ಎಲೆ ಉದುರುವಷ್ಟು  ನಿರಾಳವಾಗಿ..!!

ಕು.ಸ. ಮಧುಸೂದನ ನಾಯರ್

 

ಹೇಳಿ ಬಂದಿದ್ದೆಯೇನು ಬರುವಾಗ

ಇಲ್ಲವಲ್ಲ

ಮತ್ಯಾಕೆ ಹೋಗುವಾಗ

ಹೇಳಿ ಹೋಗುವ  ತವಕ.

 

ಇದ್ದಾಗಲಾದರು ಇದ್ದೆಯೇನು

ಅವರು ಅಪೇಕ್ಷಿಸಿದಂತೆ

ಇಲ್ಲವಲ್ಲ

ಮತ್ಯಾಕೆ ಇಲ್ಲದೇ ಇರುವಾಗಲೂ

ಅವರ ಮೆಚ್ಚಿಸುವ  ಕೌತುಕ.

 

ಬಂದಿದ್ದು ಯಾವಾಗ ಗೊತ್ತಿದೆಯೇ

ಗೊತ್ತಿದ್ದರೂ ಹಗಲಿತ್ತೊ ಇರುಳಿತ್ತೊ

ನಿನಗದರ ಅರಿವಿತ್ತೆ

ಇಲ್ಲವಲ್ಲ.

 

ಮತ್ಯಾಕೆ ಹೋಗುವಾಗ ಕಾಯುವೆ

ಕತ್ತಲಾಗಲಿ

ಯಾರೂ ಕಾಣದಿರಲಿ ಎನ್ನುವ ಆತಂಕ

ಬಂದೆ

ಇದ್ದೆ

ಹೋಗಬೇಕು  ಅಂದರೆ

ಹೊಗಿಬಿಡಬೇಕು ತಣ್ಣಗೆ

ಹಣ್ಣಾದ ಹಳದಿ ಎಲೆ

ನಿಶ್ಯಬ್ದವಾಗಿ ತೊಟ್ಟುಕಳಿಚಿ ಬೀಳುವ ತೆರದಿ

ಅರ್ಥವಾಯಿತೆ?

ಹೊರಡು

ತಿರುಗಿನೋಡದಿರು

ಮರುಗದಿರು!

 

2 Responses

 1. Lalitha siddabasavayya says:

  ವಾಹ್ !! ಸೊಗಸಾದ ಸಾಲುಗಳು

 2. Sudha ChidanandGowd says:

  ನಿಜವೇ…. ಪ್ರತಿಯೊಂದು ಪದವೂ ನಿಜವೇ…
  ಆದರೂ ಉದುರಿ ಬೀಳುವ ಎಲೆಯ ಮೌನದಲ್ಲಿ ನೋವಿರಲಿಲ್ಲವೆಂಬ ಗ್ಯಾರೆಂಟಿಯೇನು..?
  ಆದರೂ ಹೋಗಬೇಕು ಮೌನವಾಗಿ,
  ಬಂದಷ್ಟೇ ಸಹಜವಾಗಿ..

Leave a Reply

%d bloggers like this: