ಮತ್ತೆ ರಂಗದ ಮೇಲೆ ‘ಸಂದರ್ಭ’

ರಾಜಕೀಯ ವಿಡಂಬನಾತ್ಮಕ ನಾಟಕ

“ಸಂದರ್ಭ” ಮತ್ತೆ ರಂಗದ ಮೇಲೆ

ಇಂದಿನ ರಾಜಕೀಯ ಸನ್ನಿವೇಶದಲ್ಲಿರುವ ಸೋಗಲಾಡಿತನ, ಕುಟಿಲೋಪಾಯಗಳು ಮತ್ತು ಸಂಚುಗಳ ನಿಗೂಢತೆಯನ್ನು ಪೊರೆ ಪೊರೆಯಾಗಿ ಬಿಚ್ಚಿಡುತ್ತಾ , ರಾಜಕೀಯ ವಿಮರ್ಶಾ ಪ್ರಜ್ಞೆ ಹಾಗೂ ಅಂತರಂಗ ಶೋಧದ ಮಾನವೀಯ ಸಂಶೋಧನಾಶೀಲತೆಯ ಸ್ಥರಗಳಲ್ಲಿಯೂ ಒಂದು ಅನುಭವವನ್ನು ಕಟ್ಟುತ್ತಾ ಹೋಗುವ “ಸಂದರ್ಭ” ರಂಗದ ಮೇಲೆ ಸಾಧಿಸಿದ ಯಶಸ್ಸು ಗಮನಾರ್ಹ

ಸಂಯುಕ್ತ ಕರ್ನಾಟಕ

ನಾಲ್ಕು ದಶಕಗಳ ಹಿಂದೆ ಬಿ.ವಿ. ವೈಕುಂಠರಾಜುರವರು ರಂಗಸಂಪದಕ್ಕಾಗಿಯೇ ರಚಿಸಿದ ಶಾಂತವೇರಿ ಗೋಪಾಲಗೌಡರ ರಾಜಕೀಯ ಬದುಕನ್ನಾಧರಿಸಿದ “ಸಂದರ್ಭ” ನಾಟಕವನ್ನು ಅಶೋಕ ಬಾದರದಿನ್ನಿಯವರು ರಂಗಸಂಪದದ ಕಲಾವಿದರಿಗೆ ನಿರ್ದೇಶಿಸಿದ್ದರು.

ರಾಜಕೀಯ ಪಲ್ಲಟಗಳು ಅತಿರೇಕವಾಗಿರುವ ಪ್ರಸ್ತುತ ಸಂದರ್ಭದಲ್ಲಿ “ಸಂದರ್ಭ” ನಾಟಕವನ್ನು ಡಿ.ಟಿ.ಚನ್ನಕೇಶವರವರ ನಿರ್ದೇಶನದಲ್ಲಿ ಹೊಸ ತಲೆಮಾರಿನ ಕಲಾವಿದರನ್ನು ಸೇರಿಸಿಕೊಂಡು ರಂಗಸಂಪದ ರಂಗದ ಮೇಲೆ ತರುತ್ತಿದೆ ಎಂದು ತಿಳಿಸಲು ಸಂತಸವಾಗುತ್ತಿದೆ.

– ರಂಗಸಂಪದ

Leave a Reply