ಜಗಕೆ ಮಜ್ಜನ ಬೇಕಿದೆ ಅಜ್ಜ!

ಸದಾಶಿವ್ ಸೊರಟೂರು

ಜಗಕೆ ಮಜ್ಜನ ಬೇಕಿದೆ ಅಜ್ಜ!

ಸುರಿದಿದ್ದು ಅದೆಷ್ಟು
ಬಣ್ಣದ ನೀರು ಅಜ್ಜ
ಸಾಲದೆಂಬಂತೆ
ಹಾಲು ತುಪ್ಪ ಜೇನೊ!

ತೊಳೆಯಲು ಹೊರಟರೇ ನಿನ್ನ!?
ಏನಿತ್ತು ಅಜ್ಜ ನಿನ್ನಲಿ ಮಜ್ಜನಕೆ
ಬರೀ ಎರಡು ಪಾದ ಊರಿದ-
ಜಾಗವಲ್ಲದೆ ಒಂಚೂರು
ಅರಿವೆಯೂ ಇಲ್ಲ!
ಧರಿಸಬೇಕಾದದ್ದು ಹೊರಗಲ್ಲ
ಒಳಗೆ ಅಂದೆಯಲ್ಲವೇ ನೀನು!?
ಎಲ್ಲಾ ಬಿಟ್ಟು ಹೊರಟವನ ಮುಂದೆ
ಆಸೆ ಹೊತ್ತವರ ದಂಡು ನೋಡು!

ಬಣ್ಣದ ನೀರು ಹೊತ್ತು ತಂದವರ
ಮನಸ್ಸು ಇರಬಹುದಿಷ್ಟು ಕೊಳಕು
ಹಸಿದ ಹೊಟ್ಟೆಗಳಿರುವಾಗ
ನೀನಾದರೂ ವ್ಯರ್ಥ ಸಹಿಸುತ್ತಿರಲಿಲ್ಲ!
ಅಜ್ಜ, ಮಜ್ಜನ ನಿನಗಲ್ಲ
ಈ ಜನಕ್ಕೆ ಬೇಕಿದೆ ;
ಆಸೆ ಮೋಸದಲಿ ಗೆಬರಿಕೊಂಡು
ತಿಂದು ಊದಿಕೊಂಡವರಿಗೆ
ಅರಿವಿನ ಮಜ್ಜನ!
ಪಾದಕ್ಕೆರಗಿ ಬೇಡುವೆ ಅಜ್ಜ
ಮತ್ತೊಮ್ಮೆ ಬಂದು
ನಮ್ಮನ್ನೆಲ್ಲಾ ತೊಳೆದು ಬಿಡು!

 

5 Responses

 1. nasrin says:

  ಇದು ನಮ್ಮ ಸಮಾಜದ ದೊಡ್ಡ ದುರಂತ….ಕವಿತೆ ತುಂಬಾ ಚನಾಗಿದೆ….

 2. Suma KB says:

  Very true….ARIVU missing…

 3. Kusumapatel says:

  Very nice.

 4. Anasuya M R says:

  ಅರ್ಥಗರ್ಭಿತ

 5. veda says:

  ಆಸೆ ಮೋಸದಲಿ ಗೆಬರಿಕೊಂಡು ತಿಂದು ಊದಿಕೊಂಡವರಿಗೆ ಅರಿವಿನ ಮಜ್ಜನ! arthagarbitha kavana. Bahala ishtavaythu

Leave a Reply

%d bloggers like this: