ಶೇಷಗಿರಿಯಲ್ಲಿ ‘ಯುದ್ಧ ಬಂತು ಮನೆಯವರೆಗೆ..’

ಯುದ್ಧ ಬಂತು ಮನೆವರೆಗೆ- ಡಾ. ಶ್ರೀಪಾದ ಭಟ್ಟರ ಮೂರು ಅಸಾಮಾನ್ಯ ನಾಟಕಗಳು

ಈಚೆಗೆ ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಶ್ರೀಮತಿ ಗೀತಾ ಮೋಂಟಡ್ಕ ಅವರು ರಂಗಾಯಣಕ್ಕೆ ಕರಕೊಂಡು ಹೋಗಿ ‘ಯುದ್ಧ ಬಂತು ಮನೆವರೆಗೆ’ ( ನಿರ್ದೇಶನ: ಡಾ.ಶ್ರೀಪಾದ ಭಟ್, ಪ್ರಸ್ತುತ ಪಡಿಸಿದವರು: ಸಂಚಾರಿ ರಂಗ ಘಟಕ) ಎಂಬ ಮೂರು ನಾಟಕಗಳ ಗುಚ್ಛವೊಂದನ್ನು ತೋರಿಸಿದರು.

ಗಿರಿಧರ ಕಾರ್ಕಳ, ಹೇಮಾ ವೆಂಕಟ್, ರೂಪಾ ಮತ್ತಿಕೆರೆ, ಪಿ ಬಿ ಪ್ರಸನ್ನ ಮೊದಲಾದವರೊಡನೆ ಕುಳಿತು ಆ ನಾಟಕಗಳನ್ನು ಧ್ಯಾನಿಸಿ ನೋಡಿದೆ.

ಮೊದಲನೆಯ ನಾಟಕ ಲಿತುವೇನಿಯಾದ ಕತೆಯೊಂದನ್ನು ಆಧರಿಸಿದ್ದರೆ, ಎರಡನೆಯದು ಪಿರಾಂಡೆಲೋನ ಯುದ್ಧವನ್ನಾಧರಿಸಿದ್ದು. ಮೂರನೆಯದು ಒಂದು ಐರಿಷ್ ಕತೆಯನ್ನಾಧರಿಸಿದ್ದು. ಮೂರೂ ನಾಟಕಗಳು ಯುದ್ಧ ಜಾಲದ ವಿಭಿನ್ನ ಮುಖಗಳನ್ನು ತೋರಿಸುತ್ತವೆ. ಆದರೆ ನನ್ನನ್ನು ಬಹುವಾಗಿ ಕಾಡಿದ್ದು ಮೂರನೇ ನಾಟಕ.

ಈ ಮೂರನೆಯ ನಾಟಕ- ಕಡಲು ಸವಾರಿ ಮಾಡಿಯೇ ಬದುಕಬೇಕಾದ ಕುಟುಂಬದ ದುರಂತವನ್ನು ಎದೆ ಬಿರಿಯುವಂತೆ ಕಟ್ಟಿಕೊಡುತ್ತದೆ. ಈ ನಾಟಕ ನೋಡುತ್ತಿದ್ದಂತೆ ನನ್ನ ಕೈಕಾಲುಗಳೆಲ್ಲ ತಣ್ಣಗಾದುವು. ನಾಟಕ ಮುಗಿದು ಈಚೆ ಬಂದು ಇಷ್ಟು ದಿನಗಳಾದರೂ ನಾಟಕದ ಗುಂಗಿನಿಂದ ನನಗೆ ಹೊರಬರಲಾಗಲಿಲ್ಲ.

ಹಾಗೆಯೇ ಒಂದು ಪ್ರಶ್ನೆಗೆ ಉತ್ತರವೂ ದೊರೆಯಲಿಲ್ಲ..

ನಮ್ಮ ದೇಶಕ್ಕೆ ಮೂರು ಕಡೆ ಕಡಲಿದ್ದರೂ ಐರ್ಲೆಂಡಿನ ಸಮುದ್ರ ಸವಾರಿಯಂಥ ಅದ್ಭುತ ಕತೆಯನ್ನು ನಮಗ್ಯಾಕೆ ಬರೆಯಲಾಗಲಿಲ್ಲ? ಬಹುಶ: ಕಡಲ ನಂಟಿರುವವರಲ್ಲಿ ಅಕ್ಷರ ಇರಲಿಲ್ಲ, ಅಕ್ಷರ ಇದ್ದವರಿಗೆ ಕಡಲಿನ ನಂಟು ಇರಲಿಲ್ಲ. ನಷ್ಟ ನಮಗೆಲ್ಲ!

ಗೆಳೆಯ ಶ್ರೀಪಾದ ಭಟ್ಟರಿಗೆ ಅಭಿನಂದನೆಗಳು

-ಡಾ.ಪುರುಷೋತ್ತಮ ಬಿಳಿಮಲೆ

ಶೇಷಗಿರಿ ರಂಗಮಂದಿರದಲ್ಲಿ ರವಿವಾರ (11.3.2018) ಈ ನಾಟಕವಿದೆ.

ಲಿತುವೇನಿಯಾ, ವಾರ್, ಹಾಗೂ ರೈಡರ್ಸ್ ಟು ದಿ ಸೀ ಎಂಬ ತ್ರಿವಳಿನಾಟಕದ ಗುಚ್ಛವಿದು. ರಂಗಾಯಣ ಮೈಸೂರಿನ ಸಂಚಾರಿ ರಂಗಘಟಕ ಇದನ್ನು ಅಭಿನಯುಸುತ್ತಿದೆ. ಹಾವೇರಿ ಸುತ್ತಮುತ್ತಲಿನ ರಂಗಾಸಕ್ತರು ಇದನ್ನು ನೋಡಲು ವಿನಂತಿ

-ಶ್ರೀಪಾದ ಭಟ್

1 Response

  1. subray mattihalli. says:

    ಪ್ರಿಯ ಶ್ರೀಪಾದ ನಮಸ್ತೇ. ರಂಗಾಯಣಕ್ಕೆ ನಿರ್ದೇಶಿಸಿದ ಈ ಮಹತ್ವಪೂರ್ಣ ನಾಟಕವನ್ನು ನಮ್ಮ ಜಿಲ್ಲೆಗೂ ಕರೆತನ್ನಿ ಎಂಬುದು ನನ್ನ ಕೋರಿಕೆ. ಸುಬ್ಬಣ್ಣ.

Leave a Reply

%d bloggers like this: