ದನ್ನೇ ಅಪ್ಪುತ್ತಾರೆ!
ಬೇಕಾಗಿದ್ದನ್ನು ತಿರಸ್ಕರಿಸುತ್ತಾರೆ,
ಬೇಡವಾಗಿದ್ದನ್ನ ಜೊತೆಯಲ್ಲೇ ಇಟ್ಟುಕೊಳ್ಳುತ್ತಾರೆ!!

ಸಂಬಂಧಗಳೆಂದರೆ ಹಾಗೆಯೇ!
ಸುಮ್ಮನೇ ಶೋಕಿ ಮಾಡುತ್ತಾರೆ ಜನ..

1 Response

  1. ಅಕ್ಕಿಮಂಗಲ ಮಂಜುನಾಥ. says:

    ಪದ್ಯ ಚೆನ್ನಾಗಿದೆ.

Leave a Reply

%d bloggers like this: