ಸಂಗೀತ ಲೋಕದ ಸೂರ್ಯನ ಉದಯ

ಉಸ್ತಾದ್ ಬಿಸ್ಮಿಲ್ಲಾ ಖಾನರು ಬಿಹಾರ ರಾಜ್ಯದ ದುಮ್ ರಹೋನ್ ಎಂಬ ಪುಟ್ಟ ಪಟ್ಟಣವೊಂದರಲ್ಲಿ ಜನಿಸಿದರು. ಅವರ ಪೂರ್ವಜರು ಮೂಲತಃ ಸಂಗೀತ ಕಲಾವಿದರಾಗಿದ್ದರು. ಬಿಸ್ಮಿಲ್ಲಾ ಖಾನರು ಬಿಹಾರದ ನೆಲದಲ್ಲಿ ಹುಟ್ಟಿ ಬೆಳೆದರೂ ಸಹ ಉತ್ತರ ಪ್ರದೇಶದ ಪವಿತ್ರ ಪುಣ್ಯ ಕ್ಷೇತ್ರವಾದ ವಾರಣಾಸಿ ನಗರವನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಜೀವನಪೂರ್ತಿ ಗಂಗೆಯನ್ನು ತಾಯಿಯಂತೆ, ಅಲ್ಲಿನ ವಿಶ್ವನಾಥನನ್ನು ತಂದೆಯಂತೆ ಪರಿಭಾವಿಸಿ ಬದುಕಿದರು.

ಬಿಹಾರ ರಾಜ್ಯದ ಬಕ್ಸಾರ್ ಜಿಲ್ಲೆಯಲ್ಲಿರುವ ದುಮ್‍ರಹೋನ್ ಎಂಬ ಎಂಬ ಪಟ್ಟ ಪಟ್ಟಣವು ಉತ್ತರ ಪ್ರದೇಶದ ಪೂರ್ವದ ಗಡಿ ಭಾಗದಲ್ಲಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ ಒಂದು ಸಂಸ್ಥಾನವಾಗಿತ್ತು. ರಜಪೂತ ಸಮುದಾಯಕ್ಕೆ ಸೇರಿದ ಬೋಜ್‍ಪುರ್ ಎಂಬ ರಾಜ ಮನೆತನಕ್ಕೆ ಸೇರಿದ್ದ ಈ ಸಂಸ್ಥಾನವು ಬಿಹಾರ ರಾಜ್ಯದಲ್ಲಿರುವ ಮುಂದುವರಿದ ಹಾಗೂ ಸಂವೃದ್ಧಿಯ ಪಟ್ಟಣವಾಗಿತ್ತು. ಹಾಗಾಗಿ ದುಮ್ ರಹೂನ್ ಸಂಸ್ಥಾನದ ರಾಜಮನೆತನ, ಅಲ್ಲಿನ ಅರಮನೆ ಹಾಗೂ ಪ್ರತಿ ನಿತ್ಯ ನಡೆಯುತ್ತಿದ್ದ ಸಂಗೀತ ಮತ್ತು ನೃತ್ಯ ಇವೆಲ್ಲವೂ ಪ್ರಸಿದ್ಧಿಯಾಗಿದ್ದವು.

ಬಿಸ್ಮಿಲ್ಲಾ ಖಾನರ ಅಜ್ಜ, ಮುತ್ತಜ್ಜ ಎಲ್ಲರೂ ಸಹ ದುಮ್‍ರೂಹನ್ ಅರಮನೆಯ ಖಾಯಂ ಸಂಗೀತಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರತಿನಿತ್ಯ ಅರಮನೆಯ ಆವರಣದಲ್ಲಿದ್ದ ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಪ್ರಜಾ ಸಮಯದಲ್ಲಿ ಸಂಗೀತ ನುಡಿಸುವ ಕಾರ್ಯವಲ್ಲದೆ, ಅರಮನೆಯಲ್ಲಿ ಆಚರಿಸುತ್ತಿದ್ದ ಹಬ್ಬಗಳು, ರಾಜಕುಟುಂಬದ ಸದಸ್ಯರ ಜನ್ಮ ದಿನಾಚರಣೆ, ವಿವಾಹಗಳು ಸೇರಿದಂತೆ; ಮಕ್ಕಳ ಜನನ ಮತ್ತು ಅವರಿಗೆ ಅಕ್ಷರಾಭ್ಯಾಸವನ್ನು ಆರಂಭಿಸುವ ದಿನಗಳು ಮತ್ತು ರಾಜಕುಟುಂಬದ ಮನೋರಂಜನೆಗಾಗಿ ಸಂಗೀತ ಹೀಗೆ ವರ್ಷಪೂರ್ತಿ ವಿಶೇಷ ದಿನಗಳಲ್ಲಿ ಶೆಹನಾಯ್ ವಾದ್ಯದ ಮೂಲಕ ಸಂಗೀತವನ್ನು ನುಡಿಸುವ ಕಾಯಕದಲ್ಲಿ ನಿರತರಾಗಿದ್ದರು.

ಅರಮನೆಯ ವತಿಯಿಂದ ಇವರಿಗೆ ನೀಡುತ್ತಿದ್ದ ಮಾಸಾಶನ ಅಥವಾ ತೀರಾ ಕಡಿಮೆ ಇತ್ತು. ಆದರೆ, ಮಹಾರಾಜ ಮತ್ತು ಅವನ ಕುಟುಂಬದ ಸದಸ್ಯರು ಹಬ್ಬ ಹಾಗೂ ಅರಮನೆಯ ಶುಭ ಕಾರ್ಯದ ಸಂದರ್ಭಗಳಲ್ಲಿ ಉಡುಗೊರೆಯಾಗಿ ನೀಡುತ್ತಿದ್ದ ಚಿನ್ನದ ಸರ ಹಾಗೂ ಬೆಳ್ಳಿ ನಾಣ್ಯಗಳು, ರೇಷ್ಮೆ ವಸ್ತ್ರ, ದಿನಸಿ ಸಾಮಗ್ರಿ ಇವುಗಳಿಂದಾಗಿ ಕಲಾವಿದರ ಕೌಟುಂಬಿಕ ಬದುಕು ನೆಮ್ಮದಿಯಿಂದ ಕೂಡಿತ್ತು. ದುಮ್ ರೂಹನ್ ಪಟ್ಟಣದ “ಭೀರಂಗ್ ರಾವುತ್ ಕಿ ಗಲ್ಲಿ” ಎಂಬ ಸಣ್ಣ ಹಾಗೂ ಕಿರುದಾದ ಓಣಿಯ ಮನೆಯೊಂದರಲ್ಲಿ ಬಿಸ್ಮಿಲ್ಲಾ ಖಾನರ ತಂದೆ ಪೈಗಂಬರ್ ಬಕ್ಷ್ ಹಾಗೂ ಅಜ್ಜ ರಸೂಲ್ ಬಕ್ಷ್ ಖಾನ್ ವಾಸವಾಗಿದ್ದುಕೊಂಡು ತಂದೆ-ಮಗ ಇಬ್ಬರೂ ಅರಮನೆಯ ಸಂಗೀತಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಅರಮನೆಯ ಸಂಪ್ರದಾಯದ ಪ್ರಕಾರ ಶೆಹನಾಯ್ ವಾದ್ಯಗಳು ಮತ್ತು ವಾದ್ಯ ನುಡಿಸುತ್ತಿದ್ದ ಕಲಾವಿದರುಗಳಿಗೆ ಅರಮನೆಗಾಗಲಿ ಅಥವಾ ಸಭಾಂಗಣ ಮತ್ತು ದೇವಸ್ಥಾನಗಳ ಒಳಭಾಗಕ್ಕೆ ಪ್ರವೇಶವಿರಲಿಲ್ಲ. ಈ ಪದ್ಧತಿ ಕೇವಲ ದುಮ್ ರಹೋನ್ ಸಂಸ್ಥಾನಕ್ಕೆ ಮಾತ್ರ ಸೀಮಿತವಾಗಿರದೆ, ಬಹುತೇಕ ಉತ್ತರ ಭಾರತದ ಸೇರಿದಂತೆ, ರಾಜಸ್ಥಾನ, ಗುಜರಾತ್ ಮತ್ತು ಬಿಹಾರ ರಾಜ್ಯಗಳಲ್ಲಿ ರೂಢಿಯಲ್ಲಿತ್ತು.

ಶೆಹನಾಯ್ ಕಲಾವಿದರಿಗಾಗಿ ವಿಶೇಷವಾಗಿ ಅರಮನೆಗಳ ದ್ವಾರದಲ್ಲಿ ಮತ್ತು ಹವೇಲಿ ಎನ್ನುವ ರಾಜ ಮಹಾರಾಜರುಗಳ ವಿಶ್ರಾಂತಿ ಗೃಹಗಳ ಬಾಲ್ಕನಿಯಲ್ಲಿ ನಿರ್ಮಿಸಲಾದ “ನವ್‍ಬತ್ಕಾನ” ಎಂಬ ಸ್ಥಳದಲ್ಲಿ ಕುಳಿತು ಸಂಗೀತ ನುಡಿಸಬೇಕಿತ್ತು. ಅದೇ ರೀತಿಯಲ್ಲಿ ದೇವಸ್ಥಾನಗಳ ಬಲಪಾಶ್ರ್ವದಲ್ಲಿ ಎಂಟು ಅಥವಾ ಹತ್ತು ಮಂದಿ ಕಲಾವಿದರು ಕೂರಲು ಅನುಕೂಲವಾಗವಂತೆ ನಿರ್ಮಿಸಿದ “ಬರದಾರಿ” ಎಂದು ಕರೆಯಲಾಗುತ್ತಿದ್ದ ಮಂಟಪಗಳಲ್ಲಿ ಕುಳಿತು ಸಂಗೀತವನ್ನು ನುಡಿಸಬೇಕಿತ್ತು.

ಒಮ್ಮೆ ಬಿಸ್ಮಿಲ್ಲಾಖಾನರ ಅಜ್ಜಿಯು ತನ್ನ ಪತಿ ಹಾಗೂ ಮಗನೊಂದಿಗೆ ( ಬಿಸ್ಮಿಲ್ಲಾ ಖಾನರ ತಂದೆ) ಅರಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತನ್ನ ಕುಟುಂಬದ ವೃತ್ತಿಯಾದ ಶೆಹನಾಯ್ ಸಂಗೀತವನ್ನು ಅಸ್ಪೃಶ್ಯತೆಯಿಂದ ಕಾಣುವ ರಾಜಮನೆತನದ ರೀತಿ ನೀತಿಗಳ ಬಗ್ಗೆ ಸಿಡಿಮಿಡಿಗೊಂಡಿದ್ದರು. ಆದರೆ, ತನ್ನ ಕುಟುಂಬಕ್ಕೆ ನಿಗದಿತ ಆದಾಯ ತಂದುಕೊಡುವ ರಾಜಮನೆತನದ ಸಂಗೀತಗಾರರ ವೃತ್ತಿಯ ಘನತೆಯನ್ನು ನೆನಪಿಸಿಕೊಂಡು ಮೌನಕ್ಕೆ ಶರಣಾದರು.

ಅವರ ಈ ಮೌನಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪ್ರತಿಫಲ ದೊರೆಯಿತು. ಯಾವ ವಾದ್ಯವನ್ನು ಈ ಸಮಾಜ ಅಸ್ಪೃಶ್ಯತೆಯಿಂದ ನೋಡಿತ್ತೋ. ಅದೇ ಶೆಹನಾಯ್ ವಾದ್ಯವನ್ನು ಅವರ ಮೊವ್ಮ್ಮಗ ಬಿಸ್ಮಿಲ್ಲಾ ಖಾನ್ ಇಡೀ ಜಗತ್ತು ಪ್ರೀತಿ ಮತ್ತು ಗೌರವದಿಂದ ಮ್ಮ ವ್ರ್ಮೆಗನನ್ನು ಬಿಸ್ಮಿಲ್ಲಾ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಕಾರಣದಿಂದಾಗಿ ಬಿಸ್ಮಿಲ್ಲಾಖಾನ್ ಎಂಬ ಹೆಸರು ಶಾಶ್ವತವಾಗಿ ಉಳಿಯಿತು.

ಪೈಗಂಬರ್ ಭಕ್ಷ್ ಖಾನ್ ದಂಪತಿಗಳಿಗೆ ಮೊದಲ ಪುತ್ರನಾಗಿ ಶಂಶುದ್ದೀನ್ ಖಾನ್ ಜನಿಸಿದ್ದರು. ಎರಡನೆಯ ಪುತ್ರನಾಗಿ ಬಿಸ್ಮಿಲ್ಲಾ ಖಾನ್ ಜನಿಸಿದ್ದರಿಂದ ಅವರಿಗೆ ಖಮರುದ್ದೀನ್ ಎಂದು ನಾಮಕರಣ ಮಾಡಲಾಗಿತ್ತು. ತಮ್ಮ ಪುತ್ರರಿಬ್ಬರನ್ನು ವಂಶಪಾರಂಪರ್ಯವಾಗಿ ಬಂದಿರುವ ದುಮ್‍ರಹೋನ್ ಅರಮನೆಯ ಸಂಗೀತಗಾರರನ್ನಾಗಿ ಮಾಡುವ ಬದಲಾಗಿ ಅವರನ್ನು ವಾರಣಾಸಿಗೆ ಕಳಿಸಿ ಉತ್ತಮ ಸಂಗೀತಗಾರರನ್ನಾಗಿ ಮಾಡುವ ಕನಸಿತ್ತು. ಬಿಸ್ಮಿಲ್ಲಾಖಾನರ ತಾಯಿ ಮಿಥಾನ್ ಅವರು ಸಹ ವಾರಾಣಾಸಿ ನಗರದ ಸಂಗೀತ ಮನೆತನದಿಂದ ಬಂದವರಾಗಿದ್ದು, ಆಕೆಯ ತಂದೆ, ಸಹೋದರರರೆಲ್ಲರೂ ವಾರಣಾಸಿಯ ಹಿಂದೂ ದೇವಾಲಯಗಳಲ್ಲಿ ಶೆಹನಾಯ್ ನುಡಿಸುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.

ದುಮ್‍ರೂಹನ್ ಪಟ್ಟಣದ ಸಂಗೀತಗಾರರ ಕುಟುಂಬದ ಜನಿಸಿದ ಬಿಸ್ಮಿಲ್ಲಾ ಖಾನರ ಪಾಲಿಗೆ ಸದಾ ಕೇಳುತ್ತಿದ್ದ ಶೆಹನಾಯ್ ವಾದನವು ಅವರ ಪಾಲಿಗೆ ತೊಟ್ಟಿಲಿನ ಜೋಗುಳವಾಗಿತ್ತು. ದುಮ್ ರಹ್ರೋನ್ ಪಟ್ಟಣವು ಕೇವಲ ಬಿಸ್ಮಿಲ್ಲಾಖಾನದ ಹುಟ್ಟಿನಿಂದ ಪ್ರಸಿದ್ಧಿಯಾದುದಲ್ಲ, ಅದು ಮೊದಲಿನಿಂದಲೂ ಶೆಹನಾಯ್ ಮತ್ತು ಹುಕ್ಕಾ ಸೇದುವೆ ಕೊಳವೆಗಳಿಗೆ ಬಳಕೆ ಮಾಡುತ್ತಿದ್ದ ನರ್ಕತ್ ಎಂಬ ಬಿದಿರು ಅಥವಾ ಲಾಳದ ಕಡ್ಡಿಯಂತಹ ನರ್ಕತ್ ಎಂಬ ಗಿಡಕ್ಕೆ ಪ್ರಸಿದ್ಧಿಯಾಗಿತ್ತು. ಪಟ್ಟಣದ ಸನೀಹದಲ್ಲಿ ಹರಿಯುತ್ತಿದ್ದ ಹಾಗೂ ಗಂಗಾ ನದಿಗೆ ಸೇರುತ್ತಿದ್ದ ಸೋನೆ ಎಂಬ ಉಪನದಿಯ ಇಕ್ಕೆಲಗಳಲ್ಲಿ ಬೆಳೆಯುತ್ತಿದ್ದ ಈ ಕಡ್ಡಿಯನ್ನು ಶೆಹನಾಯ್ ವಾದ್ಯಕ್ಕೆ ಬಳಕೆ ಮಾಡಲಾಗುತ್ತಿತ್ತು. ಬಾಲPನಾಗಿದ್ದ ಸಂದರ್ಭದಲ್ಲಿÀ ಬಿಸ್ಮಿಲ್ಲಾ ಖಾನರು ತನ್ನ ಸಹೋದರರು ಮತ್ತು ಗೆಳೆಯರ ಜೊತೆಗೂಡಿ ನದಿ ಅಥವಾ ಸರೋವರದ ಬಳಿ ಹೋಗಿ ಅಲ್ಲಿ ಬೆಳೆಯುತ್ತಿದ್ದ ನರ್ಕತ್ ಕಡ್ಡಿಗಳನ್ನು ಮುರಿದು ಕೊಂಡು, ಅದನ್ನು ಪೀಪಿಯಂತೆ ಊದುವ ಅಭ್ಯಾಸ ಮಾಡುತ್ತಿದ್ದರು.

ಒಮ್ಮೆ ಬಿಸ್ಮಿಲ್ಲಾಖಾನರ ತಾಯಿ ಮಿಥಾನ್ ಖಾನರು ತಮ್ಮ ಪುತ್ರರಿಬ್ಬರನ್ನು ಕರೆದುಕೊಂಡು ರಂಜಾನ್ ಹಬ್ಬದ ಆಚರಣೆಗಾಗಿ ತವರು ಮನೆಯಾದ ವಾರಾಣಸಿ ನಗರಕ್ಕೆ ಬಂದರು. ಆ ವೇಳೆಗೆ ಬಿಸ್ಮಿಲ್ಲಾಖಾನರಿಗೆ ಮೂರು ವರ್ಷ ವಯಸ್ಸಾಗಿತ್ತು. ತನ್ನ ತಂದೆ ಹಾಗೂ ಅಜ್ಜನ ಹಾಗೆ ವಾರಣಾಸಿ ನಗರದ ತಾಯಿಯ ಮನೆಯಲ್ಲಿ ಹಿರಿಯ ಹಾಗೂ ಕಿರಿಯ ಸೋದರ ಮಾವಂದಿರು ಶೆಹನಾಯ್ ಅಭ್ಯಾಸ ಮಾಡುವುದನ್ನು ಗಮನಿಸಿದರು. ಕಿರಿಯ ಮಾಮನಾದ ಆಲಿ ಭಕ್ಷ್ ಖಾನರು ಅಭ್ಯಾಸ ಮಾಡುತ್ತಿದ್ದ ಕೋಣೆಯ ಬಳಿ ತೆರಳಿ ಬಾಗಿಲಲ್ಲಿ ನಿಂತು ತದೇಕ ಚಿತ್ತದಿಂದ ಗಮನಿಸುತ್ತಿದ್ದರು.

ಇದನ್ನು ಗಮನಿಸಿದ್ದ ಆಲಿ ಬಕ್ಸ್ ಅವರು ಒಮ್ಮೆ ತನ್ನ ಸಹೋದರಿಯ ಜೊತೆ ಮಾತನಾಡುತ್ತಾ “ ಅಕ್ಕಾ ನಿನ್ನ ಮಗ ಮುಂದಿನ ದಿನಗಳಲ್ಲಿ ಒಳ್ಳೆಯ ಶೆಹನಾಯ್ ಕಲಾವಿದನಾಗುವ ಸಾಧ್ಯತೆ ಇದೆ. ಅವನಿಗೆ ಈ ವಾದ್ಯದ ಬಗ್ಗೆ ತೀವ್ರವಾದ ಆಸಕ್ತಿ ಇದ್ದಂತೆ ಕಾಣುತ್ತಿದೆ” ಎಂದು ನುಡಿದರು. ಇದಕ್ಕೆ ಪ್ರತಕ್ರಿಯಿಸಿದ ಬಿಸ್ಮಿಲ್ಲಾ ಖಾನರ ತಾಯಿ “ ತಮ್ಮಾ, ನೀನೇ ನನ್ನ ಮಗನಿಗೆ ಗುರುವಾಗಬೇಕೆಂಬುದು ನನ್ನ ಆಸೆ” ಎಂದು ತಮ್ಮ ಮನದ ಇಂಗಿತವನ್ನು ವ್ಯಕ್ತ ಪಡಿಸಿದರು. ಸಹೋದರಿಯ ಮಾತಿಗೆ ಸಮ್ಮತಿಸಿದ ಉಸ್ತಾದ್ ಆಲಿಭಕ್ಸ್ ಖಾನ್ ರವರು ತಮ್ಮ ಪುಟ್ಟ ಸೋದರಳಿಯ ಬಿಸ್ಮಿಲ್ಲಾ ಖಾನರನ್ನು ಶಿಷ್ಯನಾಗಿ ಸ್ವೀಕಾರ ಮಾಡಿದರು.

ಬಾಲಕ ಬಿಸ್ಮಿಲ್ಲಾ ಖಾನ್ ವಾರಣಾಸಿ ನಗರದ ಸೋದರ ಮಾವನ ಮನೆಯಲ್ಲಿ ಸಂಗೀತದ ವಾತಾವರಣದಲ್ಲಿ ಬೆಳೆಯುತ್ತಿದ್ದಂತೆ, ಅವರೊಳಗಿನ ಸಂಗೀತದ ಆಸಕ್ತಿ ಇಮ್ಮುಡಿಗೊಂಡಿತು. ತುಂಬಿದ ಅವಿಭಕ್ತ ಕುಟುಂಬವಾದ ಅಜ್ಜನ ಮನೆಯಲ್ಲಿ ಬಲಭಾಗದ ಕೊಠಡಿಯಲ್ಲಿ ಹಿರಿಯ ಸೋದರಮಾವ ವಿಲಾಯತ್ ಹುಸೇನ್ ಅಭ್ಯಾಸದಲ್ಲಿ ತೊಡಗಿದ್ದರೆ, ಎಡಭಾಗದ ಕೊಠಡಿಯಲ್ಲಿ ಬಿಸ್ಮಿಲ್ಲಾ ಖಾನರು ಪ್ರೀತಿಯಿಂದ ಮಾಮು ಎಂದು ಕರೆಯುತ್ತಿದ್ದ ಕಿರಿಯ ಸೋದರ ಮಾವ ಆಲಿಭಕ್ಸ್ ರವರು ಅಭ್ಯಾಸ ಮಾಡುತ್ತಿದ್ದರು.

ಸೋದರ ಮಾವಂದರಿಬ್ಬರೂ ವಾರಾಣಸಿ ನಗರದ ಪ್ರಖ್ಯಾತ ಶೆಹನಾಯ್ ಕಲಾವಿದರಾಗಿದ್ದರೂ ಸಹ ಪ್ರತಿ ದಿನ ನಾಲ್ಕು ಅಥವಾ ಐದು ಗಂಟೆಗಳ ಕಾಲ ಮನೆಯ ಕೊಠಡಿಯ ಏಕಾಂತ ಸ್ಥಳದಲ್ಲಿ ಕುಳಿತು ಧ್ಯಾನಸ್ಥ ಮನಸ್ಸಿನಲ್ಲಿ ಅಭ್ಯಾಸ ಮಾಡುತ್ತಿದ್ದದು ಬಾಲಕನಾಗಿದ್ದ ಬಿಸ್ಮಿಲ್ಲಾ ಖಾನರಿಗೆ ಸೋಜಿಗದ ವಿಷಯವಾಗಿತ್ತು. ಮನೆಯ ಉಳಿದ ಮಕ್ಕಳು ಆಟ ಇಲ್ಲವೆ ಪಾಠಗಳಲ್ಲಿ ತಲ್ಲೀನರಾಗುತ್ತಿದ್ದರೆ, ಬಿಸ್ಮಿಲ್ಲಾಖಾನರು ಮಾವಂದಿರ ಕೊಠಡಿಯ ಹೊಸ್ತಿಲ ಬಳಿ ಕುಳಿತು ತದೇಕ ಚಿತ್ತದಿಂದ ಅವರು ನುಡಿಸುತ್ತಿದ್ದ ಶೆಹನಾಯ್ ವಾದನವನ್ನು ಆಲಿಸುತ್ತಿದ್ದರು. ಹಿರಿಯ ಸಹೋದರ ಮಾವ ವಿಲಾಯತ್ ಹುಸೇನ್ ಅವರು ತಾನ್ ಮತ್ತು ಲಯ ಇವುಗಳಲ್ಲಿ ವಿಶೇಷ ಪರಿಣತಿ ಹೊಂದಿದ್ದರು.

ಸೋದರಳಿಯ ಬಿಸ್ಮಿಲ್ಲಾ ಖಾನರನ್ನು ಶಿಷ್ಯನನ್ನಾಗಿ ಸ್ವೀಕರಿಸಿದ್ದ ಆಲಿ ಭಕ್ಸ್ ಅವರು ಪ್ರತಿ ದಿನ ಮುಂಜಾನೆ ಐದು ಗಂಟೆಗೆ ಎದ್ದು ವಾರಣಾಸಿ ನಗರದ ವಿಷ್ಣು ದೇವಾಲಯಕ್ಕೆ ಶೆಹನಾಯ್ ನುಡಿಸಲು ತೆರಳುತ್ತಿದ್ದರು. ಅವರು ವಿಷ್ಣು ದೇಗುಲದಲ್ಲಿ ಪ್ರತಿ ದಿನ ದಿನ ಬೆಳಗಿನ ಪ್ರಥಮ ಪೂಜೆ, ಮಧ್ಯಾಹ್ನದ ಪೂಜೆ ಮತ್ತು ಸಂಜೆಯ ಪ್ರಜಾ ಕಾರ್ಯಕ್ರಮದಲ್ಲಿ ಶೆಹನಾಯ್ ನುಡಿಸುವ ವೃತ್ತಿಯನ್ನು ಕೈಗೊಂಡಿದ್ದರು. ಅವರಿಗೆ ಈ ಕಾಯಕಕ್ಕೆ ಪ್ರತಿ ತಿಂಗಳು ನಾಲ್ಕು ರೂಪಾಯಿ ವೇತನವನ್ನು ನೀಡಲಾಗುತ್ತಿತ್ತು. ಈ ಮೊತ್ತ ಈಗ ಕನಿಷ್ಟ ಎನಿಸಿದರೂ ಸಹ, ಆ ಕಾಲಕ್ಕೆ ಒಂದು ಕುಟುಂಬ ನೆಮ್ಮದಿಯಿಂದ ಜೀವನ ನಿರ್ವಹಣೆ ಮಾಡಲು ಸಾಕಾಗುವಷ್ಟು ಮೊತ್ತವಾಗಿತ್ತು. ಬಿಸ್ಮಿಲ್ಲಾ ಖಾನರು ಸಹ ಬೆಳಗಿನ ಜಾವ ಮುಂಜಾನೆ ಎದ್ದು ಮಾವನ ಜೊತೆ ದೇಗುಲಕ್ಕೆ ಹೋಗಿ ಅವರ ಪಕ್ಕದಲ್ಲಿ ಕುಳಿತು ಅವರು ಮುಂಜಾನೆಯ ಪ್ರಥಮ ಪೂಜೆಗೆ ನುಡಿಸುತ್ತಿದ್ದ ಲಲಿತ್ ಅಥವಾ ಜೋಗಿಯ ರಾಗದ ಸಂಗೀತವನ್ನು ಆಲಿಸುತ್ತಿದ್ದರು.

|ಇನ್ನೂ ಇದೆ ।

ಚಿತ್ರಗಳು: ರಘು ರಾಯ್ 

Leave a Reply