‘ನೂಪುರ ಭ್ರಮರಿ’ಯ ದಶಮಾನೋತ್ಸವ

ನೂಪುರಭ್ರಮರಿಯು ತನ್ನ ದಶಮಾನೋತ್ಸವ ಪೂರ್ಣತೆಯ ಸಂಭ್ರಮದಲ್ಲಿ ‘ಕಲಾಗೌರಿ’ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ

ನೃತ್ಯಾಧ್ಯಯನದ್ವಾರಾ ಶಿವಾರಾಧನೆ ರಾಜ್ಯಮಟ್ಟದ ನೃತ್ಯಸಂಶೋಧನಾ ವಿಚಾರಸಂಕಿರಣ

ಶಾಸ್ತ್ರಾನ್ವಯದ ಪ್ರಯೋಗದೃಷ್ಟಿಯತ್ತ ನೃತ್ಯಚಿಂತನ

ಮಂಡನಕಾರರು :

ಅನುಪಮಾ ಜಯಸಿಂಹ – ಅಡವುಗಳ ಸಂಸ್ಕೃತ ಆಧಾರದ ಕುರಿತು

ರಂಜನಾ ನಾಗರಾಜ್ – ಅಡವು ಮತ್ತು ಹಸ್ತಮುದ್ರೆಗಳ ಸಾಂಜ್ಞಿಕ ವಿನ್ಯಾಸದ ಕುರಿತು

ಮಧುಲಿಕಾ ಶ್ರೀವತ್ಸ- ನಾಯಿಕೆಯರ ನೃತ್ಯಸಾಹಿತ್ಯಗಳಲ್ಲಿ ನಾಯPಭಾವದ ಪಾತ್ರದ ಕುರಿತು

ದೀಪ್ತಿಶ್ರೀ ಭಟ್ – ನೃತ್ಯ ಮತ್ತು ನಾಟಕಗಳಲ್ಲಿ ಸಖಿಯರ ಕರ್ತವ್ಯ ಮತ್ತು ವರ್ಗೀಕರಣದ ಕುರಿತು

 

೪.೧೫ರಿಂದ ಸಂವಾದ : ಅಲರಿಪ್ಪು- ನೂತನ ದೃಷ್ಟಿ ಮತ್ತು ಪ್ರಾಯೋಗಿಕ ಸವಾಲುಗಳು

೫ಗಂಟೆಗೆ : ವಿಶೇಷ ಉಪನ್ಯಾಸ- ಶ್ರೀ ಅರ್ಜುನ್ ಭಾರಧ್ವಾಜ್, ವಿದ್ವಾಂಸರು ಮತ್ತು ಸಹಾಯಕ ಪ್ರಾಧ್ಯಾಪಕರು- ಅಮೃತ ವಿಶ್ವವಿದ್ಯಾನಿಲಯ-

ವಿಷಯ :  ಗ್ರೀಕ್ ಮತ್ತು ಭಾರತದ ಕಲೆ ಹಾಗೂ ಅಲಂಕಾರಶಾಸ್ತ್ರದ ಬಂಧುತ್ವ- ಸಮನ್ವಯತೆ

ಸಂಜೆ ೬ ಗಂಟೆಗೆ : ವಿಚಾರಸಂಕಿರಣದ ಅಧ್ಯಕ್ಷ ವಿದ್ವಾಂಸರಿಂದ ಪ್ರತಿಕ್ರಿಯೆ

ನೂಪುರ ಭ್ರಮರಿ- ದಶವರ್ಷ ವಿಶೇಷ- ಆನ್‌ಲೈನ್ ಸಂಶೋಧನಾ ನಿಯತಕಾಲಿಕೆಯ ಸಮಗ್ರ ಆವೃತ್ತಿ ಅನಾವರಣ

ಸನ್ಮಾನ-ಬಿರುದು ಪ್ರದಾನ –

ಕೆ.ಎನ್ ಅನಂತರಾಮಯ್ಯ- ಹಿರಿಯ ಆಯೋಜಕರು, ಬಿಟಿ‌ಎಂ ಕಲ್ಚರಲ್ ಅಕಾಡೆಮಿ,ಬೆಂಗಳೂರು ಇವರಿಗೆ- ‘ಕಲಾಯೋಜನಕೌಶಿಕ’ ಎಂಬ ಬಿರುದನ್ನಿತ್ತು

ಸುಬ್ಬುಕೃಷ್ಣ – ಸಹೃದಯೀ ಪ್ರೇಕ್ಷಕ ಮತ್ತು ಬರೆಹಗಾರ, ಸಂಘಟಕರು, ಕೃಷ್ಣಕಲಾಕೇಂದ್ರ, ಬೆಂಗಳೂರು ಇವರಿಗೆ- ‘ಸಹೃದಯ ಸದ್ರತ್ನ’ ಎಂಬ ಬಿರುದನ್ನಿತ್ತು

ನಮ್ಮೊಂದಿಗೆ…

ಘನ ಉಪಸ್ಥಿತಿ : ನಾಡಿನ ಬಹುಶ್ರುತ ವಿದ್ವಾಂಸರೂ, ನೂಪುರ ಭ್ರಮರಿ ಸಂಸ್ಥೆಯ ಮಾರ್ಗದರ್ಶಕರೂ ಆಗಿರುವ ಸನ್ಮಾನ್ಯ ಶತಾವಧಾನಿ ಡಾ. ಆರ್. ಗಣೇಶ್,

‘ವಿಮರ್ಶಾ ವಾಙ್ಮಯಿ’, ಹಿರಿಯ ರಂಗಕರ್ಮಿ, ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ

ದಿನಾಂಕ :  ಫೆಬ್ರವರಿ ೧೩, ೨೦೧೮

ಮಧ್ಯಾಹ್ನ ೧.೩೦ರಿಂದ ಸಂಜೆ ೮ ಗಂಟೆಯ ವರೆಗೆ

ಸ್ಥಳ : ಕಲಾಗೌರೀ ಸಭಾಂಗಣ, ‘ಶ್ರೀ ಸಾಯಿ ಗೌರೀ’ ಅಪಾರ್ಟ್‌ಮೆಂಟ್ ಮಹಡಿ, ನಂ.  68(29), ೨ನೇ ಅಡ್ಡರಸ್ತೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮುಖ್ಯರಸ್ತೆ, ಗವಿಪುರಂ ಬಡಾವಣೆ, ಬಸವನಗುಡಿ, ಬೆಂಗಳೂರು.೧೯

Leave a Reply