ಆ ರದ್ದಿ ಕಾಗದದ ಮೇಲೆ ಅದೆಂಥಾ ದೌರ್ಜನ್ಯ..

ಗುಲ್ಜಾರ್ ಕವಿತೆ

ಕನ್ನಡಕ್ಕೆ: ಚಿದಂಬರ ನರೇಂದ್ರ

ಚೌಕಿನಿಂದ ಹೊರಟು,
ಮಾರ್ಕೆಟ್ ನ್ನು ಬಳಸಿ,
ಕೆಂಪು ಗಲ್ಲಿಯ
ಇಕ್ಕಟ್ಟಾದ ರಸ್ತೆಗಳನ್ನು ಹಾಯ್ದು,
ಪ್ರಯಾಣ ಮಾಡುತ್ತಿದೆ
ಕಾಗದದ ಹಡಗು.

ಮಳೆಯ ಅನಾಥ ನೀರಿನ ಮೇಲೆ
ತೇಲುತ್ತಿರುವ ಪಾಪದ ಹಡಗು,
ನಗರದ ಹೇಳ ಹೆಸರಿಲ್ಲದ
ಗಲ್ಲಿ ಗಲ್ಲಿಗಳಲ್ಲಿ
ಆತಂಕದಿಂದ
ಹೆದರಿ ಹೆದರಿ ವಿಚಾರಿಸುತ್ತಿದೆ.
“ಎಲ್ಲ ಹಡಗುಗಳಿಗೂ
ಒಂದು ಬಂದರು ಇದ್ದೇ ಇರುತ್ತದೆ ಎಂದರೆ
ನನಗೂ ಕೂಡ ಒಂದಿರಬಹುದಾ?”

ಒಂದು ಮುಗ್ಧ ಮಗು,
ಅರ್ಥವಿಲ್ಲದ್ದಕ್ಕೆ ಅರ್ಥ ಕೊಟ್ಟು
ಆ ರದ್ದಿ ಕಾಗದದ ಮೇಲೆ

ಎಂಥ ದೌರ್ಜನ್ಯವೆಸಗಿದೆ ನೋಡಿ.

 

Leave a Reply