ಕುಳಿರ್ಗಾಳಿಯ ಮಾಗಿಯ ದಿನಗಳಲ್ಲೇ ನೀ ನನಗೆ ಕಂಡಿದ್ದು..

ಶೋಭಾ ದಿನೇಶ್

 

ಕರಾರುವಾಕ್ಕಾಗಿ ಇಂಥದೇ ಇಳಿಸಂಜೆಯ ಕುಳಿರ್ಗಾಳಿಯ ಮಾಗಿಯ ದಿನಗಳಲ್ಲೇ ನೀ ನನಗೆ ಕಂಡಿದ್ದು…
ಊರ ಮುಂದಿನ ದಾರಿಯ ತಿರುವಿನಲ್ಲಿ…

ಒಲವ ಹೊತ್ತಿಗೆಯ ಓದಿದ ಯಾವುದೇ ಕುರುಹು ನಿನ್ನಲ್ಲಿರಲಿಲ್ಲ..
ಆದರೂ ನಾ ಹಠಕ್ಕೆ ಬಿದ್ದೆದ್ದೆ ನಿನ್ನನ್ನು ಪಡೆದೇ ತೀರುವೆನೆಂದು..
ನಿನ್ನ ಕರಗುವುದಿಲ್ಲವೆಂಬ ಪಣಕ್ಕೆ ನಾ ಸೆಡ್ಡು ಹೊಡೆದಿದ್ದೆ…

ನಾ ಬೆನ್ನತ್ತಿರುವ ಸುಳಿವು ದೊರೆತೊಡನೆ ನಿನ್ನ
ಬೀಜ ಶ್ರೇಷ್ಟತೆಯ ಅಹಂ ಮೀಸೆಯಡಿ ನಗುತ್ತಿತ್ತು…
ಹೆಣ್ಣೆಂಬೋ ಹೆಣ್ಣೇ ನಿನ್ನ ಬೆಂಬತ್ತಿರುವಾಗ ಯಾವ ಪುರುಷತ್ವ ವಿಜೃಂಭಿಸುವುದಿಲ್ಲ ಹೇಳು?

ಕುಳಿರ್ಗಾಳಿಯ ಶೀತಕ್ಕೆ ಹೆಪ್ಪಾಗಿದ್ದ ನಿನ್ನೆದೆ ನನ್ನ ಮೈ ಬಿಸುಪಿಗೆ ಕರಗಹತ್ತಿದೆ…
ಎಲ್ಲ ಘನವಸ್ತುಗಳಿಗೂ ಕರುಗುವ ಬಿಂದುವಿದೆಯೆಂಬ ನಾ ನಂಬಿದ ವಿಜ್ಞಾನ ದಿಟವಾಗಿದೆ…

ಈಗ ಕೊಟ್ಟ ಖುಷಿಗಳಿಗಿಂತ ಪಡೆದ ಸಂಭ್ರಮಗಳೇ ಜಾಸ್ತಿ…

1 Response

  1. Santoshkumar says:

    excellent shobha.

Leave a Reply

%d bloggers like this: