ಎಲ್ಲಿಯೂ ಹೋಗದ ಗಾಡಿಗೆ ಜೀವ ಕೊಟ್ಟವನೇ..

 ಧನಂಜಯ ಎನ್ ಆಚಾರ್ಯ

ಇಷ್ಟೊತ್ತೂ ಜೊತೆಗಿದ್ದ  ಅವ ಮಾಯವಾಗಿದ್ದಾನೆ,
ಬೆಚ್ಚಗೆ ಬೆಡ್ಶೀಟಿನೊಳಗಿದ್ದ ತಲೆ ತಾ ಕೊಡವಿ ಹೊರಬಂದು,
ತನಗಾಗಿ ಕಾಯುತ್ತಿರುವ ಮತ್ತಿನ್ಯಾರಿಗೋ ಹುಡುಕಿದೆ,

ಎಲ್ಲಿಯೂ ಹೋಗದ ಗಾಡಿಗೆ ಜೀವ ಕೊಟ್ಟವನಿವನು
ಅವರು ನಾವೆಲ್ಲಾ…. ಸಾಲಗಾರರಂತೆ ಇವನ ಬಳಿ ಬಂದರೂ
ಯಾಕಿವನು ಒಬ್ಬನೇ ರಸ್ತೆ ಬದಿ ನಿಂತು
ಪೂರ್ವ ಜನ್ಮದ ಆಸ್ತಿಯಂತೆ ಜಾಗವ ಹಿಡಿದ?
ಬೆಳ್ಳಗೆ ಮೋಡಗಳು ತಿರುಗಿದ ತಕ್ಷಣ ಸಂಬಂಧಿಕರಂತೆ
ಇವನನ್ನೇ ಅವರ್ಯಾಕೆ ಹುಡುಕಿದರು?
ಶತ ಶತಮಾನದಿಂದಲೂ ನಾವೆಲ್ಲಾ ಒಂದೇ ಬಳ್ಳಿಯ ಹೂಗಳು ಎಂದು ಮತ್ತಿನ್ಯಾರೋ ಹಾಡಿದರು.
ಪೂರಕ ಗೀರಕ ಬೇಕಿಲ್ಲ !

ಈ ಜೀಜಿಕ್ಕ ನಿದ್ದೆಗೊಂದು ಕಾವಲಿದೆ
ಚಿಕ್ಕದೊಂದು ಗ್ಲಾಸು ಟೀ ಎದೆಯೊಳಗೆ ಭೇದಿಸಿ
ಉಸಿರ ಬಿಗಿಯಾಗಿಸಿ
ಇಡೀ ಲೋಕ ಬೆಚ್ಚಗೆ ಚುಪ್ ಚುಪ್ ಸದ್ದಿನೊಂದಿಗೆ.

 

Leave a Reply