ಮೀನಿನ ವಾಸನೆ ಮೂಗಿಗೆ ಬಡಿದ ನೆನಪು ಮರುಕಳಿಸುತ್ತದೆ..

 

 

 

 

 

 

 

ಗೀತಾ ಹೆಗಡೆ ಕಲ್ಮನೆ 

 

ನಮ್ಮ ರೇಣುಕಾ ರಮಾನಂದ ಹಾಗೂ ಶ್ರೀದೇವಿ ಕೆರೆಮನೆ ಇವರಿಬ್ಬರ ಕವನಗಳನ್ನು ಓದಿದಾಗೆಲ್ಲ ಮೀನಿನ ವಾಸನೆ ಮೂಗಿಗೆ ಬಡಿದ ನೆನಪು ಮರುಕಳಿಸುತ್ತದೆ.

ಇವರ ಬರಹಗಳನ್ನು ಎಷ್ಟು ಇಷ್ಟ ಪಡ್ತೀನೊ ಅಷ್ಟೇ ಈ ಮೀನಿನ ವಾಸನೆಯಿಂದ ಕಷ್ಟ ಪಟ್ಟಿದ್ದೇನೆ.  ಆ ಊರಿಗೆ ಹೋಗದೇ ಇದ್ದರೆ ಗತಿ ಇರಲಿಲ್ಲ.  ಹೋಗಬೇಕಾದ ಊರು ಹುಟ್ಟಾಪರಿ ನೋಡಿರಲಿಲ್ಲ.  ಜನ, ಊರು, ದೂರ ಎಲ್ಲ ಹ್ಯಾಂಗೊ ಏನೊ ಅಂತ ಒಳಗೊಳಗೆ ಲೆಕ್ಕ ಹಾಕುತ್ತ ಹೆದರಿಕೊಳ್ಳುತ್ತ ಅಂತೂ ಕೊನೆಯ ದಿನ ಆಫೀಸಿಗೆ ಹಾಜರಾಗಲು ಕೊಟ್ಟ ಏಳನೇ ದಿನ ಆ ಊರಿಗೆ ಕಾಲಿಟ್ಟೆ.

ಅಬ್ಬಾ! ಅದೇನು ವಾಸನೆ ಅಂತೀರಾ.  ತರಕಾರಿ ರಸ್ತೆ ಅಕ್ಕ ಪಕ್ಕ ಇಟ್ಟು ಮಾರೋದು ನೋಡಿದ್ದೆ.  ನೋಡಿದರೆ ಇಲ್ಲಿ ಎಲ್ಲಂದರಲ್ಲಿ ಮೀನುಗಳ ರಾಶಿ ರಾಶಿ.  ನಿಜಕ್ಕೂ ಧಂಗಾಗಿ ಹೋಗಿದ್ದೆ.  ಸದಾ ದಾರಿಗೆ ಎಂಟ್ರಿ ಆದೆ ಅಂದರೆ ಮೂಗಿಗೆ ಹಿಡಿದ ಖರ್ಚೀಪ್ ತೆಗಿತಾ ಇರಲಿಲ್ಲ.  ಆದರೆ ಅನುಭವಿಸದೆ ಗತ್ಯಂತರವಿರಲಿಲ್ಲ.

ಬರಬರುತ್ತ ಈ ವಾಸನೆ ನನ್ನ ಮೂಗು ಒಗ್ಗಿಸಿಕೊಳ್ತೋ ಅಥವಾ ನನ್ನ ಮನಸ್ಸು ಸ್ವೀಕರಿಸಿತೊ ಗೊತ್ತಿಲ್ಲ   ನಾನೂ ಸ್ವಲ್ಪ ಗುಂಡ ಗುಂಡಗೆ ಆದೆ.  ಊರಿಗೆ ಹೋದಾಗ ಕೆಲವರು “ಏನೆ ನೀನೂ ಮೀನ್ ತಿಂತ್ಯನೆ?  ದಪ್ಪಗಾಜೆ”  ”  ಇಲ್ಲ ದಿನಾ ಮೀನಿನ ಗಾಳಿ ಕುಡಿತಿ” ನಗುತ್ತ ನನ್ನ ಉತ್ತರ.

ಇಷ್ಟ ಪಟ್ಟು ತಿನ್ನುವವರ ಮಧ್ಯೆ ನಾನಿರೋದಾಗಿತ್ತು.  ಬಹುಶಃ ಮೀನಿನ ವಾಸನೆ ಇಲ್ಲದ ಜಾಗವೇ ಇರಲಿಕ್ಕಿಲ್ಲ ಅಲ್ಲಿ. ಅಲ್ಲಿಯವರ ಕುಲ ಕಸುಬೇ ಅದಾಗಿತ್ತು.  ಆಮೇಲೆ ಆಮೇಲೆ ಸ್ವಲ್ಪ ನಿರಾಳವಾಗುತ್ತ ಬಂದೆ.  ಆದರೆ ಆ ನೆನಪು ಹಾಗೆ ಉಳೀತು.

ಶೆಟ್ಲಿ ಬೇಕಾ ಶೆಟ್ಲಿ ಎಂದು ರಸ್ತೆಯಲ್ಲಿ ಒಂದು ಹೆಂಗಸು ಕೂಗಿಕೊಂಡು ಹೋಗ್ತಾ ಇದ್ಲು ಪ್ರತೀ ದಿನ.  ಆದರೆ ಅದು ಏನು ಅಂತ ಅವಳ ತಲೆ ಮೇಲಿರೊ ಬುಟ್ಟಿ ನೋಡಿದರೆ ಗೊತ್ತಾಗುತ್ತಿತ್ತು.   ಅಡಿಗೆ ಮನೆಯಲ್ಲಿ ಏನೊ ಮಾಡ್ತಾ ಇದ್ದೆ.  ನನ್ನ ತಂಗಿ ಊರಿಂದ ಮೊದಲ ಬಾರಿ ಅಕ್ಕನ ಜೊತೆ ಒಂದಷ್ಟು ದಿನ ಠಿಕಾಣಿ ಹೂಡಲು  ಬಂದಿದ್ಲು.

ಅವಳು ಈ ಹೆಂಗಸಿನ ಕೂಗಿಗೆ “ಸ್ವಲ್ಪ ಇರು ನನಗೆ ಬೇಕು”  ಕೂಗಿ ಹೇಳಿದಳು.  ಅವಳೊ “ಅಮ್ಮ ತಗಂತ್ರಾ?”  ಲಗುಬಗೆಯಿಂದ ಹೋದ ನನ್ನ ತಂಗಿ ಸರ್… ಅಂತ ವಾಪಸ್ಸು ಬಂದು ಒಮ್ಮೆ ಮುಖ ಸಿಂಡರಿಸಿಕೊಂಡು ಜೋರಾಗಿ ನಗಲು ಶುರು ಮಾಡಿದಳು. “ಅಕ್ಯಾ ಅದು ಮೀನಡೆ, ಒಣಗಿದ್ದೂ. ಥೋ”

ಮತ್ತೆಂದೂ ನನ್ನ ಕೇಳದೆ ದಾರಿಯಲ್ಲಿ ಹೋಗುವ ವ್ಯಾಪಾರಿಗಳನ್ನು ಕರೆದು ನಿಲ್ಲಿಸುತ್ತಿರಲಿಲ್ಲ.  ತನ್ನ ಬೆಸ್ತು ತನಕ್ಕೆ ಇಂದಿಗೂ ಇಬ್ಬರೂ ಸೇರಿದಾಗ ಜ್ಞಾಪಕ ಮಾಡಿಕೊಂಡು ನಗೋದು ಬಿಟ್ಟಿಲ್ಲ.

ಅಂಕೋಲಾದಲ್ಲಿ ಒಣ ಮೀನು ಮಾರುವವರು ಅವುಗಳನ್ನು ಒಂದು ಬುಟ್ಟಿಯಲ್ಲಿ ತುಂಬಿಸಿಕೊಂಡು ತಲೆಯ ಮೇಲಿರಿಸಿಕೊಂಡು ರಸ್ತೆಯಲ್ಲಿ  ಸಾಗುವಾಗ “ಶೆಟ್ಲಿ ಬೇಕಾ ಶೆಟ್ಲಿ ” ಎಂದು ಕೂಗಿಕೊಂಡು ಹೋಗುವ ವಾಡಿಕೆ.  ಇದು ಗೊತ್ತಿಲ್ಲದೆ ಆದ ಅವಾಂತರವಿದು.  ಕೊನೆಗೆ ಅವಳು ಬಯ್ಕಂಡು ಹೋದಳೊ ಏನೊ ಗೊತ್ತಾಗಲೇ ಇಲ್ಲ ನಮ್ಮ ನಗುವಿನಲ್ಲಿ ಅವಳ ಮಾತು ಉಡುಗಿತ್ತು.

ರೇಣುಕಾ ರಮಾನಂದರವರ ಬಿಡುಗಡೆಯಾಗಲಿರುವ ಪುಸ್ತಕದ ಐದು ಮುಖಪುಟದ ಆಯ್ಕೆಯಲ್ಲಿ ಮೀನು ಹೊತ್ತ ಹೆಂಗಸು ಐದನೇ ಪಟ ಬಹಳ ಮನಸ್ಸಿಗೆ ಹಿಡಿಸಿ ನಡೆದ ಘಟನೆ ಮತ್ತೆ ನೆನಪಿಸಿಕೊಂಡು ಬರೆಯುವಂತಾಯಿತು.

8 Responses

 1. ರೇಣುಕಾ ರಮಾನಂದ says:

  ಮೀನಿನ ಸುವಾಸನೆ ಬಡಿದು ಗುಂಡಗುಂಡಗೆ ಆದ ಗೀತಕ್ಕಾ….ಮೀನು ತಿಂದ ನಾವು ಅನಾದಿಕಾಲದಿಂದ ಗುಂಡಮ್ಮರೇ…

  • ಹ..ಹ.. ತುಂಬಾ ಚೆನ್ನಾಗಿ ಹೇಳಿದಿರಿ. ಅದಕ್ಕಾಗಿಯಾದರೂ ತಮ್ಮನ್ನು ಒಮ್ಮೆ ಕಾಣಬೇಕಲ್ಲಾ!
   ಬೆಂಗಳೂರು ಬಸ್ ಹತ್ತಿಬಿಡಿ. ಮೀನು ಮಾತ್ರ ತರಬೇಡಿ ಆಯ್ತಾ

 2. Prakash says:

  ಮೆಡಂ,
  ಮೀನಿನ ಕುರಿತಾಗಿ ನೀವು ಅನುಭವಿಸಿದ ಅನುಭವವನ್ನು ಹುಬೇ ಹುಬಾಗಿ ಚಿತ್ರಿಸಿರುವಿರಿ.
  ಧನ್ಯವಾದಗಳು. ನಮ್ಮ ಈ ಜನಕೆ , ” ಶೆಟ್ಲಿ ಬೇಕ್ರಾ ಶೆಟ್ಲಿ” ಧ್ವನಿಯೇ ಆಮ್ಲಜನಕ ವಿದ್ದಂತೆ. ಒಟ್ಟಾರೆಯಾಗಿ
  ಚಂದದ ಬರಹ.

 3. ಹೌದು ಸರ್. ಮೂಗು ಮುಚ್ಚಿದರೂ ಬಿಟ್ಟ ಕಣ್ಣು ಬಿಟ್ಟಂತೆ ನೋಡುವಷ್ಟು ಕುತೂಹಲ ಹಲವಾರಿತ್ತು ಅಲ್ಲಿ. ಅಲ್ಲಿಯ ಮೀನುಗಾರರು ಬಹಳ ಕಷ್ಟ ಸಹಿಷ್ಣರು. ಅಷ್ಟೇ ಮುಗ್ಧ ಮನಸ್ಸಿನವರು. ಬರೆಯಲು ಬೇಕಾದಷ್ಟು ವಿಷಯ ಆ ಊರಲ್ಲಿ ಇದೆ. ಕಣ್ಣು ಮಂಜಾಗುವಷ್ಟು.

  ತಮ್ಮ ಮೆಚ್ಚುಗೆಗೆ ಧನ್ಯವಾದಗಳು.

 4. Chi na hally kirana says:

  Madam, shetly maralu bandavala karedu tiraskarisiruva Pari Nijakku duradrustakara, hageye meenu tinnuvara vyagyadinda noduva drisitikona badalagalendu aashisuttene,

 5. ಇಲ್ಲಿ ತಿರಸ್ಕಾರವೂ ಇಲ್ಲ, ವೈರಾಗ್ಯವೂ ಇಲ್ಲ. ಬದುಕಿನ ಅನಿವಾರ್ಯತೆಯಲ್ಲಿ ಮೀನಿನ ವಾಸನೆ ಒಗ್ಗಿಸಿಕೊಂಡ ರೀತಿ ಬುಟ್ಟಿಯಲ್ಲಿ ತಂದಿರುವುದು ಏನೆಂಬುದು ತಿಳಿಯದೇ ಬೆಸ್ತು ಬಿದ್ದ ಘಟನೆ ಬರೆದಿದ್ದೇನೆ. ನೋಟ, ಮಾತು,ಊಟ ಇತ್ಯಾದಿ ಎಲ್ಲ ಅವರವರ ಸೊತ್ತು ಅಲ್ಲವೇ?

  • Chi na hally kirana says:

   Madam, Nimma uttrakke nanna dhanyavaadagalu, nanna atankavenendare samastaru entaha lekhanagalanu odutiruttare, vayuktika anubhavagalu ege sarvartikavaagi, halavaradaru nondukollabaradallave ?
   Hageya, menu maaruva shramika vargakke nimma pritya kalagi vyakta padisiddakee abinandanegalu.

Leave a Reply

%d bloggers like this: