ವಸುಧೇಂದ್ರರ ‘ಸಂಪಿಗೆ’

 

ನಾಟಕದ ವಿವರ – ಅಡುಗೆಗೆ ಒಗ್ಗರಣೆ ಹೇಗೆ ಸ್ವಾದಹೆಚ್ಚಿಸುತ್ತದೆಯೋ ಹಾಗೆ ಬದುಕಿಗೆ ಸಣ್ಣ ಸಣ್ಣ ಭಾವನೆಗಳು, ಆಸೆಗಳು, ಕನಸುಗಳು, ಹತಾಶೆಗಳು ಕೂಡ ಸ್ವಾದ ನೀಡುತ್ತದೆ.

ಈ ಸಣ್ಣ ವಿಷಯಗಳಿಗೆ ಒತ್ತು ಕೊಡುವ ಎಷ್ಟೋ ಕಥೆಗಳು ಇವೆ. ಅದರಲ್ಲಿಒಂದು ರೀತಿಯಲ್ಲಿ ಆಕರ್ಷಕವಾಗಿರುವುದು ವಸುದೇಂದ್ರ ರವರ “ಮಿಥುನ” ಇದು ಶ್ರೀರಮಣರ ತೆಲುಗಿನ ಕಥೆಗಳಿಂದ ಪ್ರೇರೇಪಿತವಾಗಿದೆ.

ಯಾವುದೇ ಆತಿರೇಕಗಳಿಲ್ಲದ ತಿಳಿಯ ಅನುಭವಗಳನ್ನು ನೀಡುವ ನಾಲ್ಕೈದು ಕಥೆಗಳನ್ನು ರಂಗರೂಪಕ್ಕೆ ತರುವ ಪ್ರಯತ್ನ ನಮ್ಮದು.

ಒಬ್ಬ ಮನುಷ್ಯನ ಜೀವನ ಶೈಲಿ, ಕಟ್ಟು ಕಥೆಯಂತೆ ಕಾಣುವ ಒಂದು ಘಟನೆ, ಬಾಲ್ಯದ ಒಂದು ತೀರದ ಆಸೆ, ಬದುಕು ಕಟ್ಟುವ ರೀತಿ ಈ ನಾಟಕದ ಹೂರಣಗಳ. ಈ ಕಥೆಗಳ ವಿಶೇಷವೆಂದರೆ ಯಾವುದೇ ತಾರ್ಕಿಕ ಚೌಕಟ್ಟುಗಳಿಗೆ ಒಳಪಡದೆ, ಸಾಮಾನ್ಯ ವ್ಯಕ್ತಿಯ ಬದುಕಿನ ಸೂಕ್ಷ್ಮಗಳನ್ನು ಎತ್ತಿಹಿಡಿದು ಗೌರವಿಸುವ ಪ್ರಯತ್ನ.

“ನೆಮ್ಮದಿಯ ಜೀವನವು ಒಂದು ಸಾಧನೆ” ಎಂದು ಬಿಂಬಿಸುವ ಇಚ್ಚೆ.

ಹೆಚ್ಚಿನ ಮಾಹಿತಿಗಾಗಿ : 9148983899, 9986209257,9900155747

Leave a Reply