ಕಾಲವೇ ಬಯಲುಮಾಡಲೆಂದು..

ಬಾಹುಬಲಿ

ಹಂದಲಗೆರೆ ಗಿರೀಶ್

ಎಲ್ಲವನ್ನೂ
ಕಳಚಿ ನಿರಾಳ
ಹೊರಟವನ
ಬೆತ್ತಲೆಯ
ಕಲ್ಲಿನಲ್ಲಿ ಕಟೆದು
ನಿಲ್ಲಿಸಿ ಬಂಧಿಸಿದರು
ಎಲ್ಲವನ್ನೂ ತೊಟ್ಟವರು

ಹಾಲುಜೇನು ನೀರುಗಂಧ
ಮಹಾ ಮಸ್ತಕಾಭಿಷೇಕ
ಮಂಗಳಾರತಿ ಘಾಟು
ಧೈವತ್ವದ ಹೊದಿಕೆ
ನಿರಾಕರಣ ಮೂರ್ತಿಗೆ

ಧ್ಯಾನಸ್ಥ ಮಂದಸ್ಮಿತ ಮಾಗಿ
ವಿಷಾದ ಮರೆಯಲ್ಲಿ
ಚಿತ್ತ ಹುತ್ತಗಟ್ಟಿ
ಮೈ ಬಳಸಿದ ಬಳ್ಳಿ

ವಿಪುಲ ಆಕಾಶ
ಅವಕಾಶದಲ್ಲಿ
ಬೆಳಕಿನ ಸುತ್ತಿಗೆ
ಮಳೆಗಾಳಿ ಉಳಿತೀಡಿ

ಕಾಲವೇ
ಬಯಲುಮಾಡಲೆಂದು ತನ್ನ
ಮತ್ತೆ
ಕಾದು ನಿಂತ
ದಿಗಂಬರ

1 Response

  1. ಅಕ್ಕಿಮಂಗಲ ಮಂಜುನಾಥ says:

    ಚೆನ್ನಾಗಿದೆ,ಪದ್ಯ.

Leave a Reply

%d bloggers like this: