ಮೌನವೆಂಬ ಮುಲಾಮಿಗಿಲ್ಲಿ..

ವರ್ಷ ತಾರಾನಾಥ್ 

ಎಣಿಸಿದಷ್ಟು ಹೆಚ್ಚುವ ದುಃಖಕ್ಕೆ
ಮುಲಾಮು ಹುಡುಕುವುದರಲ್ಲೆ
ಕಳೆದುಕೊಂಡಿರುವೆ ನನ್ನೆ ನಾ..

ಎಣಿಸಲಾರದಷ್ಟು ದಾರಿ,
ನನ್ನದ್ಯಾವುದೆಂದು ತೋರದೆ
ಮನಸು ಭಾರ

ಕಳೆದು ಹೋಗಿರುವ ನನ್ನನ್ನು
ಕನ್ನಡಿಯಲ್ಲಿ ಹುಡುಕುತ್ತಿರುವೆ,
ಈಗೀಗ ಕುರುಡುತನದ ಪರಿಚಯ,
ನೋವಿನೆದೆಗೂ‌ ಕಣ್ಣಿಗೂ

ತುಟಿಯಂಚಿನಲ್ಲಿ ಸೋತ ನಗುವಿಗೆ,‌
ಕಣ್ಣಂಚಿನ ಹನಿಯ ಸಾಂತ್ವನವೆನ್ನಬಹುದೆನೊ

ಉತ್ತರಗಳಿಲ್ಲದ ಪ್ರಶ್ನೆಗಳದೆಷ್ಟೊ
ತಪ್ಪು ಒಪ್ಪುಗಳ ಅಂತರವೆಷ್ಟೊ

ಸಿಗದ ದಾರಿಯ ಹುಡುಕುವ ಗುಂಗಿನಲಿ,
ಸಾಗುತಲೇ ಇರುವ
ಮನವನೊಮ್ಮೆ ತಡೆಯಬೇಕಿದೆ,
ಮೌನವೆಂಬ ಮುಲಾಮಿಗಿಲ್ಲಿ
ಆಯಸ್ಸು ಹೆಚ್ಚಿದೆ

5 Responses

 1. Raghothama says:

  ತುಂಬಾ ಚೆನ್ನಾಗಿದೆ

 2. Sahana says:

  Mast ide …. Arthagarbithavagide…..

 3. Vinay kumar says:

  Nice one…:-)

 4. kalkesh Goravar says:

  nice poem

Leave a Reply

%d bloggers like this: