ಹೀಗೂ ಬಿಡುಗಡೆಯಾಯ್ತು ಆ ಎರಡು ಕೃತಿ..

ಎದೆಯಲ್ಲಿ ಮನುಷ್ಯತ್ವದ ಪಸೆ ಇದ್ದಾಗ ಮಾತ್ರ ಹೀಗಿರುವುದು ಸಾಧ್ಯ…
– – – – – – – – –

ಮೂರು ತಿಂಗಳ ಹಿಂದೆ ಹೈದರಾಬಾದಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅದೇ ಫ್ಲೈಟಿನಲ್ಲಿ ಪ್ರಕಾಶ್ ರೈ ಕೂಡ ಇದ್ದರು.

ಬೆಂಗಳೂರಿನಲ್ಲಿ ಫ್ಲೈಟ್ ಲ್ಯಾಂಡ್ ಆದ ಬಳಿಕ, ಎಲ್ಲರೂ ಇಳಿಯುವ ತರಾತುರಿಯಲ್ಲಿದ್ದರು.

ಆಗ ನಮ್ಮ ಸೀಟಿನ ಎದುರು ಸೀಟಲ್ಲಿದ್ದ ಒಬ್ಬ ವ್ಯಕ್ತಿ, ತನ್ನ ಸೆಲ್ ಫೋನಿನಿಂದ ಪ್ರಕಾಶ್ ರೈ ವಿಮಾನದ ಹೊರಬಾಗಿಲಿನ ಕಡೆಗೆ ಪ್ರಯಾಣಿಕರ ಗುಂಪಿನಲ್ಲಿ ಹೋಗುತ್ತಿರುವ ವಿಡಿಯೋ ತೆಗೆಯುತ್ತಿದ್ದರು.

ಅದನ್ನು ಗಮನಿಸಿದ ವಿಮಾನದ ಸಿಬ್ಬಂದಿ, ಅವರನ್ನು ಗದರಿಸಿ, ಆ ವಿಡಿಯೋ ಡಿಲೀಟ್ ಮಾಡಲು ಹೇಳಿದರು.

ಅಷ್ಟು ಹೊತ್ತಿಗೆ ಆ ಸೀಟಿನ ಬಳಿ ತಲುಪಿದ್ದ ಪ್ರಕಾಶ್, ವಿಮಾನ ಸಿಬ್ಬಂದಿಗೆ ಅವರು ವಿಮಾನ ಇಳಿದ ಬಳಿಕ ಡಿಲೀಟ್ ಮಾಡ್ತಾರೆ ಅಂತ ಸಮಾಧಾನ ಹೇಳಿ, ತಾನೇ ಸ್ವತಃ ಆ ವ್ಯಕ್ತಿಯ ಸೆಲ್ ಫೋನ್ ತೆಗೆದುಕೊಂಡು, ಅದರಲ್ಲಿ ಆ ವ್ಯಕ್ತಿಯ ಜೊತೆ ಸೆಲ್ಫೀ ತಗೊಂಡು ಫೋನ್ ಹಿಂದಿರುಗಿಸಿ, ಏನೂ ಆಗಿಲ್ಲ ಎಂಬಂತೆ ಇಳಿದು ಹೋದರು. ಆ ಪ್ರಯಾಣಿಕನ ಮುಖ ಹಿಗ್ಗಿ ಹೀರೇಕಾಯಿ ಆಗಿತ್ತು.

ತನ್ನ ಸುತ್ತ ನಡೆಯುತ್ತಿರುವುದನ್ನು ಗಮನಿಸುವ ಮತ್ತು ಅದಕ್ಕೆ ಮಾನವೀಯವಾಗಿ ಪ್ರತಿಕ್ರಿಯಿಸುವ ದೊಡ್ಡಸ್ಥಿಕೆ ದೊಡ್ಡವರೆನಿಸಿಕೊಂಡವರಲ್ಲಿ ಅಪರೂಪ ಆಗುತ್ತಿರುವಾಗ ಪ್ರಕಾಶ್ ರೈ ಅವರ ಈ ರೀತಿಯ ಸೂಕ್ಷ್ಮಗ್ರಾಹಿತ್ವ ನನಗೂ ಇಷ್ಟ ಆಯ್ತು.

-ರಾಜಾರಾಂ ತಲ್ಲೂರು 

ಬೆಂಗಳೂರಿನ ಸ್ವಾನ್ ಪ್ರಿಂಟರ್ಸನಿಂದ ನನ್ನ “ಮೀನುಪೇಟೆಯ ತಿರುವು” ಕವಿತಾ ಸಂಕಲನದ ಮೊದಲ ಹತ್ತು ಪುಸ್ತಕಗಳು ಪ್ರಿಂಟಾಗಿ ನಿನ್ನೆ ಕೈಗೆ ಸಿಕ್ಕಿವೆ. ನಾಳೆ ನಾಡಿದ್ದಿನೊಳಗಾಗಿ ಎಲ್ಲವೂ ಸಿಗಲಿವೆ.

“ಅಧಿಕಾರಸ್ಥರು ಯಾರೇ ಇರಲಿ..ನಾವು ಪ್ರಜೆಗಳು ಪ್ರಶ್ನಿಸುವುದನ್ನು ಮತ್ತು ಅದಕ್ಕೆ ಉತ್ತರ ಕೇಳುವುದನ್ನು ಮುಂದುವರಿಸುತ್ತೇವೆ.. ಪ್ರಶ್ನಿಸುವ ಅಧಿಕಾರಕ್ಕಾಗಿ ನಮ್ಮ ಹೋರಾಟ ಶುರುವಾಗಿದೆ” ಎಂಬ ಜಾಗ್ರತ ಮನೋಭಾವವನ್ನು ದೇಶದ ಎಲ್ಲೆಡೆ ಬಿತ್ತುತ್ತಿರುವ ನಿರ್ಭೀತ ನಾಗರಿಕ ಚಳುವಳಿಯ, ಜೀವಪರ ನಿಲುವಿನ, ಓರ್ವ ನಟನಾಗಿರುವುದಕ್ಕಿಂತಲೂ ತನ್ನ ಪ್ರಕಾಶ್‌ರಾಜ್ ಪ್ರತಿಷ್ಠಾನದ ಮೂಲಕ ಹಲವಾರು ಸಮಾಜೋಪಯೋಗಿ ಕೆಲಸ ಮಾಡುತ್ತಿರುವ ಇಷ್ಟದ ಲೇಖಕ ಪ್ರಕಾಶ ರೈ ನನ್ನ ಪುಸ್ತಕದ ಮೊದಲ ಪ್ರತಿಗೆ ಹಸ್ತಾಕ್ಷರದ ಮೂಲಕ ಬೆಂಗಳೂರಿನಲ್ಲಿ ಶುಭ ಹಾರೈಸಿದ್ದಾರೆ.

ಫೋನ್ ಕೂಡ ಮಾಡಿ ಕವಿತೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಓದುವೆ ಎಂದು ಪುಸ್ತಕ ಕೊಂಡೊಯ್ದಿದ್ದಾರೆ..ಸಾಂಕೇತಿಕ ಬಿಡುಗಡೆ ಕೂಡ ಅಂದುಕೊಂಡಿರುವೆ ನಾನು.

-ರೇಣುಕಾ ರಮಾನಂದ 

2 Responses

  1. ನೂತನ ದೋಶೆಟ್ಟಿ says:

    ರೇಣುಕಾ..ಖುಷಿ ಕಣ

Leave a Reply

%d bloggers like this: