ಈ ಹೊತ್ತಿಗೆಯ ಹೊನಲು

ಈ ಹೊತ್ತಿಗೆಯ ಹೊನಲು ೨೦೧೮

ಸಾಹಿತ್ಯಲೋಕ ಅಪಾರವಾದೊಂದು ಸಮುದ್ರ. ಓದುಗ ಓದೆಂಬ ದೋಣಿಯ ಮೂಲಕ ತನಗೆಷ್ಟು ಸಾದ್ಯವೋ ಅಷ್ಟು  ಅದರ ವಿಸ್ತಾರವನ್ನು ತಿಳಿಯುವ ಪ್ರಯತ್ನ ಮಾಡುತ್ತಾನೆ. ಈ ಓದಿನ ಪಯಣದಲ್ಲಿ ಜೊತೆಗಾರರೂ ದೊರಕಿದರೆ ವಸ್ತು ವಿಸ್ತಾರಕ್ಕೂ ವಿಚಾರವಿನಿಮಯಕ್ಕೂ ದಾರಿ ಸಿಕ್ಕಂತಾಗುತ್ತದೆ.

ಇಂತಹ ಉತ್ತಮ ಆಶಯದಿಂದ ಹುಟ್ಟಿದ ‘ ಈ ಹೊತ್ತಿಗೆ’ ಗೀಗ ಐದರ ಹರೆಯ.

ಹಲವಾರು ಪುಸ್ತಕಗಳ ಓದಿನ ಜೊತೆಗೆ ಪುಸ್ತಕ ಬರೆದವರ ಭೇಟಿ ಅವರೊಂದಿಗೂ ಮಾತುಕತೆಗೆ, ಸಾಹಿತ್ಯಿಕ ಕಮ್ಮಟಗಳಿಗೆ ವೇದಿಕೆಯಾದ ಈ ಬಳಗ ತನ್ನ ಐದನೇ ವರ್ಷದ ವಾರ್ಷಿಕಾಚರಣೆ ‘ಹೊನಲು’ ಸಂಭ್ರಮವನ್ನು ಫೆಬ್ರವರಿ 11 ಆದಿತ್ಯವಾರ ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ನಡೆಸುತ್ತಿದೆ.

ಈ ಪ್ರಯುಕ್ತ  ಕಥಾಸ್ಪರ್ಧೆಯೊಂದನ್ನು ಏರ್ಪಡಿಸಿ, ನಾಡಿನ ಖ್ಯಾತ ಸಾಹಿತಿಗಳಾದ ಡಾ. ಎಂ.ಎಸ್ ಆಶಾದೇವಿ, ಡಾ. ಕೆ ಸತ್ಯನಾರಾಯಣ, ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಹಾಗು ಶ್ರೀ ವಿಕಾಸ್ ನೇಗಿಲೋಣಿಯವರ ತೀರ್ಪಿನಂತೆ ಬಹುಮಾನಿತರನ್ನು ಆಯ್ಕೆ ಮಾಡಿದೆ.

ಈ ದಿನದ ಸಮಾರಂಭವನ್ನು ವಿಶಿಷ್ಟವಾಗಿ ಆಚರಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ತಂಡ ‘ಲಲಿತ ಪ್ರಬಂಧ ಸುಳುವು ಹೊಳವು, ಮತ್ತು ‘ಶಿಶು ಸಾಹಿತ್ಯ – ಅವಗಾಹನೆ ಅವಗಣನೆ’ ಎಂಬೆರಡು ಗೋಷ್ಟಿಗಳನ್ನು ಆಯೋಜಿಸಿದೆ.

ಡಾ. ಹೆಚ್ ಎಸ್ ವೆಂಕಟೇಶಮೂರ್ತಿ, ಶ್ರೀಮತಿ ಭುವನೇಶ್ವರಿ ಹೆಗಡೆ, , ಶ್ರೀ ಚಂದ್ರಗೌಡ ಕುಲಕರ್ಣಿ, ಡಾ.ಕೆ ಎಸ್ ಚೈತ್ರಾ ಇವರು ಮಾತನಾಡಲಿದ್ದಾರೆ. ಪ್ರಸಿದ್ಧ ಕಥೆಗಾರ ಗಿರೀಶ ರಾವ್ ಹತ್ವಾರ್(ಜೋಗಿ) ಅವರನ್ನು ಈ ಸಂಧರ್ಭದಲ್ಲಿ  ಸನ್ಮಾನಿಸಲಿದ್ದಾರೆ. ಹಿರಿಯ ಸಾಹಿತಿ ಶ್ರೀಮತಿ ಉಷಾ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಕಥಾಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭವೂ ಇದೇ ದಿನ ನಡೆಯಲಿದೆ. ಬೆಳಗ್ಗೆ 10.30 ರಿಂದ ಸಂಜೆ 5.30 ಗಂಟೆಯವರೆಗೆ ನಡೆಯಲಿರುವ ಈ ಸಾಹಿತ್ಯ ಹಬ್ಬಕ್ಕೆ ಸಾಹಿತ್ಯಾಸಕ್ತರನ್ನೆಲ್ಲಾ ಈ ಹೊತ್ತಿಗೆ ತಂಡ ಆಹ್ವಾನಿಸುತ್ತಿದೆ.

 

ಕಾರ್ಯಕ್ರಮ: ಹೊನಲು ೨೦೧೮
ಸಂಸ್ಥೆ: ಈ ಹೊತ್ತಿಗೆ ಟ್ರಸ್ಟ್, ಬೆಂಗಳೂರು
ದಿನಾಂಕ: 11 ಫೆಬ್ರವರಿ 2018
ಸಮಯ: 10.00 ಗಂಟೆ
ಸ್ಥಳ: ಕಪ್ಪಣ್ಣ ಅಂಗಳ, 32ನೇ ಎ ಮುಖ್ಯರಸ್ತೆ, ಜೆಪಿ ನಗರ, ಮೊದಲ ಹಂತ, ಬೆಂಗಳೂರು-೭೧

Leave a Reply