ಪ್ರಿಯ ಶ್ರೀ ಗುಹಾ ಅವರಲ್ಲಿ..

5 Responses

 1. kvtirumalesh says:

  ಶ್ರೀ ನಾಗಭೂಷಣ ಅವರ ವಿಚಾರಗಳಿಗೆ ನನ್ನ ಸಹಮತವಿದೆ. ಈವತ್ತು ಇಂಗ್ಲಿಷ್-ನಲ್ಲಿ ಏನು ಬರೆದರೂ
  ಭಾರತೀಯರಿಗೆ, ಅದರಲ್ಲೂ ಕನ್ನಡಿಗರಿಗೆ, ಶ್ರೇಷ್ಠವೆನಿಸುತ್ತದೆ, ಕನ್ನಡದಲ್ಲಿ ಬರೆದರೆ ನೋಡುವವರೇ ಇಲ್ಲ. ಕನ್ನಡ
  ಸಾಹಿತಿಗಳಿಗೂ ತಾವು ಇಂಗ್ಲಿಷ್-ಗೆ ಅನುವಾದಗೊಂದರೇನೇ ಸ್ವೀಕೃತರು ಎಂದು ತಿಳಿದುಕೊಂಡಿದ್ದಾರೆ! ಇನ್ನು
  ಗುಂಪುಗಾರಿಕೆಯ ಕುರಿತು ಹೇಳುವುದೇ ಬೇಡ. ನಾಗಭೂಷಣರದು ಸಮಚಿತ್ತದ ಮಾತುಗಳು ಎಂದು ತ್ರಿಳಿದಿದ್ದೇನೆ.
  ಕೆ.ವಿ. ತಿರುಮಲೇಶ್

 2. Prakash parvatikar says:

  ಕನ್ನಡ ಮೊದಲು, ಇಂಗ್ಲೀಷದ ಸ್ಥಾನ ಕೊನೆಯದು.ನಡುವೆ ಪ್ರಾದೇಶಿಕ ಇತರ ಭಾಷೆಗಳು.

 3. Shivasimha says:

  ಕನ್ನಡ ಮೊದಲು. ನಂತರ ಇಂಗ್ಲಿಷ್.

 4. Lalitha siddabasavayya says:

  ಗಾಂಧೀಜಿಯವರು ಮಾತೃಭಾಷೆ ಕುರಿತಂತೆ ತಮ್ಮ ನಿಲುವನ್ನು ಬದಲಾಯಿಸಿಕೊಂಡರೆಂಬ ಅರ್ಥದ ಶ್ರೀ ಗುಹಾ ಅವರ ಅಭಿಪ್ರಾಯ ನನಗೂ ಅರ್ಥವಾಗಲಿಲ್ಲ. ಅಥವಾ ನನಗೆ ಅವರನ್ನು ಗ್ರಹಿಸಲಾಗಿಲ್ಲವೋ ?

  ಗಾಂಧೀಜಿ ಮತ್ತು ಗುರುದೇವ ಅವರ ನಡುವೆ ಅನೇಕ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿದ್ದವು .
  ಆ ಕುರಿತಾದ ಲಭ್ಯ ಬರವಣಿಗೆ ಓದುವಾಗ ಅವರಿಬ್ಬರ ನಡುವಿನ ಸ್ನೇಹಕ್ಕೆ ಅವೇನೂ ತೊಡಕಾದ ಹಾಗೆ ಕಾಣಿಸುವುದಿಲ್ಲ. ಮತ್ತು ಹಾಗೂ ಮುಖ್ಯವಾಗಿ ಅವರಿಬ್ಬರೂ ಯಾವೊಂದು ವಿಷಯದಲ್ಲೂ ರಾಜಿಯಾದ ಹಾಗೆಯೂ ನನಗನಿಸುವುದಿಲ್ಲ. ಬಾಪೂ ಅವರು ಬಹು ಸ್ಪಷ್ಟವಾಗಿಯೆ ಮಾತೃಭಾಷೆಯಲ್ಲಿಯೆ ಮಕ್ಕಳ ಶಿಕ್ಷಣ ಇರಬೇಕೆಂದು ಹೇಳಿದ್ದಾರೆ. ನನಗಂತೂ ಎಲ್ಲಿಯೂ ಅಸ್ಪಷ್ಟತೆ ಕಾಣುವುದಿಲ್ಲ. ಕೆದಕಿ ಕೆದಕಿ ಹುಳುಕು ಹುಡುಕಿದರೆ ಎಲ್ಲಿ ಬೇಕಾದರೂ ಅದು ಸಿಗಬಹುದು.

  ಮಾತೃಭಾಷೆಯ ಪ್ರತಿಪಾದನೆ ಯಾ ಮತ್ತೊಂದು ವಿಷಯ, ಯಾವುದರಲ್ಲೂ ಬಾಪೂ ಯಾರೊಂದಿಗೂ ಕ್ರಿಯೆ ರಹಿತದ ಕೇವಲ ಜ್ಞಾನದ ಸ್ಪರ್ಧೆಯಲ್ಲಿರಲೆ ಇಲ್ಲ. ಕ್ರಿಯೆಯಲ್ಲಿ ಉಪಯೋಗಿಸಲು ಬರದ ಜ್ಞಾನ ಅವರಿಗೆ ನಿಷಿದ್ಧವೆ ಆಗಿತ್ತು. ಹಾಗಾಗಿಯೇ ಅವರಿಗೆ ಅತಿಬುದ್ಧಿಯ ಪ್ರಯೋಗ ಅಗತ್ಯ ಬೀಳಲಿಲ್ಲವೇನೋ.

  ಬುದ್ಧಿಯೆ ಬಲ, ಸ್ಪರ್ಧೆಯೇ ಬದುಕು , ಕ್ರಿಯೆ ಸೊನ್ನೆ ಆದಾಗ ಮಾತಿನ ಮಸೆತಗಳೆ ದರ್ಶನದ ಮಟ್ಟಕ್ಕೇರಿಬಿಡುತ್ತವೆ. ಕನ್ನಡದ ವಿಷಯದಲ್ಲಿ ಸ್ವದರ್ಶನಗಳ‌ ಪಕ್ಕಕ್ಕಿಟ್ಟು ಒಟ್ಟಿಗೆ ಹೋದರೆ ಕನ್ನಡ ಉಂಟು ನಾವೂ ಉಂಟು! ಇಲ್ಲವೋ ನಮ್ಮ ನೆಲ , ನೀರು , ಮಾತು ಮೂರೂ ಕಳಕೊಂಡು ಪರದೇಸಿಗಳಾಗುತ್ತೇವೆ.

 5. ನಾಗರಾಜ್ ಡಿ ಜಿ ಹರ್ತಿಕೋಟೆ says:

  ಕನ್ನಡ ನೆಲದಲ್ಲೆ ಕನ್ನಡ ಬದುಕಲಿ…ಇಲ್ಲದಿದ್ಲರೆ ಇನ್ನಾವ ನೆಲದಲ್ಲಿ ಕನ್ನಡ ಬಾಳೀತು…! ಜೊತೆಗೆ ಕನ್ನಡ ಅನ್ನದ ಭಾಷೆಯಾಗಲಿ…

Leave a Reply

%d bloggers like this: